ETV Bharat / entertainment

'ಮಂಜು ನಂಬಿಕೆಗೆ ಅರ್ಹರಲ್ಲ, ಗೌತಮಿ ಫೇಕ್'​: ವೈಲ್ಡ್​​ಕಾರ್ಡ್​ ಸ್ಪರ್ಧಿಗಳಿಂದ ನೇರನುಡಿ; ಅನುಷಾ ಎಲಿಮಿನೇಟ್​​​ - BIGG BOSS KANNADA 11

ಕನ್ನಡ ಬಿಗ್​ ಬಾಸ್​ಗೆ ಶೋಭಾ ಶೆಟ್ಟಿ ಮತ್ತು ರಜತ್​ ಕಿಶನ್​​ ವೈಲ್ಡ್​​ಕಾರ್ಡ್​ ಸ್ಪರ್ಧಿಗಳಾಗಿ ಎಂಟ್ರಿ ಕೊಟ್ಟಿದ್ದಾರೆ.

wild card and eliminated contestants
ವೈಲ್ಡ್​​ಕಾರ್ಡ್​ ಮತ್ತು ಎಲಿಮಿನೇಟೆಡ್​ ಸ್ಪರ್ಧಿಗಳು (Photo: Bigg Boss posters, social media)
author img

By ETV Bharat Entertainment Team

Published : Nov 18, 2024, 12:50 PM IST

ಬಿಗ್ ಬಾಸ್ ಕನ್ನಡ ಸೀಸನ್​ 11 ಏಳನೇ ವಾರ ಪೂರ್ಣಗೊಳಿಸಿ, ಎಂಟನೇ ವಾರ ಶುಭಾರಂಭ ಮಾಡಿದೆ. ಇಬ್ಬರು ವೈಲ್ಡ್​ಕಾರ್ಡ್​​ ಸ್ಪರ್ಧಿಗಳು ಮನೆಮಂದಿಗೆ ಸಿಹಿಕಹಿ ಹಂಚಿ ತಮ್ಮ ದಿನ ಆರಂಭಿಸುವಂತೆ ತೋರುತ್ತಿದೆ. ಕಳೆದ ಸಂಚಿಕೆಯಲ್ಲಿ ಅನುಷಾ ಅವರು ಎಲಿಮಿನೇಟ್​ ಆಗಿ ಮನೆಯಿಂದ ಹೊರಬಂದಿದ್ದಾರೆ.

''ಡಬಲ್ ವೈಲ್ಡ್ ಕಾರ್ಡ್ ಎಂಟ್ರಿಗೆ ಯಾರೆಲ್ಲಾ ಶೇಕ್ ಆದ್ರು?'' ಬಿಗ್ ಬಾಸ್ ಕನ್ನಡ ಸೀಸನ್ 11. ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್​ನೊಂದಿಗೆ ಬಿಗ್​ ಬಾಸ್​​ ಇಂದಿನ ಸಂಚಿಕೆಯ ಪ್ರೋಮೋ ಅನಾವರಣಗೊಳಿಸಿದೆ. ಈ ಪ್ರೋಮೋ ಸಂಪೂರ್ಣ ಸಂಚಿಕೆ ವೀಕ್ಷಿಸುವ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ. ಇಬ್ಬರು ವೈಲ್ಡ್​​​ಕಾರ್ಡ್​​ ಸ್ಪರ್ಧಿಗಳ ಎಂಟ್ರಿ ಬಹಳ ಅದ್ಧೂರಿಯಾಗಿಯೇ ಆಗಿದೆ.

ಮುಂಜಾನೆ ಸಾಂಗ್​ ಬದಲು, ತಂಡವೊಂದು ಒಳಗೆ ಆಗಮಿಸಿ ಮ್ಯೂಸಿಕ್​ ಪೂರೈಸಿದ್ದಾರೆ. ಈಗಾಗಲೇ 50 ದಿನಗಳನ್ನು ಪೂರೈಸಿರುವ ಬಿಗ್​ ಬಾಸ್​ ಶೋಗೆ ಕಿರುತೆರೆ ಲೋಕದ ಶೋಭಾ ಶೆಟ್ಟಿ ಮತ್ತು ರಜತ್​ ಕಿಶನ್​​​ ಎಂಟ್ರಿಕೊಟ್ಟಿದ್ದಾರೆ. ಅವರನ್ನು ಮನೆಮಂದಿ ಸ್ವಾಗತಿಸಿದ್ದಾರೆ. ನಂತರ, ಸ್ಪರ್ಧಿಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವ ಅವಕಾಶವನ್ನು ಈ ಇಬ್ಬರಿಗೆ ಕೊಟ್ಟಿದ್ದಾರೆ. ಜೊತೆಗೆ, ಕಾಯಿ ಒಡೆಯಬೇಕಿದೆ. ತ್ರಿವಿಕ್ರಮ್​​ ಅವರನ್ನು ಟೀಕಿಸಿದ ರಜತ್​, ನೀವು ಈ 50 ದಿನಗಳಲ್ಲಿ ಸಾಧಿಸಿರೋದನ್ನು ನಾನು ವೈಲ್ಡ್​ಕಾರ್ಡ್​ ಎಂಟ್ರಿ ಮೂಲಕ ಮಾಡಿ ತೋರಿಸುತ್ತೇನೆ ಎಂದು ಹೇಳಿದ್ದಾರೆ. ಶೋಭಿತಾ ಶೆಟ್ಟಿ ಮಾತನಾಡಿ, ಆಪ್ತ ಸ್ನೇಹಿತರಾದ ಮಂಜು ಮತ್ತು ಗೌತಮಿ ಬಗ್ಗೆ ವ್ಯಂಗ್ಯವಾಡಿದ್ದಾರೆ. ನೀವು ನಂಬಿಕೆಗೆ ಅರ್ಹರಲ್ಲ ಎಂದು ಮಂಜು ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿ ಕಾಯಿ ಒಡೆದಿದ್ದಾರೆ.

