ETV Bharat / state

ಕಂಬಳದಲ್ಲಿ 69 ಮೆಡಲ್​​ ಪಡೆದ 'ದೂಜ'ನಿಗೆ ಆರೋಗ್ಯ ಸಮಸ್ಯೆ : ಕರೆಯಲ್ಲಿ ಓಟ ನಿಲ್ಲಿಸಿದ ಕಾನಡ್ಕದ ಕೋಣ - BUFFALO DOOJA RETIRES

ಕಂಬಳ ಓಟದಲ್ಲಿ 69 ಮೆಡೆಲ್ ಪಡೆದು ದಾಖಲೆ ಮಾಡಿದ ಕೋಣ ದೂಜ 2 ವರ್ಷದಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದೆ. ಪ್ರಸ್ತುತ ಆರೋಗ್ಯವಾಗಿದ್ದರೂ ಕೂಡ ಮತ್ತೆ ಕಂಬಳ ಕರೆಗೆ ಇಳಿಯುವುದಿಲ್ಲವಂತೆ. ವರದಿ - ವಿನೋದ್​ ಪುದು

BUFFALO DOOJA, WHO WON 69 MEDALS AT KAMBALA, RETIRING FROM KAMBALA CAUSE OF HEALTH ISSUE
ಕಂಬಳದಲ್ಲಿ 69 ಮೆಡಲ್​​ ಪಡೆದ 'ದೂಜ'ನಿಗೆ ಆರೋಗ್ಯ ಸಮಸ್ಯೆ: ಕರೆಯಲ್ಲಿ ಓಟ ನಿಲ್ಲಿಸಿದ ಕಾನಡ್ಕದ ಕೋಣ (ETV Bharat)
author img

By ETV Bharat Karnataka Team

Published : Feb 13, 2025, 12:43 PM IST

ಮಂಗಳೂರು: ಕರಾವಳಿಯ ಜಾನಪದ ಕ್ರೀಡೆ ಕಂಬಳದಲ್ಲಿ ಕಂಬಳ ಕೋಣಗಳಿಗೆ ಬಹಳ ಮಹತ್ವ. ಕಂಬಳ ಕೋಣಗಳ ಯಜಮಾನರು ಕಂಬಳ ಕೋಣವನ್ನು ತಮ್ಮ ಮನೆಯ ಸದಸ್ಯನಂತೆ ಸಾಕುತ್ತಾರೆ. ಕೋಣಗಳು‌ ಕೂಡ ಮನೆ ಯಜಮಾನನಿಗೆ ಕಂಬಳದಲ್ಲಿ ಗೌರವ ತಂದುಕೊಡುತ್ತವೆ. ಕಂಬಳದಲ್ಲಿ ಬಹಳಷ್ಟು ಹೆಸರು ಮಾಡಿದ ಕೋಣ ದೂಜ. ಇದೀಗ ಆರೋಗ್ಯ ಸಮಸ್ಯೆಯಿಂದ ದೂಜ ಕಂಬಳ ಕರೆಯಲ್ಲಿ ಓಡುವುದನ್ನು ನಿಲ್ಲಿಸಿದ್ದಾನೆ.

"ಅಲೆ ಬುಡಿಯೆರ್‌ಗೇ.." ಎಂಬ ಉದ್ಘಾರ ಕೇಳುತ್ತಿದ್ದಂತೆ ಕಂಬಳ ಕರೆಯಲ್ಲಿ ದೂಜ ಓಟಕ್ಕೆ ನಿಂತರೆ ಮೆಡಲ್ ಗೆದ್ದನೆಂದೇ ಲೆಕ್ಕ. ಅಂತಹ ದೂಜ ಅನಾರೋಗ್ಯದಿಂದಾಗಿ ಒಂದೆರಡು ವರ್ಷಗಳಿಂದ ಕಂಬಳ ಕರೆಗೆ ಇಳಿದಿಲ್ಲ. ಸದ್ಯ ಆರೋಗ್ಯದಿಂದಿದ್ದರೂ ಇನ್ಮುಂದೆ ದೂಜ ಕಂಬಳ ಕರೆಗೆ ಇಳಿಯುವುದಿಲ್ಲ ಎಂಬ ಸುದ್ದಿ ಇದೀಗ ಕಂಬಳ ಅಭಿಮಾನಿಗಳಿಗೆ ನಿರಾಸೆ ತಂದಿದೆ.

