ETV Bharat / entertainment

ಪುತ್ರನಿಗೆ 'ಬೇಬಿ ರೆಬೆಲ್​​' ಎಂದ ಅಭಿಷೇಕ್​: ಅಂಬರೀಶ್​ ಫೋಟೋವುಳ್ಳ ಪೋಸ್ಟ್​​​ ಕಂಡು ಫ್ಯಾನ್ಸ್ ಖುಷ್​ - ABISHEK AMBAREESH BABY

ಇತ್ತೀಚೆಗಷ್ಟೇ ತಂದೆಯಾಗಿರುವ ಅಭಿಷೇಕ್​ ಅಂಬರೀಶ್ ಸೋಷಿಯಲ್​ ಮೀಡಿಯಾದಲ್ಲಿ ವಿಶೇಷ ಪೋಸ್ಟ್ ಶೇರ್ ಮಾಡಿ ಗಮನ ಸೆಳೆದಿದ್ದಾರೆ. ​​

Abishek Ambareesh couple
ಅಭಿಷೇಕ್​ ಅಂಬರೀಶ್​ ದಂಪತಿ (Photo: ETV Bharat)
author img

By ETV Bharat Entertainment Team

Published : Nov 18, 2024, 5:44 PM IST

ಅಂಬಿ ಮನೆಗೆ ಮೊಮ್ಮಗನ ಆಗಮನವಾಗಿದೆ. ಇದೇ ನವೆಂಬರ್​​ 12ರಂದು ನಟ ಅಭಿಷೇಕ್​ ಅಂಬರೀಷ್​​ ಪತ್ನಿ ಅವಿವಾ ಬಿದ್ದಪ್ಪ ಗಂಡು ಮಗುವಿಗೆ ಜನ್ಮ ನೀಡಿದ್ದರು. ಪುತ್ರನ ಜನನದ ಬಳಿಕ ಇದೇ ಮೊದಲ ಬಾರಿಗೆ ಅಭಿಷೇಕ್​ ಅಂಬರೀಷ್​​ ವಿಶೇಷ ಪೋಸ್ಟ್​ ಒಂದನ್ನು ಹಂಚಿಕೊಂಡಿದ್ದಾರೆ. ಈ ಸ್ಪೆಷಲ್ ಪೋಸ್ಟ್​​ಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಪ್ರೀತಿಯ ಧಾರೆಯೆರೆಯುತ್ತಿದ್ದಾರೆ.

ಅಭಿಷೇಕ್​ ಅಂಬರೀಶ್​ ಇಂದು ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​​ ಶೇರ್​ ಮಾಡಿದ್ದಾರೆ. ಹಿನ್ನೆಲೆಯಲ್ಲಿ ತಂದೆ, ಕನ್ನಡ ಚಿತ್ರರಂಗ ಕಂಡ ಖ್ಯಾತ ನಟ ಅಂಬರೀಶ್​ ಅವರ ಫೋಟೋ ಇದೆ. ಜೊತೆಗೆ, ಫೋಟೋ ಮೇಲೆ ಇಟ್ಸ್ ಅ ಬಾಯ್​, ಬೇಬಿ ರೆಬೆಲ್​, 12.11.2024'' ಎಂದು ಬರೆಯಲಾಗಿದೆ. ಜೊತೆಗೆ, ಎರಡು ಪುಟ್ಟ ಹೆಜ್ಜೆಗಳು ಮತ್ತು ಹಾರ್ಟ್​​ ಸಿಂಬಲ್​ ಅನ್ನು ಕಾಣಬಹುದು. ಈ ಫೋಟೋ ಜೊತೆಗಿರುವ ಕ್ಯಾಪ್ಷನ್​ ಕೂಡಾ ಅಭಿಮಾನಿಗಳ ಗಮನ ಸೆಳೆದಿದೆ.

''ಎಲ್ಲರಿಗೂ ನಮಸ್ಕಾರ. ನವೆಂಬರ್ 12ರಂದು ನಮ್ಮ ಕುಟುಂಬಕ್ಕೆ ಅತೀವ ಸಂತಸದ ದಿನ. ರೆಬೆಲ್ ಸ್ಟಾರ್ ಅಂಬರೀಶ್ ಅಣ್ಣನ ಆಶೀರ್ವಾದ, ಗುರು-ಹಿರಿಯರ ಆಶೀರ್ವಾದದಿಂದ ಗಂಡು ಮಗು ಜನಿಸಿದ್ದು, ತಾಯಿ- ಮಗು ಆರೋಗ್ಯವಾಗಿದ್ದಾರೆಂದು ಈ ಮೂಲಕ ತಮ್ಮೆಲ್ಲರಿಗೂ ತಿಳಿಸಲು ಇಚ್ಛಿಸುತ್ತೇನೆ'' ಎಂದು ಬರೆದುಕೊಂಡಿದ್ದಾರೆ.