ಫ್ರೆಂಡ್​ ಅಂತಾರೆ, ಅವ್ರ್ ಬಗ್ಗೆ ಇವ್ರ್ ಮಾತನಾಡುತ್ತಿದ್ದಾರೆ, ಇವ್ರು ಬಗ್ಗೆ ಅವ್ರು ಮಾತನಾಡುತ್ತಿದ್ದಾರೆ. ಮುಖವಾಡ ಹಾಕೊಂಡಿದ್ದಾರೆ ಗೌತಮಿ ಅವ್ರು. ಆ ಒಂದು ಮುಖವಾಡವನ್ನು ನಾನು ಬಯಲು ಮಾಡಬಹುದು ಎಂದು ಹೇಳುತ್ತಾ ಕಾಯಿ ಒಡೆದಿದ್ದಾರೆ. ಆದ್ರೆ ಆ ಕಾಯಿ ಬ್ರೇಕ್​ ಆಗಿಲ್ಲ. ಗೌತಮಿ ವ್ಯಂಗ್ಯ ನಗು ಬೀರಿ, ಅದು ಕ್ರ್ಯಾಕ್​ ಆಗ್ಲಿಲ್ವಾ? ಒಡಿರಿ, ಒಡಿರಿ ಎಂದು ತಿಳಿಸಿದ್ದಾರೆ. ಮತ್ತೊಮ್ಮೆ ಕಾಯಿ ಒಡೆದು ಶುರುವಲ್ಲೇ ವೈರತ್ವ ಕಟ್ಟಿಕೊಳ್ಳುವಂತೆ ತೋರುತ್ತಿದೆ.

ಒಟ್ಟಾರೆ, ಮಂಜು, ಗೌತಮಿ ಟಾರ್ಗೆಟ್​ ಆದಂತೆ ತೋರುತ್ತಿದ್ದು, ಮುಂದೇನಾಗಬಹುದು? ಎಂಬ ಕುತೂಹಲ ಪ್ರೇಕ್ಷಕರಲ್ಲಿದೆ. ವೈಲ್ಡ್​​ಕಾರ್ಡ್​ ಎಂಟ್ರಿಗಳೊಂದಿಗೆ ಮನೆ ಮಂದಿ ಹೇಗೆ ಅಡ್ಜೆಸ್ಟ್ ಮಾಡಿಕೊಂಡು ಹೋಗ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ. ರಾತ್ರಿ ಪ್ರಸಾರ ಆಗಲಿರುವ ಇಂದಿನ ಸಂಚಿಕೆ ವೀಕ್ಷಿಸಲು ಪ್ರೇಕ್ಷಕರು ಕುತೂಹಲರಾಗಿದ್ದಾರೆ.

ಇದನ್ನೂ ಓದಿ: ಅಜ್ಜಿಯ ಆಸೆಯಂತೆ ಪ್ರೀತಿಸಿದ ಹುಡುಗಿಯೊಂದಿಗೆ ಡಾಲಿ ಧನಂಜಯ್‌ ನಿಶ್ಚಿತಾರ್ಥ: ಮದುವೆ ದಿನಾಂಕವೂ ಫಿಕ್ಸ್‌

ಅನುಷಾ ಎಲಿಮಿನೇಟ್​: ವಾರಾಂತ್ಯದ ಸಂಚಿಕೆಯ ಮಹತ್ವದ ಘಟ್ಟ ಎಲಿಮಿನೇಶನ್​ ಪ್ರೊಸೆಸ್​​ನ​ ಕೊನೆ ಸ್ಥಾನದಲ್ಲಿ ಅನುಷಾ ಮತ್ತು ಧರ್ಮ ಉಳಿದುಕೊಂಡಿದ್ದರು. ಸ್ನೇಹಿತರು ಮನೆಯೊಳಗೂ ಜೊತೆಯಾಗೇ ಎಂಟ್ರಿ ಕೊಟ್ಟಿದ್ದರು. ಫೈನಲಿ ಅನುಷಾ ಎಲಿಮಿನೇಟ್​ ಆಗಿ ಮನೆಯಿಂದ ಹೊರಬಂದಿದ್ದಾರೆ. ಗೆಳೆಯ ಧರ್ಮ ಕಣ್ಣೀರಿಟ್ಟು ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾದರು.

ಇದನ್ನೂ ಓದಿ: 'ಅಧಿಕಾರ ಬೇಡ, ಆದರೆ ರಾಜಕೀಯಕ್ಕೆ ಸಿದ್ಧತೆ ನಡೆಯುತ್ತಿದೆ': ಬೆದರಿಕೆಗಳು ಬಂದಿವೆ ಎಂದ ನಟ ಚೇತನ್ ಅಹಿಂಸಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.