ಕಂಬಳದಲ್ಲಿ 69 ಮೆಡಲ್​​ ಪಡೆದ 'ದೂಜ'ನಿಗೆ ಆರೋಗ್ಯ ಸಮಸ್ಯೆ : ಕರೆಯಲ್ಲಿ ಓಟ ನಿಲ್ಲಿಸಿದ ಕಾನಡ್ಕದ ಕೋಣ (ETV Bharat)

ಆರೋಗ್ಯವಿದ್ದರೆ ಕೋಣಗಳು ಸರಾಸರಿ 20ವರ್ಷ ಪ್ರಾಯದವರೆಗೆ ಕಂಬಳ ಕರೆಯಲ್ಲಿ ಓಡುತ್ತವೆ. ಆದರೆ ದೂಜನಿಗೆ ಎರಡು ವರ್ಷಗಳ ಹಿಂದೆ ಆರೋಗ್ಯ ಕೈಕೊಟ್ಟಿತ್ತು. ಎದ್ದು ನಿಲ್ಲಲಾರದಷ್ಟು ಸಹ ಅಶಕ್ತನಾದ. ಬಳಿಕ‌ ನಡೆದ ಚಿಕಿತ್ಸೆಯಿಂದ ಆರೋಗ್ಯವಂತನಾದರೂ ಓಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಇನ್ಮುಂದೆ ಆತ ಕಂಬಳ ಕರೆಗೆ ಇಳಿಯುವುದು ಸ್ವಲ್ಪ ಕಷ್ಟವೇ ಆಗಿದೆ.

ಮಂಗಳೂರಿನ ಶಕ್ತಿನಗರ ಪದವು - ಕಾನಡ್ಕದ ಯಜಮಾನರು ದೂಜ ಕೋಣವನ್ನು ಅಳದಂಗಡಿ ರವಿಯವರಿಂದ ಖರೀದಿಸಿದ್ದರು. ಪದವು ಕಾನಡ್ಕಕ್ಕೆ ಬರುವಾಗ 2 ವರ್ಷದ ಮರಿ ಕೋಣವಾಗಿದ್ದ ದೂಜನಿಗೆ ಇದೀಗ 16ರ ಪ್ರಾಯ. ಪದವು - ಕಾನಡ್ಕಕ್ಕೆ ಬಂದ ಬಳಿಕವೇ ದೂಜ ಕಂಬಳಕ್ಕೆ ತಯಾರಾಗಿದ್ದು. ಪದವು ಕಾನಡ್ಕ ಫ್ರಾನ್ಸಿಸ್ ಫ್ಲೇವಿ ಡಿಸೋಜರ ಹೆಸರಿನಲ್ಲಿ ದೂಜನನ್ನು ಕಂಬಳ ಕರೆಯಲ್ಲಿ ಓಡಿಸಲಾಗುತ್ತಿತ್ತು. ತಂದೆ ಫ್ರಾನ್ಸಿಸ್ ಅವರ ನಿಧನದ ಬಳಿಕ ಮೂವರು ಮಕ್ಕಳಾದ ಡೋಲ್ಫಿ ಡಿಸೋಜ, ಡೆರಿಕ್ ಡಿಸೋಜ ಹಾಗೂ ನಾಬರ್ಟ್ ಡಿಸೋಜರು ತಾಯಿ ಫ್ಲೇವಿ ಡಿಸೋಜರ ಹೆಸರಿನಲ್ಲಿ ಕೋಣಗಳನ್ನು ಓಡಿಸುತ್ತಿದ್ದಾರೆ.

BUFFALO DOOJA, WHO WON 69 MEDALS AT KAMBALA, RETIRING FROM KAMBALA CAUSE OF HEALTH ISSUE
ಕರೆಯಲ್ಲಿ ಓಟ ನಿಲ್ಲಿಸಿದ ಕಾನಡ್ಕದ ಕೋಣ (ETV Bharat)

ನೇಗಿಲು ಕಿರಿಯದಲ್ಲಿ ಚಾಂಪಿಯನ್​ ಆಗಿದ್ದ ದೂಜ ಬಳಿಕ ಹಗ್ಗ ಕಿರಿಯ ವಿಭಾಗದಲ್ಲಿ ಚಾಂಪಿಯನ್ ಆಗಿತ್ತು, ಹಗ್ಗ ಹಿರಿಯ ವಿಭಾಗದಲ್ಲಿ ನಾಲ್ಕು ವರ್ಷ ಚಾಂಪಿಯನ್ ಆಫ್ ದಿ ಈಯರ್ ಆಗಿತ್ತು. ಜೊತೆಗೆ ಕಂಬಳ ಓಟದಲ್ಲಿ 69 ಮೆಡಲ್ ಪಡೆದು ದೂಜ ದಾಖಲೆ ಬರೆದಿದ್ದಾನೆ. ಚಾಂಪಿಯನ್ ಸರಣಿ ಪ್ರಶಸ್ತಿ ಪಡೆದ ದೂಜ ತನ್ನ ಮೊದಲ ಕಂಬಳ ಅಲ್ಲಿಯೇ ಸೆಮಿಫೈನಲ್ ಪ್ರವೇಶಿಸಿದ್ದ. ಅಪ್ಪು, ಚೆನ್ನ, ಬೊಲ್ಲ, ಮೋಡೆ ಕೋಣಗಳೊಂದಿಗೆ ಜೊತೆಯಾಗಿ ದೂಜ ಕಂಬಳ ಕರೆಯಲ್ಲಿ ಓಡಿದೆ.

