ETV Bharat / lifestyle

ತುಂಬಾ ರುಚಿಕರ ತೊಂಡೆಕಾಯಿ ಚಟ್ನಿ: ಈ ರೆಸಿಪಿ ಹತ್ತೇ ನಿಮಿಷಗಳಲ್ಲಿ ತಯಾರಿಸಿ! - THONDEKAI CHUTNEY RECIPE

Thondekai Chutney Recipe: ಈ ಬಾರಿ ನಾವು ನಿಮಗಾಗಿ ಹೊಸದೊಂದು ಅಡುಗೆಯನ್ನು ತಂದಿದ್ದೇವೆ. ಅದುವೇ.. ರುಚಿಕರ 'ತೊಂಡೆಕಾಯಿ ಚಟ್ನಿ'. ಈ ರೆಸಿಪಿಯನ್ನು ಹತ್ತೇ ನಿಮಿಷಗಳಲ್ಲಿ ಸಿದ್ಧಪಡಿಸಬಹುದು.

Thondekai Chutney Recipe  Thondekai Chutney at home  Thondekai Chutney Recipe in Kannada  Thondekai Chutney
ತೊಂಡೆಕಾಯಿ ಚಟ್ನಿ (ETV Bharat)
author img

By ETV Bharat Lifestyle Team

Published : Nov 18, 2024, 11:33 AM IST

Thondekai Chutney Recipe: ಟೊಮೆಟೊ, ಸೌತೆಕಾಯಿ, ಈರುಳ್ಳಿ ಸೇರಿದಂತೆ ವಿವಿಧ ಚಟ್ನಿಗಳನ್ನು ಅನೇಕರು ಮನೆಯಲ್ಲಿ ತಯಾರಿಸುತ್ತಾರೆ. ಈ ಸಲ ನಾವು ನಿಮಗಾಗಿ ಹೊಸದೊಂದು ಆಹಾರದ ಬಗ್ಗೆ ತಿಳಿಸುತ್ತೇವೆ. ಅದುವೇ 'ತೊಂಡೆಕಾಯಿ ಚಟ್ನಿ'. ಹಾಗಾದ್ರೆ, ಇದೀಗ ಶೇಂಗಾದ ಕಾಂಬಿನೇಷನ್​ನಲ್ಲಿ ಟೇಸ್ಟಿ ತೊಂಡೆಕಾಯಿ ಚಟ್ನಿ ಮಾಡುವುದು ಹೇಗೆ ಅನ್ನೋದನ್ನು ಕಲಿಯೋಣ.

ನಾವು ತಿಳಿಸಿದ ನಿಮಯದ ಪ್ರಕಾರ, ಅಡುಗೆ ಮಾಡಿದರೆ ರುಚಿಯು ಹೆಚ್ಚಿರುತ್ತದೆ. ಈ ತೊಂಡೆಕಾಯಿ ಚಟ್ನಿಯನ್ನು ಬಿಸಿ ಚಪಾತಿ, ಜೋಳದ ರೊಟ್ಟಿ ಮತ್ತು ಅನ್ನ ತುಂಬಾ ಚೆನ್ನಾಗಿರುತ್ತದೆ. ಫ್ರಿಡ್ಜ್​ನಲ್ಲಿಟ್ಟರೆ ಎರಡು ವಾರಗಳವರೆಗೆ ಶೇಖರಣೆ ಮಾಡಿ ಇಡಬಹುದು. ಈಗ ತಡಮಾಡದೆ ರುಚಿಕರವಾದ ತೊಂಡೆಕಾಯಿ ಚಟ್ನಿ ಮಾಡುವುದು ಹೇಗೆ ಎಂಬುದನ್ನು ನೋಡೋಣ.

ತೊಂಡೆಕಾಯಿ ಚಟ್ನಿಗೆ ಬೇಕಾಗುವ ಪದಾರ್ಥಗಳು:

  • ತೊಂಡೆಕಾಯಿಗಳು- 1/4 ಕೆಜಿ
  • ಪಲ್ಲಿಲು - ಕಾಲು ಕಪ್
  • ಹಸಿ ಮೆಣಸಿನಕಾಯಿ - 10
  • ಬೆಳ್ಳುಳ್ಳಿ ಎಸಳು - 6
  • ಈರುಳ್ಳಿ - 1
  • ಟೊಮೆಟೊ - 2
  • ಹುಣಸೆಹಣ್ಣು - ನಿಂಬೆ ಗಾತ್ರದಷ್ಟು ತೆಗೆದುಕೊಳ್ಳಿ
  • ಎಣ್ಣೆ - 3 ಟೀಸ್ಪೂನ್
  • ರುಚಿಗೆ ತಕ್ಕಷ್ಟು ಉಪ್ಪು
  • ಕೊತ್ತಂಬರಿ ಪುಡಿ
  • ಜೀರಿಗೆ - ಟೀಸ್ಪೂನ್

ಚಟ್ನಿ ಸಿದ್ಧಪಡಿಸುವ ವಿಧಾನ:

