ಅಮೆರಿಕದ ಶಿಕ್ಷಕಿಯ ವರಿಸಿದ ಆಂಧ್ರದ ವೈದ್ಯ: ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆ- ವಿಡಿಯೋ - AP MAN MARRIED AMERICAN GIRL
🎬 Watch Now: Feature Video
Published : Feb 12, 2025, 7:05 PM IST
ಮುನಗಚರ್ಲ(ಆಂಧ್ರ ಪ್ರದೇಶ): ಪ್ರೀತಿಗೆ ಯಾವುದೇ ದೇಶ, ಭಾಷೆ, ಜಾತಿ, ಧರ್ಮಗಳ ಗಡಿಯಿಲ್ಲ ಅಂತಾರೆ. ಅದರಂತೆ ಆಂಧ್ರ ಪ್ರದೇಶದ ಯುವಕನೋರ್ವ ಅಮೆರಿಕದ ಯುವತಿಯನ್ನು ಮದುವೆಯಾಗಿ ಪ್ರೀತಿಗೆ ದೇಶ, ಭಾಷೆಯ ಗಡಿಯಿಲ್ಲ ಎನ್ನುವುದನ್ನು ಮತ್ತೆ ಸಾಬೀತುಪಡಿಸಿದ್ದಾರೆ.
ಎನ್ಟಿಆರ್ ಜಿಲ್ಲೆಯ ನಂದಿಗಮದ ಪಗಿಡಪಲ್ಲಿಯ ಆನಂದ್ ಅವರು ಸೋಮವಾರ ರಾತ್ರಿ ಅಮೆರಿಕದ ಯಂಬರ್ ಅವರನ್ನು ವಿವಾಹವಾದರು. ಅದ್ಧೂರಿಯಾಗಿ ನಡೆದ ಈ ಸಮಾರಂಭದಲ್ಲಿ ಸಂಬಂಧಿಕರು, ಸ್ನೇಹಿತರು ಹಾಗೂ ಹಿತೈಷಿಗಳು ಪಾಲ್ಗೊಂಡಿದ್ದರು.
ಎಂಬಿಬಿಎಸ್ ಹಾಗೂ ಎಂಡಿ ಶಿಕ್ಷಣ ಮುಗಿಸಿರುವ ಆನಂದ್ ಕಳೆದ 15 ವರ್ಷಗಳಿಂದ ಅಮೆರಿಕದಲ್ಲಿ ವೈದ್ಯ ವೃತ್ತಿಯ ಜೊತೆಗೆ ಉದ್ಯಮಿಯಾಗಿದ್ದು, ನ್ಯಾಶ್ವಿಲ್ಲೆಯಲ್ಲಿ ವಾಸಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಯಂಬರ್ ಅವರನ್ನು ಭೇಟಿಯಾಗಿದ್ದಾರೆ. ಪರಿಚಯ ಕ್ರಮೇಣ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು. ಮದುವೆಗೆ ಎರಡೂ ಕುಟುಂಬಗಳು ಒಪ್ಪಿದ್ದಾರೆ. ವರನ ತಂದೆ ದೇವಸಹಾಯಂ ಹಾಗೂ ವಧುವಿನ ಪೋಷಕರಾದ ಡೇವಿಡ್ ಹಾಗೂ ಬೆತ್ ಅವರ ಸಮ್ಮುಖದಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಜೋಡಿ ಹೊಸ ಜೀವನಕ್ಕೆ ಕಾಲಿಟ್ಟರು.
ನಂದಿಗಮದ ಹೊರವಲಯದಲ್ಲಿರುವ ಕಾಲೇಜು ಆವರಣದಲ್ಲಿ ವಿವಾಹೋತ್ಸವ ನಡೆಯಿತು. ಅಮೆರಿಕನ್ ಹುಡುಗಿ ಹಾಗೂ ಆಂಧ್ರದ ಹುಡುಗನ ವಿವಾಹ ಸಮಾರಂಭವನ್ನು ನೋಡಲು ಜನಸಮೂಹವೇ ಸೇರಿತ್ತು. ಅಮೆರಿಕದಿಂದ ಬಂದ ವಧುವಿನ ಪೋಷಕರು ಹಾಗೂ ಸಂಬಂಧಿಕರು ಸಮಾರಂಭದಲ್ಲಿ ಭಾಗವಹಿಸಿದ್ದರು. ಹಲವು ಗಣ್ಯರೂ ಮದುವೆ ಸಮಾರಂಭದಲ್ಲಿ ಭಾಗವಹಿಸಿ ನವಜೋಡಿಯನ್ನು ಹರಸಿದರು.
ಇದನ್ನೂ ನೋಡಿ: ಅಮೆರಿಕದ ಕೆಲ್ಲಿ ಲವ್ಸ್ ಚಿತ್ರದುರ್ಗದ ಅಭಿಲಾಷ್: ಭಾರತೀಯ ಸಂಪ್ರದಾಯದಂತೆ ಅದ್ಧೂರಿ ವಿವಾಹ