ಹಾಡಹಗಲೇ ಗ್ರಾಮಕ್ಕೆ ನುಗ್ಗಿ ಮನೆಯ ಛಾವಣಿ ಧ್ವಂಸಗೊಳಿಸಿದ ಸಲಗ: ವಿಡಿಯೋ - ELEPHANT ENTERED INTO VILLAGE
🎬 Watch Now: Feature Video
Published : Nov 14, 2024, 3:28 PM IST
|Updated : Nov 14, 2024, 3:36 PM IST
ಮೈಸೂರು : ಹಾಡಹಗಲೇ ಒಂಟಿ ಸಲಗವೊಂದು ಗ್ರಾಮಕ್ಕೆ ನುಗ್ಗಿ ಬೆಳೆಗಳನ್ನ ನಾಶ ಮಾಡಿ, ಮನೆಯ ಛಾವಣಿಯನ್ನ ಧ್ವಂಸ ಮಾಡಿರುವ ಘಟನೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವೀರನಹೊಸಹಳ್ಳಿ ಅರಣ್ಯ ಪ್ರದೇಶದ ನಂಜಯ್ಯನ ಕಾಲೋನಿಯಲ್ಲಿ ಬುಧವಾರ ನಡೆದಿದೆ.
ಹೆಚ್. ಡಿ ಕೋಟೆ ತಾಲೂಕಿನ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ, ವೀರನ ಹೊಸಹಳ್ಳಿ ಅರಣ್ಯ ಪ್ರದೇಶದ ಚಕ್ಗೊಂಡನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಂಜಯ್ಯನ ಹುಂಡಿ ಗ್ರಾಮಕ್ಕೆ ಒಂಟಿ ಸಲಗವೊಂದು ಬುಧವಾರ ಮಧ್ಯಾಹ್ನ ಬಂದು ಗ್ರಾಮದ ರೈತರ ಜಮೀನಿನಲ್ಲಿ ಬೆಳೆದಿದ್ದ ಬಾಳೆ, ತೊಗರಿ ಹಾಗೂ ಇತರ ಬೆಳೆಗಳನ್ನ ತಿಂದಿದೆ. ಜತೆಗೆ ಬೆಳೆಗಳನ್ನ ನಾಶಮಾಡಿ ಗ್ರಾಮದ ಅಶೋಕ ಎಂಬುವವರ ಮನೆಗೆ ಹಿಂದಿನಿಂದ ಏಕಾಏಕಿ ನುಗ್ಗಿ ತನ್ನ ದಂತಗಳಿಂದ ಮನೆಯ ಛಾವಣಿ ಧ್ವಂಸಗೊಳಿಸಿದೆ.
ಸುಮಾರು 3 ಗಂಟೆಗೂ ಹೆಚ್ಚು ಕಾಲ ಗ್ರಾಮದ ಸುತ್ತಮುತ್ತ ಓಡಾಡುತ್ತಿದ್ದ ಒಂಟಿ ಸಲಗದ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಆಗಮಿಸಿದ ಆನೆ ಕಾರ್ಯಪಡೆ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಒಂಟಿ ಸಲಗವನ್ನ ಕಾಡಿಗೆ ಅಟ್ಟಿದರು.
ಇದನ್ನೂ ಓದಿ : ಹಾಸನ: ಒಂಟಿ ಕಾಡಾನೆ ಸಂಚಾರಕ್ಕೆ ಭಯಭೀತರಾದ ಶಾಲಾ ಮಕ್ಕಳು