RCB Player Virat Kohli: ಮಾರ್ಚ್ 21ರಂದು 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಪ್ರಾರಂಭವಾಗಲಿದೆ. ಮಹಾ ಟೂರ್ನಿಗೆ ಈಗಿನಿಂದಲೇ ಎಲ್ಲಾ ಹತ್ತು ಫ್ರಾಂಚೈಸಿಗಳ ಆಟಗಾರರು ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಅದರಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಐಪಿಎಲ್ ಪ್ರಾರಂಭಕ್ಕೆ ಒಂದು ತಿಂಗಳು ಮುಂಚಿತವಾಗಿ ನಾಯಕನನ್ನು ಘೋಷಿಸಿದೆ.
ಬೆಂಗಳೂರಿನಲ್ಲಿ ಇಂದು ಆಯೋಜಿಸಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ಆರ್ಸಿಬಿಯ ಹೊಸ ವೆಬ್‌ಸೈಟ್ ಮತ್ತು ಜೆರ್ಸಿಯನ್ನು ಫ್ರಾಂಚೈಸಿ ಅನಾವರಣಗೊಳಿಸಿತು. ಇದೇ ವೇಳೆ, ಹೊಸ ನಾಯಕನ ನೇಮಕ ಮಾಡಲಾಯಿತು. ಈ ಬಾರಿ ಯುವ ಬ್ಯಾಟರ್ ರಜತ್ ಪಾಟಿದಾರ್ ಆರ್‌ಸಿಬಿ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಫ್ರಾಂಚೈಸಿ ಘೋಷಿಸಿ ಎಲ್ಲರಲ್ಲೂ ಅಚ್ಚರಿ ಮೂಡಿಸಿತು.
The next captain of RCB is…
— Royal Challengers Bengaluru (@RCBTweets) February 13, 2025
Many greats of the game have carved a rich captaincy heritage for RCB, and it’s now time for this focused, fearless and fierce competitor to lead us to glory! This calmness under pressure and ability to take on challenges, as he’s shown us in the… pic.twitter.com/rPY2AdG1p5
ಇದಕ್ಕೂ ಮೊದಲು, ಆರ್ಸಿಬಿಯನ್ನು ವಿರಾಟ್ ಕೊಹ್ಲಿ ಅವರೇ ಮುನ್ನಡೆಸಲಿದ್ದಾರೆ ಎಂದು ಅಂದಾಜಿಸಲಾಗಿತ್ತು. ಏಕೆಂದರೆ ಇತ್ತೀಚೆಗೆ ಜೆಡ್ಡಾದಲ್ಲಿ ನಡೆದಿದ್ದ ಐಪಿಎಲ್ 2025ರ ಹರಾಜಿನಲ್ಲಿ ನಾಯಕತ್ವನ ಅನುಭವವಿರುವ ಯಾವೊಬ್ಬ ಆಟಗಾರರನ್ನೂ ಖರೀದಿಸಲು ಫ್ರಾಂಚೈಸಿ ಮುಂದಾಗಲಿಲ್ಲ. ಬದಲಿಗೆ, ಹೊಸ ಆಟಗಾರರಿಗೆ ಮಣೆ ಹಾಕಿ ಅಚ್ಚರಿ ಮೂಡಿಸಿತ್ತು. ಇದರ ಬೆನ್ನಲ್ಲೇ 18ನೇ ಆವೃತ್ತಿಯಲ್ಲಿ ಕೊಹ್ಲಿ ಅವರೇ ನಾಯಕರಾಗಲಿದ್ದಾರೆ ಎಂದು ಫ್ಯಾನ್ಸ್ ಅಂದಾಜಿಸಿದ್ದರು. ಆದರೆ ಅದೂ ಸಾಧ್ಯವಾಗಿಲ್ಲ.
ಕೊಹ್ಲಿಗೆ RCB ನಾಯಕತ್ವ ನೀಡದಿರಲು ಕಾರಣವೇನು?: ಐಪಿಎಲ್ ಹರಾಜಿಗೂ ಮುನ್ನ ಆರ್‌ಸಿಬಿ ₹21 ಕೋಟಿ ರೂ. ಕೊಟ್ಟು ವಿರಾಟ್ ಕೊಹ್ಲಿ ಅವರನ್ನು ರಿಟೇನ್ ಮಾಡಿಕೊಂಡಿತ್ತು. 2023ರಲ್ಲಿ ನಾಯಕನಾಗಿದ್ದ ಫಾಪ್ ಡು ಪ್ಲೆಸಿಸ್ ಅವರನ್ನು ಕೈ ಬಿಟ್ಟ ಬಳಿಕ ಆರ್‌ಸಿಬಿ ನಾಯಕನ ರೇಸ್ನಲ್ಲಿ ಕೊಹ್ಲಿ ಹೆಸರು ಮುಂಚೂಣಿಯಲ್ಲಿತ್ತು.
