ETV Bharat / health

ಪ್ರತಿದಿನ ರಾತ್ರಿ ರೀಲ್ಸ್ ನೋಡುತ್ತೀರಾ? ನಿಮ್ಮ ಆರೋಗ್ಯದ ಮೇಲೆ ಅಡ್ಡಪರಿಣಾಮ: ಸಂಶೋಧನೆ - WATCHING REELS AT NIGHT SIDE EFFECT

ರಾತ್ರಿಯಲ್ಲಿ ರೀಲ್‌ಗಳನ್ನು ನೋಡುವ ಜನರಲ್ಲಿ ಅಧಿಕ ರಕ್ತದೊತ್ತಡದ ಅಪಾಯ ಹೆಚ್ಚಾಗಿರುತ್ತದೆ ಎಂದು ಬ್ರಿಟಿಷ್ ಮೆಡಿಕಲ್ ಜರ್ನಲ್ ಅಧ್ಯಯನವು ಬಹಿರಂಗಪಡಿಸಿದೆ.

WATCHING REELS AT NIGHT SIDE EFFECT  REELS WATCHING SIDE EFFECTS NIGHT  WATCHING REELS AT NIGHT GOOD OR BAD  WATCHING REELS SIDE EFFECTS
ಸಾಂದರ್ಭಿಕ ಚಿತ್ರ (Getty Images)
author img

By ETV Bharat Health Team

Published : Feb 13, 2025, 12:26 PM IST

Watching Reels at Night Side Effects: ಇಂದಿನ ಆಧುನಿಕ ಯುಗದಲ್ಲಿ ಸ್ಮಾರ್ಟ್ ಫೋನ್ ಪ್ರತಿಯೊಬ್ಬರ ಬಳಿಯಲ್ಲಿ ಇದ್ದೇ ಇರುತ್ತದೆ. ಅದರಲ್ಲೂ ಯೂಟ್ಯೂಬ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ನಂತಹ ಸೋಶಿಯಲ್​ ಮೀಡಿಯಾ ಅಪ್ಲಿಕೇಶನ್‌ಗಳ ಬಳಕೆ ಅಪಾರವಾಗಿ ಹೆಚ್ಚಾಗಿದೆ. ಹೆಚ್ಚಿನ ಯುವಕರು ಅಂತರ್ಜಾಲದಲ್ಲಿ ತಮ್ಮ ಹೆಚ್ಚು ಸಮಯ ಕಳೆಯುತ್ತಾರೆ. ಓದುವುದು, ಕಚೇರಿಯ ಒತ್ತಡ, ಮನೆಗೆಲಸ ಹೀಗೆ ತಮ್ಮ ಎಲ್ಲಾ ಕಾರ್ಯಗಳನ್ನು ಮರೆತು ರಾತ್ರಿ ಹೊತ್ತು ಸೋಶಿಯಲ್ ಮೀಡಿಯಾಗಳಲ್ಲಿ ರೀಲ್ಸ್​ ನೋಡುತ್ತಾ ಕಾಲ ಕಳೆಯುತ್ತಾರೆ. ಹೀಗೆ ರೀಲ್ಸ್​ ನೋಡುವ ಕಾರ್ಯವನ್ನು ಮುಂದುವರಿಸಿದರೆ, ಇದು ಮಾನಸಿಕ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡುತ್ತಾರೆ.

ಇತ್ತೀಚೆಗೆ ಚೀನಾದಲ್ಲಿ ಸುಮಾರು 4,000 ಜನರ ಮೇಲೆ ನಡೆಸಿದ ಅಧ್ಯಯನದಲ್ಲಿ ರಾತ್ರಿಯಲ್ಲಿ ರೀಲ್ಸ್​ ವೀಕ್ಷಿಸುವ ಯುವ ಮತ್ತು ಮಧ್ಯವಯಸ್ಕ ಜನರಲ್ಲಿ ರಕ್ತದೊತ್ತಡ ಹೆಚ್ಚಾಗಿದೆ ಎಂಬುದು ತಿಳಿದುಬಂದಿದೆ. ಬಿಎಂಸಿ ಪಬ್ಲಿಕ್ ಹೆಲ್ತ್ ಜರ್ನಲ್‌ನಲ್ಲಿ ಪ್ರಕಟವಾದ 'Association between the screen time spent watching short videos at bedtime and essential hypertension in young and middle-aged people: a cross-sectional study' ಎಂಬ ಅಧ್ಯಯನದಲ್ಲಿ ಈ ವಿಷಯ ತಿಳಿದಿದೆ. (ಸಂಶೋಧನಾ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ).

