ETV Bharat / international

ಒತ್ತೆಯಾಳುಗಳ ಬಿಡದಿದ್ದರೆ ಯುದ್ಧ ಪುನಾರಂಭ: ಹಮಾಸ್​ಗೆ ಇಸ್ರೇಲ್​ ಪ್ರಧಾನಿ ಎಚ್ಚರಿಕೆ - ISRAELI PM WARNS HAMAS

ಕದನ ವಿರಾಮದ ನಿಯಮದಂತೆ ತನ್ನ ಪ್ರಜೆಗಳನ್ನು ಬಿಡುಗಡೆ ಮಾಡಲು ಇಸ್ರೇಲ್​ ಹಮಾಸ್​ಗೆ ಸೂಚನೆ ನೀಡಿದೆ.

ಇಸ್ರೇಲ್​ ಪ್ರಧಾನಿ ಬೆಂಜಮಿನ್​ ನೆತನ್ಯಾಹು
ಇಸ್ರೇಲ್​ ಪ್ರಧಾನಿ ಬೆಂಜಮಿನ್​ ನೆತನ್ಯಾಹು (ANI)
author img

By ETV Bharat Karnataka Team

Published : Feb 12, 2025, 9:19 PM IST

ಟೆಲ್​ ಅವಿವ್(ಇಸ್ರೇಲ್): ಒಪ್ಪಂದದ ಪ್ರಕಾರ ನಮ್ಮ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ, ಕದನ ವಿರಾಮದಿಂದ ಹೊರಬಂದು ಮರು ಯುದ್ಧ ನಡೆಸಲು ಸಿದ್ಧ ಎಂದು ಹಮಾಸ್​ ಉಗ್ರರಿಗೆ ಇಸ್ರೇಲ್​ ಪ್ರಧಾನಿ ಬೆಂಜಮಿನ್​ ನೆತನ್ಯಾಹು ಖಡಕ್​ ಎಚ್ಚರಿಕೆ ರವಾನಿಸಿದ್ದಾರೆ.

ಇಸ್ರೇಲ್​ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವಲ್ಲಿ ವಿಳಂಬ ಮತ್ತು ನಿರಾಕರಣೆ ತೋರುತ್ತಿರುವ ಹಮಾಸ್​ ಉಗ್ರರಿಗೆ ಕೊನೆಯ ಗಡುವು ನೀಡಿದ್ದಾರೆ. ಶನಿವಾರ ಮಧ್ಯಾಹ್ನದೊಳಗೆ ಒತ್ತೆ ಇಟ್ಟುಕೊಂಡಿರುವ ನಮ್ಮವರನ್ನು ಬಿಡುಗಡೆ ಮಾಡದೇ ಹೋದಲ್ಲಿ ಕದನ ವಿರಾಮ ಉಲ್ಲಂಘನೆ ಆರೋಪದ ಮೇಲೆ ಮರು ದಾಳಿ ಆರಂಭಿಸಲಾಗುವುದು. ಹಮಾಸ್​ನ ಅಂತಿಮ ಸೋಲಿನವರೆಗೂ ಹೋರಾಟ ನಡೆಸಲಾಗುವುದು ಎಂದು ಗುಡುಗಿದ್ದಾರೆ.

ಈ ಬಗ್ಗೆ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ಇಸ್ರೇಲ್​ ಪ್ರಧಾನಿ, ಕದನ ವಿರಾಮದ ವೇಳೆ ಒಪ್ಪಿದಂತೆ ಉಭಯರ ಕಡೆಯಿಂದ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕು. ಆದರೆ, ಹಮಾಸ್​ ಉಲ್ಲಂಘಿಸುತ್ತಿದೆ. ಹೀಗಾಗಿ, ಗಾಜಾ ಪಟ್ಟಿಯ ಸುತ್ತಲೂ ಮತ್ತು ಒಳಗೆ ಸೇನೆಯನ್ನು ಸಜ್ಜುಗೊಳಿಸಲು ಸೂಚನೆ ನೀಡಲಾಗಿದೆ ಎಂದು ಬರೆದುಕೊಂಡಿದ್ದಾರೆ.