ಸಂಗೀತ ಪ್ರೇಮಿ ಎಂಬ ಹೆಗ್ಗಳಿಕೆಗೆ ಪಾತ್ರನಾದ ದೂಜ ಸೆಮಿಫೈನಲ್ ಪ್ರವೇಶಿಸಿದರೆ ಬ್ಯಾಂಡು, ಕೊಂಬಿನ ನಾದಕ್ಕೆ ತಕ್ಕಂತೆ ತಲೆಯಾಡಿಸುವುದು ನೋಡುವುದಕ್ಕೆ ಚಂದ. ಫೈನಲ್‌ನಲ್ಲಿ ಮೆಡಲ್ ಹೊಡೆದರೆ, ಚಾಂಪಿಯನ್ ಶಿಪ್ ಆದರೆ ಆತ ಖುಷಿಯಿಂದ ಕುಣಿಯುತ್ತಿದ್ದ ಎಂದು ದೂಜನನ್ನು ಸಾಕುವವರು ನೆನಪಿಸುತ್ತಾರೆ.

ಈ ಬಗ್ಗೆ ಮಾತನಾಡಿದ ಪದವು ಕಾನಡ್ಕ ತಂಡದ ಸದಸ್ಯ ಪ್ರೀತಮ್ ಅವರು ದೂಜನಿಗೆ ಈಗ ಓಡುವ ತಾಕತ್ತಿಲ್ಲ. 2010ರಲ್ಲಿ ರವಿ ಎಂಬುವವರಿಂದ ತೆಗೆದುಕೊಂಡ ಕೋಣ ಇದು. ಇದಕ್ಕೆ ಹಲವು ಕೋಣಗಳನ್ನು ಕಂಬಳಕ್ಕೆ ಜೋಡಿ ಮಾಡಿದೆವು. ಕಕ್ಕೆಪದವು ಕಂಬಳದಲ್ಲಿ ಮೊದಲ ಮೆಡಲ್​ ಪಡೆದುಕೊಂಡಿತು. ಅದರ ನಂತರ ಇದು ಹಿಂದಿರುಗಿ ನೋಡಿಲ್ಲ. 6 ವರ್ಷ ಈ ಕೋಣ ಚಾಂಪಿಯನ್ ಆಗಿದೆ. 69 ಮೆಡಲ್ ಪಡೆದುಕೊಂಡಿದೆ.

ತನ್ನ ಮನೆಯವರೊಂದಿಗೆ ದೂಜ (ETV Bharat)

ಪದವು ಕಾನಡ್ಕ ತಂಡದ ಸದಸ್ಯ ಜೋಸುವ ಮಾತನಾಡಿ, "ದೂಜ ಶಾಂತ ಸ್ವಭಾವದವನು. ಆದರೆ ಕಂಬಳಕ್ಕೆ ಹೋಗುವುದೆಂದರೆ ಆತನ ಖುಷಿಯೆ ಬೇರೆ. ಸೆಮಿ ಫೈನಲ್​ಗೆ ಬಂದಾಗ ಸಂಗೀತಕ್ಕೆ ಖುಷಿ ಪಡುತ್ತಾನೆ. ಬ್ಯಾಂಡ್ , ಕೊಂಬು ಊದುವಾಗ ಬಹಳಷ್ಟು ಖುಷಿ ಪಡುತ್ತಾನೆ. ಓಡುವಾಗ ಬದಿಯ ಕೋಣ ಒಂದು ಹೆಜ್ಜೆ ಮುಂದೆ ಇದ್ದರೂ ಗುರಿ ತಲುಪುವಾಗ ಆತನೇ ಮುಂದಿರುತ್ತಾನೆ" ಎನ್ನುತ್ತಾರೆ.

ದೂಜ ಕೋಣವನ್ನು ಸಣ್ಣಂದಿನಿಂದಲೇ ಸಾಕಿದ ಸ್ಟ್ಯಾನಿ ಮೆಂಡೋನ್ಸ ಮಾತನಾಡಿ, ಈ ಕೋಣವನ್ನು‌11 ವರ್ಷ ನಾನು ನೋಡಿದೆ. ಸಣ್ಣ ಮಕ್ಕಳಂತೆ ಆತನನ್ನು ಸಾಕಿದ್ದೇವೆ. ಆತನು ಕೂಡ ಎಲ್ಲರ ಜೊತೆಯಲ್ಲಿ ಹೊಂದಿಕೊಂಡಿರುತ್ತಾನೆ. ಆತನಿಗೆ ಕೋಪ ಇಲ್ಲ. ಯಾರಿಗೂ ತೊಂದರೆ ಕೊಟ್ಟಿಲ್ಲ" ಎನ್ನುತ್ತಾರೆ.

ಇದನ್ನೂ ಓದಿ: ಭರತ ಹುಣ್ಣಿಮೆ ಜಾತ್ರೆ; ಯಲ್ಲಮ್ಮನ ಗುಡ್ಡದಲ್ಲಿ ಭಕ್ತಸಾಗರ; ಉಧೋ, ಉಧೋ, ಯಲ್ಲಮ್ಮ ನಿನ್ಹಾಲ್ಕ ಉಧೋ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.