WATCHING REELS AT NIGHT SIDE EFFECT  REELS WATCHING SIDE EFFECTS NIGHT  WATCHING REELS AT NIGHT GOOD OR BAD  WATCHING REELS SIDE EFFECTS
ಪ್ರತಿದಿನ ರಾತ್ರಿ ರೀಲ್ಸ್ ನೋಡುತ್ತೀರಾ? (freepik)

ಅನೇಕ ಜನರು ಏಕಾಂಗಿಯಾಗಿ ಇಲ್ಲವೇ ಕುಟುಂಬದೊಂದಿಗೆ ರೀಲ್ಸ್​ ವೀಕ್ಷಿಸುತ್ತಾರೆ. ರಾತ್ರಿ ವೇಳೆ ಸಿಸ್ಟಂನಲ್ಲಿ ಕೆಲಸ ಮಾಡುವರು ಹಾಗೂ ಟಿವಿ ನೋಡುವವರಿಗಿಂತಲೂ ಮೊಬೈಲ್​ನಲ್ಲಿ ರೀಲ್ಸ್​ ನೋಡುವವರೇ ಹೆಚ್ಚು. ಇದು ದಿನದಿಂದ ದಿನಕ್ಕೆ ಚಟವಾಗಿ ಬದಲಾಗುತ್ತದೆ ಎಂದು ತಜ್ಞರು ತೀವ್ರ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಆ ಸಮಯದಲ್ಲಿ ಫೋನ್ ಇಲ್ಲದಿದ್ದರೆ, ರೀಲ್ಸ್​ ವೀಕ್ಷಿಸಲು ಸಾಧ್ಯವಾಗದಿದ್ದರೂ, ಕಿರಿಕಿರಿ ಮತ್ತು ಅಸಹನೆ ಅವರಲ್ಲಿ ಮೂಡುತ್ತದೆ ಎಂದು ಅವರು ವಿವರಿಸುತ್ತಾರೆ.

ಅದರಲ್ಲೂ ರೀಲ್ಸ್ ವೀಕ್ಷಿಸುವುದನ್ನು ರೂಢಿಯಾಗಿಸಿಕೊಂಡರೆ, ಅದರ ಪರಿಣಾಮ ಜೀವನಶೈಲಿಯ ಮೇಲೆ ಹೆಚ್ಚು. ಇದರಿಂದ ಭಾವನೆಗಳು ಹತೋಟಿಗೆ ಬರುವುದಿಲ್ಲ. ರೀಲ್ಸ್ ವೀಕ್ಷಿಸುವುದನ್ನು ಬಿಟ್ಟರೆ ಏನೋ ಕಳೆದುಕೊಂಡಂತೆ ಆಗುತ್ತದೆ ಎಂದು ಸಂಶೋಧನೆಯು ತಿಳಿಸುತ್ತದೆ. ಈ ಸೋಶಿಯಲ್​ ಮೀಡಿಯಾದ ವಿಷಯಗಳ ಪ್ರಭಾವದಿಂದ ಜನರು ಕೆಲವೊಮ್ಮೆ ಸಂತೋಷವಾಗಿರುತ್ತಾರೆ. ಮತ್ತೆ ಕೆಲವೊಮ್ಮೆ ಒತ್ತಡ ಹಾಗೂ ಆತಂಕ ಅವರಿಗೆ ಕಾಡುತ್ತದೆ ಎಂಬುದು ಬಹಿರಂಗವಾಗಿದೆ. 20 ರಿಂದ 40 ವರ್ಷ ವಯಸ್ಸಿನವರು ಖಿನ್ನತೆಗೆ ಒಳಗಾಗಲು ಮುಖ್ಯ ಕಾರಣವೇನೆಂದರೆ, ರಾತ್ರಿ ಸಮಯದಲ್ಲಿ ಫೋನ್ ವೀಕ್ಷಿಸಿ ತುಂಬಾ ಲೇಟ್ ಆಗಿ ಮಲಗುತ್ತಾರೆ. ಇದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ ಎಂದು ಅಧ್ಯಯನವು ತೋರಿಸುತ್ತದೆ.

ಪ್ರತಿದಿನ ರೀಲ್ಸ್ ನೋಡುತ್ತೀರಾ? (freepik)

ಫೋನ್‌ನ ನೀಲಿ ಬೆಳಕು ನಿದ್ರೆಯ ವೇಳಾಪಟ್ಟಿಯಲ್ಲಿ ವ್ಯತ್ಯಾಸವನ್ನುಂಟು ಮಾಡುತ್ತದೆ. ಇದರಿಂದ ಮೆಲಟೋನಿನ್ ಎಂಬ ಹಾರ್ಮೋನ್ ಬಿಡುಗಡೆಯಾಗುತ್ತದೆ. ಇದರ ಪರಿಣಾಮವಾಗಿ, ನಿದ್ರೆಗೆ ತೊಂದರೆಯಾಗುತ್ತದೆ ಹಾಗೂ ದೇಹವು ಆಯಾಸಗೊಳ್ಳುತ್ತದೆ. ಇದಲ್ಲದೇ ಒಳ್ಳೆಯ ಪುಸ್ತಕ ಓದುವುದು, ಕುಟುಂಬದ ಸದಸ್ಯರೊಂದಿಗೆ ಕಾಲಕಳೆಯುವುದು, ಸಂಗೀತ ಆಲಿಸುವುದು ಇವುಗಳಿಂದ ಸುಖ ನಿದ್ದೆ ಪಡೆಯಬಹುದು ಎಂದು ತಜ್ಞರು ಸಲಹೆ ನೀಡುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಈ ವೆಬ್​ಸೈಟ್​ನ್ನು ವೀಕ್ಷಿಸಬಹುದು:

https://pubmed.ncbi.nlm.nih.gov/39789512/

ಓದುಗರಿಗೆ ಮುಖ್ಯ ಸೂಚನೆ : ಈ ಲೇಖನದಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ, ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಉತ್ತಮ.

ಇವುಗಳನ್ನೂ ಓದಿ:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.