𝐊𝐢𝐧𝐠 𝐊𝐨𝐡𝐥𝐢 𝐀𝐩𝐩𝐫𝐨𝐯𝐞𝐬! 💌
— Royal Challengers Bengaluru (@RCBTweets) February 13, 2025
“Myself and the other team members will be right behind you, Rajat”: Virat Kohli
“The way you have grown in this franchise and the way you have performed, you’ve made a place in the hearts of all RCB fans. This is very well deserved.”… pic.twitter.com/dgjDLm8ZCN
ಅದರಂತೆ, ಕೊಹ್ಲಿಯೇ ನಾಯಕತ್ವ ವಹಿಸಿಕೊಳ್ಳುವಂತೆ ಫ್ರಾಂಚೈಸಿ ಅವಕಾಶವನ್ನೂ ನೀಡಿತ್ತು. ಆದರೆ ಸ್ವತಃ ಕೊಹ್ಲಿಯೇ ಆಫರ್ ತಿರಸ್ಕರಿಸಿದ್ದಾರೆ. ಅಲ್ಲದೇ ಫ್ರಾಂಚೈಸಿ ಕೂಡ ಈ ವಿಷಯದ ಬಗ್ಗೆ ಹಲವು ಬಾರಿ ಮಾತುಕತೆ ನಡೆಸಿ ಮನವೊಲಿಸಲು ಪ್ರಯತ್ನಿಸಿತ್ತು. ಹೀಗಿದ್ದರೂ ಕೊಹ್ಲಿ ಒಪ್ಪಿಗೆ ಸೂಚಿಸಲಿಲ್ಲ. ಅಂತಿಮವಾಗಿ, ಪಾಟಿದಾರ್ ಅವರನ್ನು ನಾಯಕನನ್ನಾಗಿ ಮಾಡಲು ನಿರ್ಧರಿಸಲಾಯಿತು ಎಂದು ಕ್ರೀಡಾ ಮಾಧ್ಯಮವೊಂದು ವರದಿ ಮಾಡಿದೆ.
ಕೊಹ್ಲಿ ನಾಯಕತ್ವ: ವಿರಾಟ್ ಕೊಹ್ಲಿ ಈ ಹಿಂದೆ ಆರ್‌ಸಿಬಿ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದರು. 2013ರಿಂದ 2021ರವರೆಗೆ ಒಟ್ಟು 9 ವರ್ಷಗಳ ಕಾಲ ನಾಯಕನಾಗಿದ್ದರು. ಇವರ ನಾಯಕತ್ವದಲ್ಲಿ RCB ಒಮ್ಮೆಯೂ ಕಪ್ ಗೆಲ್ಲಲು ಸಾಧ್ಯವಾಗಲಿಲ್ಲ. ಆದರೆ, ಒಮ್ಮೆ ಫೈನಲ್ಗೆ ಎಂಟ್ರಿ ಕೊಟ್ಟಿತ್ತು.
ಬಹುಪರಾಕ್ ಹೇಳೋ ಸಮಯ ಬಂದಿದೆ, ಬೆಂಗಳೂರು! 🙌🔥
— Royal Challengers Bengaluru (@RCBTweets) February 13, 2025
ಈಗ ಪದಗ್ರಹಣ ಮಾಡ್ತಿರೋ ನಿಮ್ಮ ತಂಡದ ಅಧಿಪತಿ, ನಾಯಕ ರಜತ್ ಮನೋಹರ್ ಪಾಟಿದಾರ್! 👑💪#PlayBold #ನಮ್ಮRCB #RCBCaptain #Rajat #RajatPatidar #IPL2025 #PatidarPattabhisheka pic.twitter.com/NDf8EjIl2H
2016ರಲ್ಲಿ ಕೊಹ್ಲಿ ನಾಯಕತ್ವದಲ್ಲಿ ಫೈನಲ್ಗೆ ತಲುಪಿದ್ದ ಆರ್‌ಸಿಬಿ, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದಿದ್ದ ಅಂತಿಮ ಪಂದ್ಯದಲ್ಲಿ ಸೋಲು ಕಂಡಿತು. ಕೊಹ್ಲಿ ಒಟ್ಟು 143 ಪಂದ್ಯಗಳಲ್ಲಿ ಆರ್‌ಸಿಬಿ ಮುನ್ನಡೆಸಿದ್ದು ಧೋನಿ ಬಳಿಕ ಕ್ಯಾಪ್ಟನ್ ಅಗಿ ಹೆಚ್ಚು ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿರುವ ಎರಡನೇ ಆಟಗಾರನಾಗಿದ್ದಾರೆ.
ಇದನ್ನೂ ಓದಿ: RCB ನಾಯಕನ ಬಗ್ಗೆ ಕೊಹ್ಲಿ ಫಸ್ಟ್ ರಿಯಾಕ್ಷನ್: ಆ ಒಂದು ಮಾತಿಗೆ ಫ್ಯಾನ್ಸ್ ಫಿದಾ!