ಮತ್ತೊಂದು ಪೋಸ್ಟ್‌ನಲ್ಲಿ, "ಹಮಾಸ್ ಉಗ್ರರು ಶನಿವಾರ ಮಧ್ಯಾಹ್ನದೊಳಗೆ ನಮ್ಮ ಒತ್ತೆಯಾಳುಗಳನ್ನು ಕಳುಹಿಸದಿದ್ದರೆ, ಕದನ ವಿರಾಮ ಕೊನೆಗೊಳ್ಳುತ್ತದೆ. ಹಮಾಸ್‌ನ ಅಂತಿಮ ಸೋಲಿನವರೆಗೂ ಐಡಿಎಫ್ ತೀವ್ರ ಹೋರಾಟ ಪುನರಾರಂಭಿಸಲಿದೆ ಎಂದು ಸಚಿವ ಸಂಪುಟದಲ್ಲಿ ಸರ್ವಾನುಮತದ ಅಂಗೀಕರಿಸಲಾಗಿದೆ ಎಂದು ತಿಳಿಸಿದ್ದಾರೆ.

ಅಮೆರಿಕ ಅಧ್ಯಕ್ಷರಿಂದಲೂ ಎಚ್ಚರಿಕೆ: ಪ್ಯಾಲೆಸ್ಟೈನಿಯನ್ನರು ಗಾಜಾ ಪಟ್ಟಿಗೆ ಮರಳಲು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​​ ವಿರೋಧಿಸಿದ್ದರು. ಯುದ್ಧ ಪೂರ್ಣ ಪ್ರಮಾಣದಲ್ಲಿ ಮುಗಿಯುವವರೆಗೂ ಜನರು ಗಾಜಾ ಪಟ್ಟಿ ಪ್ರವೇಶಿಸಬಾರದು. ಎಲ್ಲ ಒತ್ತೆಯಾಳುಗಳನ್ನು ಹಮಾಸ್​ ನಿಗದಿತ ಕಾಲಾವಧಿಯಲ್ಲಿ ಬಿಡುಗಡೆ ಮಾಡಬೇಕು ಎಂದು ಸೂಚನೆ ನೀಡಿದ್ದರು.

ಇತ್ತ ಹಮಾಸ್​, ಇಸ್ರೇಲ್​​ ನೀಡಿದ ಶನಿವಾರದ ಗಡುವನ್ನು ನಿರ್ಲಕ್ಷಿಸಿತ್ತು. ಮುಂದಿನ ಸೂಚನೆ ಬರುವವೆಗೆ ಒತ್ತೆಯಾಳುಗಳ ಬಿಡುಗಡೆ ವಿಳಂಬವಾಗಲಿದೆ ಎಂದು ಘೋಷಿಸಿತ್ತು. ಇದಕ್ಕೀಗ ಇಸ್ರೇಲ್​ ಕಟುವಾಗಿಯೇ ಪ್ರತಿಕ್ರಿಯೆ ನೀಡಿದೆ.

ಇಸ್ರೇಲ್​ ಮತ್ತು ಹಮಾಸ್​ ಉಗ್ರರ ನಡುವೆ ಒಂದು ವರ್ಷಕ್ಕೂ ಅಧಿಕ ಅವಧಿಯಿಂದ ನಡೆಯುತ್ತಿದ್ದ ಯುದ್ಧಕ್ಕೆ ಕಳೆದ ತಿಂಗಳು ಕದನ ವಿರಾಮ ಘೋಷಿಸಲಾಗಿತ್ತು. ಅದರಂತೆ ಉಭಯ ಪಡೆಗಳು ತಮ್ಮಲ್ಲಿರುವ ಯುದ್ಧ ಕೈದಿಗಳು/ ಒತ್ತೆಯಾಳುಗಳನ್ನು ಪರಸ್ಪರ ಬಿಡುಗಡೆ ಮಾಡಬೇಕು ಎಂದು ಷರತ್ತು ವಿಧಿಸಲಾಗಿತ್ತು.

ಇದನ್ನೂ ಓದಿ: ಇಸ್ರೇಲ್ ​- ಹಮಾಸ್​ ಕದನವಿರಾಮ ಒಪ್ಪಂದ: 471 ದಿನಗಳ ಬಳಿಕ ಇಸ್ರೇಲ್‌ಗೆ ಆಗಮಿಸಿದ 3 ಮಹಿಳಾ ಒತ್ತೆಯಾಳುಗಳು

ಇಸ್ರೇಲ್ - ಹಮಾಸ್ ಕದನ ವಿರಾಮ: 33 ಇಸ್ರೇಲಿ ಒತ್ತೆಯಾಳು, 1,890 ಪ್ಯಾಲೆಸ್ಟೈನ್ ಕೈದಿಗಳ ಬಿಡುಗಡೆಗೆ ಸಿದ್ಧತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.