ETV Bharat / state

350 ಕಿ.ಮೀ ದೂರದಲ್ಲಿದ್ದರೂ ಶತ್ರುದೇಶದ ವಿಮಾನ ಪತ್ತೆ ಹಚ್ಚಲಿದೆ ವಿಹೆಚ್​​ಎಫ್ ಸೂರ್ಯ ರಾಡಾರ್ - AERO INDIA 2025

350 ಕಿಲೋಮೀಟರ್ ದೂರದಲ್ಲಿದ್ದರೂ ಶತ್ರುದೇಶಗಳ ವಿಮಾನಗಳನ್ನು ಪತ್ತೆ ಹಚ್ಚುವ ಸಾಮರ್ಥ್ಯ ಹೊಂದಿರುವ ಅತ್ಯಾಧುನಿಕ ವಿಹೆಚ್​​ಎಫ್ ಸೂರ್ಯ ರಾಡಾರ್ ಕುರಿತಾದ ಮಾಹಿತಿ ಇಲ್ಲಿದೆ.

VHF SURYA RADAR
ವಿಹೆಚ್​​ಎಫ್ ಸೂರ್ಯ ರಾಡಾರ್ (ETV Bharat)
author img

By ETV Bharat Karnataka Team

Published : Feb 12, 2025, 8:40 PM IST

Updated : Feb 12, 2025, 10:02 PM IST

ಬೆಂಗಳೂರು: ನೂರಾರು ಕಿಲೋಮೀಟರ್ ದೂರದ ಶತ್ರು ದೇಶಗಳಿಂದ ರಹಸ್ಯವಾಗಿ ನಮ್ಮ ದೇಶದತ್ತ ವಿಮಾನ ಬರುತ್ತಿದ್ದರೆ ಕ್ಷಣಾರ್ಧದಲ್ಲಿ ಪತ್ತೆ ಹಚ್ಚಿ ಮಾಹಿತಿ ರವಾನಿಸುವ ವಿಹೆಚ್​​ಎಫ್ (ವೆರಿ ಹೈ ಫ್ರೀಕ್ವೆನ್ಸಿ) ಸೂರ್ಯ ರಾಡಾರ್ ಹಾಗೂ ಕಂಟ್ರೋಲಿಂಗ್ ಸಿಸ್ಟಮ್ ಅನ್ನು ಆಲ್ಫಾ ಡಿಸೈನ್ ಟೆಕ್ನಾಲಜಿ ಕಂಪೆನಿ ಅಭಿವೃದ್ಧಿಪಡಿಸಿದೆ.

ಅತ್ಯಾಧುನಿಕ ಹಾಗೂ ನಾವೀನ್ಯತೆ ಹೊಂದಿರುವ ಚಲಿಸುವ ಸೇನಾ ಟ್ರಕ್​​ಗಳ ಮೇಲೆ ವಿಹೆಚ್​​​ಎಫ್ ಸೂರ್ಯ ರಾಡಾರ್ ತಂತ್ರಜ್ಞಾನ ಅಳವಡಿಸಲಾಗಿದೆ. ಸುಮಾರು 350 ಕಿ.ಮೀ ರೇಂಜ್​​ನಲ್ಲಿ ರಹಸ್ಯವಾಗಿ ವಿಮಾನ ಬಂದರೆ, ಸುಲಭವಾಗಿ ಪತ್ತೆ ಮಾಡಿ ಮತ್ತೊಂದು ಟ್ರಕ್​ನ ಕಂಟ್ರೋಲಿಂಗ್ ಆಪರೇಟಿಂಗ್ ವಾಹನಕ್ಕೆ ಮಾಹಿತಿ ರವಾನಿಸಲಿದೆ. ಎಚ್ಚರಿಕೆ ನಡುವೆಯೂ ಸುಮಾರು 40 ಕಿ.ಮೀ ಹತ್ತಿರ ರಹಸ್ಯ ವಿಮಾನ ಬಂದರೆ ಕೂಡಲೇ ಶಸ್ತ್ರಸಜ್ಜಿತ ವಾಹನದ ಮೂಲಕ ದಾಳಿ ಮಾಡಬಹುದಾಗಿದೆ. ದೇಶದ ಗಡಿ ಪ್ರದೇಶಗಳಲ್ಲಿ ಭಾರತೀಯ ವಾಯುಸೇನೆಯ ಪಹರೆಗೆ ನೆರವಿಗೆ ಬರಲಿದ್ದು ಏರೋ ಇಂಡಿಯಾ-2025ರಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.

