ನವದೆಹಲಿ: ಭಾರತದ ಜಿಡಿಪಿ ಬೆಳವಣಿಗೆ ಈ ವರ್ಷ ಶೇ.7ರಷ್ಟು ಬೆಳೆಯಬಹುದು ಎನ್ನುವ ಅಂದಾಜು ಇದೆ. ಈ ಮೂಲಕ ಜಿ20 ರಾಷ್ಟ್ರಗಳ ಆರ್ಥಿಕತೆಯಲ್ಲಿ ಭಾರತ ಅಗ್ರಪಂಕ್ತಿ ಅಲಂಕರಿಸಿದೆ. ಶೇ.5ರಷ್ಟು ಬೆಳವಣಿಯೊಂದಿಗೆ ಇಂಡೋನೇಷ್ಯಾ ಎರಡನೇ ಸ್ಥಾನ ಮತ್ತು ಶೇ.4.8ರಷ್ಟು ಬೆಳವಣಿಯೊಂದಿಗೆ ಚೀನಾ ಮೂರನೇ ಸ್ಥಾನದಲ್ಲಿವೆ.
2024ರಲ್ಲಿ ಶೇ.7 ರಷ್ಟು ಜಿಡಿಪಿ ಬೆಳವಣಿಗೆಯ ದರದೊಂದಿಗೆ ಭಾರತವು ಜಿ20ಯಲ್ಲಿ ಮುನ್ನಡೆ ಸಾಧಿಸಿದೆ. ಇದು ಭಾರತದ ದೃಢವಾದ ಆರ್ಥಿಕತೆ ಮತ್ತು ಜಾಗತಿಕ ಸವಾಲುಗಳ ನಡುವೆಯೂ ದೇಶದ ಆರ್ಥಿಕತೆ ವೇಗವಾಗಿ ಬೆಳವಣಿಗೆ ಹೊಂದುತ್ತಿರುವುದನ್ನು ಸ್ಪಷ್ಟಪಡಿಸುತ್ತಿದೆ ಎಂದು ಬ್ರೆಜಿಲ್‌ನಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ರಾಷ್ಟ್ರಗಳ ಅಂದಾಜು ಜಿಡಿಪಿ ದರ ಪಟ್ಟಿ ಬಿಡುಗಡೆ ಮಾಡಿದ ನಂತರ ಕೇಂದ್ರ ಸರ್ಕಾರ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
As the G20 Summit begins today, let’s acknowledge India’s leadership on the global economic stage!
— MyGovIndia (@mygovindia) November 18, 2024
With a projected 7% GDP growth rate for 2024, India showcases its strength and resilience, emerging as a key player in navigating global challenges while maintaining a robust and… pic.twitter.com/GlwQCAyYTO
ಶೇ. 3.6 ರಷ್ಟು ಜಿಡಿಪಿ ಬೆಳವಣಿಗೆಯ ದರದೊಂದಿಗೆ ರಷ್ಯಾ ನಾಲ್ಕನೇ, ಶೃಂಗಸಭೆಯ ಆತಿಥೇಯ ರಾಷ್ಟ್ರ ಬ್ರೆಜಿಲ್ ಶೇ. 3ರಷ್ಟು ಜಿಡಿಪಿ ಬೆಳವಣಿಗೆಯ ದರದೊಂದಿಗೆ 5ನೇ ಸ್ಥಾನದಲ್ಲಿದೆ. ಆಫ್ರಿಕಾ ಶೇ.3ರಷ್ಟು ಜಿಡಿಪಿ ಬೆಳವಣಿಗೆಯ ದರದೊಂದಿಗೆ 6ನೇ ಸ್ಥಾನ ಮತ್ತು ಅಮೆರಿಕ ಶೇ.2.8ರಷ್ಟು ಜಿಡಿಪಿ ಬೆಳವಣಿಗೆಯ ದರದೊಂದಿಗೆ 7ನೇ ಸ್ಥಾನದಲ್ಲಿದೆ.
ಜಿ20ಯ ಇತರೆ ರಾಷ್ಟ್ರಗಳ ಅಂದಾಜು ಜಿಡಿಪಿ ದರ:
- ಸೌದಿ ಅರೇಬಿಯಾ: ಜಿಡಿಪಿ ದರ ಶೇ. 1.5
- ಕೆನಡಾ: ಜಿಡಿಪಿ ದರ ಶೇ. 1.3
- ಆಸ್ಟ್ರೇಲಿಯಾ: ಜಿಡಿಪಿ ದರ ಶೇ. 1.2
- ಫ್ರಾನ್ಸ್: ಜಿಡಿಪಿ ದರ ಶೇ. 1.1
- ಯುರೋಪ್ ಒಕ್ಕೂಟ: ಜಿಡಿಪಿ ದರ ಶೇ. 1.1
- ಯುಕೆ: ಜಿಡಿಪಿ ದರ ಶೇ. 1.1
- ಸೌತ್ ಆಫ್ರಿಕಾ: ಜಿಡಿಪಿ ದರ ಶೇ. 1.1
- ಇಟಲಿ: ಜಿಡಿಪಿ ದರ ಶೇ. 0.7
- ಜಪಾನ್: ಜಿಡಿಪಿ ದರ ಶೇ. 0.3
- ಜರ್ಮನಿ: ಜಿಡಿಪಿ ದರ ಶೇ. 0
ಇಂದು ಮತ್ತು ನಾಳೆ (ನ.18 ಮತ್ತು 19 ರಂದು) ನಡೆಯಲಿರುವ ಜಿ20 ಶೃಂಗಸಭೆ - 2024ಗಾಗಿ ಬ್ರೆಜಿಲ್‌ನ ರಿಯೋ ಡಿ ಜನೈರೊಕ್ಕೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭವ್ಯ ಸ್ವಾಗತ ಸಿಕ್ಕಿತು.
ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್, ಕೊರಿಯಾ, ಮೆಕ್ಸಿಕೋ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ರಷ್ಯಾ, ಟರ್ಕಿ, ಯುಕೆ, ಯುಎಸ್ಎ ಮತ್ತು ಯುರೋಪಿಯನ್ ಯೂನಿಯನ್ ರಾಷ್ಟ್ರಗಳು ಎರಡು ದಿನಗಳ ಶೃಂಗಸಭೆಯಲ್ಲಿ ಭಾಗವಹಿಸಿವೆ.
ಇದನ್ನೂ ಓದಿ: ಜಿ20 ಶೃಂಗಸಭೆ: ಬ್ರೆಜಿಲ್ಗೆ ಬಂದಿಳಿದ ಪ್ರಧಾನಿ ಮೋದಿ