ರೆಬೆಲ್ ಸ್ಟಾರ್ ದಿ.ಅಂಬರೀಶ್ ಹಾಗೂ ಸುಮಲತಾ ದಂಪತಿಯ ಪುತ್ರ ಅಭಿಷೇಕ್ ಇತ್ತೀಚೆಗಷ್ಟೇ ತಂದೆಯಾಗಿ ಭಡ್ತಿ ಪಡೆದಿದ್ದಾರೆ. ಪತ್ನಿ ಅವಿವಾ ಬಿದ್ದಪ್ಪ ಕಳೆದ ಮಂಗಳವಾರ ಬೆಳಗ್ಗೆ 8.30ರ ಸುಮಾರಿಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಅಮ್ಮ ಮಗ ಇಬ್ಬರೂ ಆರೋಗ್ಯವಾಗಿದ್ದಾರೆ. ಸೆಪ್ಟೆಂಬರ್ ಆರಂಭದಲ್ಲಿ ಅಭಿಷೇಕ್ ಅಂಬರೀಶ್ ಅವರ ಜೆ.ಪಿ.ನಗರದ ನಿವಾಸದಲ್ಲಿ ಅವಿವಾ ಬಿದ್ದಪ್ಪ ಅವರ ಸೀಮಂತ ಶಾಸ್ತ್ರ ನೆರವೇರಿತ್ತು. ಈ ಸಮಾರಂಭಕ್ಕೆ ಆಪ್ತರು, ಸಿನಿ ಸ್ನೇಹಿತರು ಸಾಕ್ಷಿಯಾಗಿದ್ದರು.

Sumalatha Ambarish with grandchild
ಮೊಮ್ಮಗನೊಂದಿಗೆ ಸುಮಲತಾ ಅಂಬರೀಶ್​ (ETV Bharat)

ಇದನ್ನೂ ಓದಿ: ಶಿವರಾಜ್​ಕುಮಾರ್​​ 'ಭೈರತಿ ರಣಗಲ್​​'ಗೆ ಭರ್ಜರಿ ರೆಸ್ಪಾನ್ಸ್​​: ಮೊದಲ 3 ದಿನದ ಕಲೆಕ್ಷನ್​ ಮಾಹಿತಿ ಇಲ್ಲಿದೆ

ಅಭಿಷೇಕ್​ ಮತ್ತು ಅವಿವಾ ಪ್ರೀತಿಸಿ ಮದುವೆಯಾಗಿರುವ ಜೋಡಿ. 2023ರ ಜೂನ್ 7 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ವಿವಾಹ ಸಮಾರಂಭ ನೆರವೇರಿತ್ತು. ಅವಿವಾ, ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರ ಪುತ್ರಿ. ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಗಣ್ಯರ ಜೊತೆಗೆ ಭಾರತೀಯ ಚಿತ್ರರಂಗದ ಜನಪ್ರಿಯ ತಾರೆಯರಾದ ರಜನಿಕಾಂತ್, ಚಿರಂಜೀವಿ, ಮೋಹನ್ ಬಾಬು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: 'ಟೈಗರ್ ಶ್ರಾಫ್ ಕಾಣುವುದಕ್ಕಿಂತಲೂ ಹೆಚ್ಚು ಅದ್ಭುತ': 'ಬಾಘಿ 4' ನಿರ್ದೇಶಕ ಹರ್ಷ ಹೇಳಿದ್ದಿಷ್ಟು

ಈ ಹಿಂದೆ ಸುಮಲತಾ ಅವರು ಮೊಮ್ಮಗನನ್ನು ಎತ್ತಿಕೊಂಡಿರುವ ಸುಂದರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಇದೀಗ ಅಭಿಷೇಕ್​ ಅವರು ಹಂಚಿಕೊಂಡಿರುವ ಪೋಸ್ಟ್​ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸದ್ದು ಮಾಡುತ್ತಿದೆ. ನೆಟ್ಟಿಗರು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದು, ಮಂಡ್ಯದ ಮರಿ ರೆಬೆಲ್ ಎಂದು ಓರ್ವರು ಕಾಮೆಮಟ್​ ಮಾಡಿದ್ದಾರೆ. ಮಂಡ್ಯದ ಗಂಡು, ಮರಿ ಅಂಬಿ ಎಂದು ಮತ್ತೋರ್ವರು ತಿಳಿಸಿದ್ದಾರೆ. ಲಿಟಲ್​ ಮಂಡ್ಯ ಕಿಂಗ್​ ಎಂದು ಅಭಿಮಾನಿಯೋರ್ವರು ಕಾಮೆಂಟ್​ ಮಾಡಿದ್ದಾರೆ. ಹೀಗೆ ಸಾಕಷ್ಟು ಅಭಿಪ್ರಾಯಗಳು ವ್ಯಕ್ತವಾಗಿದ್ದು, ಅಭಿನಂದನಾ ಸಂದೇಶಗಳ ಮಳೆ ಸುರಿದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.