ವಿಹೆಚ್​​ಎಫ್ ಸೂರ್ಯ ರಾಡಾರ್ ಬಗ್ಗೆ ಮಾಹಿತಿ (ETV Bharat)

ಇದನ್ನೂ ಓದಿ: ಕ್ವಿನ್ ಸಿಟಿ: ಹೂಡಿಕೆದಾರರ ಸಮಾವೇಶದಲ್ಲಿ 15 ವೈದ್ಯಕೀಯ ಸಂಸ್ಥೆಗಳ ಜೊತೆ ಸಭೆ, ಹೂಡಿಕೆ ಚರ್ಚೆ

ಅಮೆರಿಕ, ರಷ್ಯಾ, ಚೀನಾ ರಾಷ್ಟ್ರಗಳ 5ನೇ ತಲೆಮಾರಿನ ವಿಮಾನಗಳು ರಹಸ್ಯವಾಗಿ ಬಂದರೂ ಸುಲಭವಾಗಿ ಸ್ವದೇಶಿ ರಾಡಾರ್ ಕಾರ್ಯಕ್ಷಮತೆ ಮೆರೆಯಲಿದೆ. ಈ ರಾಡಾರ್ ಸೆನ್ಸಾರ್ ಆಧಾರಿತವಾಗಿದ್ದು, ಇದರ ಆಂಟೆನಾದ ಮಾಡ್ಯುಲ್ ಗಳನ್ನ ಹೈದರಾಬಾದ್​​ನಲ್ಲಿ ತಯಾರಿಸಲಾಗಿದೆ. ದೇವನಹಳ್ಳಿ ಹಾಗೂ ಪೀಣ್ಯ ಘಟಕಗಳಲ್ಲಿ ಉತ್ಪಾದಿಸಲಾಗಿದೆ. ಏಪ್ರಿಲ್​​ನಲ್ಲಿ ವಾಯುಸೇನೆಗೆ ಆರು ಜೋಡಿ ಸೆನ್ಸಾರ್ ಹಾಗೂ ಕಂಟ್ರೋಲ್ ಅಪರೇಟಿಂಗ್ ವಾಹನಗಳನ್ನು ನೀಡಲು ಸಿದ್ದತೆ ನಡೆಸಿಕೊಳ್ಳಲಾಗುತ್ತಿದೆ ಎಂದು ಕಂಪೆನಿಯ ಉಪಾಧ್ಯಕ್ಷ ಹಾಗೂ ರಾಡಾರ್​ ಡಿವಿಷನ್​ ಮುಖ್ಯಸ್ಥರಾದ ಅನಂತಮೂರ್ತಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

VHF SURYA RADAR
ವಿಹೆಚ್​​ಎಫ್ ಸೂರ್ಯ ರಾಡಾರ್ (ETV Bharat)

ಶತ್ರು ದೇಶಗಳ ಕ್ಷಿಪಣಿ ಹಾಗೂ ಯುದ್ದ ವಿಮಾನಗಳನ್ನ ಪತ್ತೆ ಹಚ್ಚುವ 3ಡಿ ಸೆನ್ಸಾರ್ ರಾಡಾರ್ ಇದಾಗಿದೆ. ತಪಾಸಣೆ ಕಾರ್ಯ ಇನ್ನೆರಡು ತಿಂಗಳಲ್ಲಿ ಮುಗಿಯಲಿದ್ದು, ಏಪ್ರಿಲ್ ವೇಳೆಗೆ ವಾಯುಸೇನೆಗೆ ನೀಡಲಿದ್ದೇವೆ ಎಂದು ಕಂಪೆನಿಯ ಅಧ್ಯಕ್ಷ ಹಾಗೂ ಸಿಇಒ ಹರಿಪ್ರಸಾದ್ ತಿಳಿಸಿದ್ದಾರೆ.

VHF SURYA RADAR
ವಿಹೆಚ್​​ಎಫ್ ಸೂರ್ಯ ರಾಡಾರ್ (ETV Bharat)

ಇದನ್ನೂ ಓದಿ: ಏರೋ ಇಂಡಿಯಾ-2025: ರಹಸ್ಯ ವಿಮಾನಗಳ ಪತ್ತೆಗೆ ಸ್ವದೇಶಿ VHS ರಾಡಾರ್​ ಅನಾವರಣ

Last Updated : Feb 12, 2025, 10:02 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.