  • ಮೊದಲು ತೊಂಡೆಕಾಯಿಗಳನ್ನು ತೊಳೆಯಿರಿ. ನಂತರ ತೆಳುವಾದ ತುಂಡುಗಳಾಗಿ ಕತ್ತರಿಸಿ.
  • ನಂತರ ಒಲೆಯ ಮೇಲೆ ಕಡಾಯಿ ಇಡಿ. ಎರಡು ಚಮಚ ಎಣ್ಣೆ ಹಾಕಿ ಬಿಸಿ ಮಾಡಿ ಇಟ್ಟುಕೊಳ್ಳಬೇಕಾಗುತ್ತದೆ. ಎಣ್ಣೆ ಬಿಸಿಯಾದ ನಂತರ ಶೇಂಗಾ, ಹಸಿಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪನ್ನು ಹುರಿಯಿರಿ.
  • ಶೇಂಗಾ ಹುರಿದ ಬಳಿಕ ಅವುಗಳನ್ನು ತಟ್ಟೆಯಲ್ಲಿ ತೆಗೆದುಕೊಳ್ಳಿ.
  • ಒಲೆಯ ಮೇಲಿನ ಬಾಣಲೆಗೆ ಸ್ವಲ್ಪ ಎಣ್ಣೆ, ಜೀರಿಗೆ ಹಾಕಿ ಹುರಿಯಿರಿ. ಬಳಿಕ ಕತ್ತರಿಸಿದ ತೊಂಡೆಕಾಯಿ ತುಂಡುಗಳು ಮತ್ತು ಸ್ವಲ್ಪ ಅರಿಶಿನ ಸೇರಿಸಿ ಫ್ರೈ ಮಾಡಿ.
  • ಅವುಗಳು ಸ್ವಲ್ಪ ಬೆಂದ ನಂತರ ಟೊಮೆಟೊ ಮತ್ತು ಹುಣಸೆಹಣ್ಣು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
  • ಬಾಣಲೆಯನ್ನು ಮುಚ್ಚಿ ಮತ್ತು ಮಿಶ್ರಣವನ್ನು 10 ನಿಮಿಷಗಳ ಕಾಲ ಕುದಿಸಿ, ನಂತರ ಸ್ಟವ್ ಆಫ್ ಮಾಡಿ.
  • ನಂತರ ಹುರಿದ ಶೇಂಗಾದ ಮಿಶ್ರಣ ಜೊತೆಗೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ನಂತರ ಇದನ್ನು ಬೇಯಿಸಿದ ತೊಂಡೆಕಾಯ ಮಿಶ್ರಣವನ್ನು ಹಾಕಿ ರುಬ್ಬಿಕೊಳ್ಳಿ.
  • ಕೊನೆಯಲ್ಲಿ ಈರುಳ್ಳಿ ಚೂರುಗಳನ್ನು ಹಾಕಿ ಮಿಕ್ಸ್​ ಮಾಡಿಕೊಳ್ಳಿ.
  • ಹೀಗೆ ಸರಳವಾಗಿ ಮಾಡಿದರೆ ತುಂಬಾ ರುಚಿಕರವಾದ ತೊಂಡೆಕಾಯಿ ಚಟ್ನಿ ಸೇವಿಸಲು ಸಿದ್ಧ
  • ಈ ಚಟ್ನಿಯನ್ನು ರೊಟ್ಟಿ, ಚಪಾತಿ ಮತ್ತು ಬಿಸಿ ಅನ್ನದೊಂದಿಗೆ ತಿಂದರೆ ರುಚಿ ಅದ್ಭುತ
  • ನಿಮಗೆ ಇಷ್ಟವಾದರೆ ಒಮ್ಮೆ ಟ್ರೈ ಮಾಡಿ ನೋಡಿ.

ಇವುಗಳನ್ನೂ ಓದಿ

ಒಂದೇ ರೀತಿಯ ಚಟ್ನಿ ತಿಂದು ಬೋರ್ ಆಯ್ತೇ? ಒಮ್ಮೆ ರಾಜಸ್ಥಾನದ 'ರೆಡ್​ ಚಿಲ್ಲಿ ಈರುಳ್ಳಿ ಚಟ್ನಿ' ಟ್ರೈ ಮಾಡಿ

ಮನೆಯಲ್ಲಿ ತರಕಾರಿ ಇಲ್ಲ ಎಂಬ ಚಿಂತೆ ಏಕೆ? ಹತ್ತೇ ನಿಮಿಷದಲ್ಲಿ ಮಾಡಿ ಈರುಳ್ಳಿ ಚಟ್ನಿ, ಸವಿದರೆ ದಿಲ್‌ಖುಷ್‌!

ಖಾರ -ಹುಳಿ- ಸಿಹಿ ಇರುವ ರುಚಿಕರ ಸ್ಪೆಷಲ್ ಶುಂಠಿ ಚಟ್ನಿ: ಇಡ್ಲಿ, ದೋಸೆ, ಅನ್ನದೊಂದಿಗೆ ತಿಂದ್ರೆ ಸಖತ್ ಟೇಸ್ಟಿ ಟೇಸ್ಟಿ!

ಬಾಂಬೆ ಚಟ್ನಿ ಗೊತ್ತೇ? ಪೂರಿ ಜೊತೆಗೆ ತಿಂದ್ರೆ ಸಖತ್ ರುಚಿ!

ಒಂದೇ ರೀತಿ ಚಟ್ನಿ ತಿಂದು ಬೋರ್​ ಅನಿಸಿದ್ರೆ, ಟ್ರೈ ಮಾಡಿ ಟೇಸ್ಟಿ ಟೊಮೆಟೊ - ಕೊಬ್ಬರಿ ಚಟ್ನಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.