ETV Bharat / technology

ಶೀಘ್ರದಲ್ಲೇ ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಸ್​25 ಸೀರಿಸ್‌ ಮಾರುಕಟ್ಟೆಗೆ - SAMSUNG GALAXY S25 SERIES LAUNCH

Samsung Galaxy S25: ಗ್ಯಾಲಕ್ಸಿ ಎಸ್​25 ಸೀರಿಸ್ ಸ್ಮಾರ್ಟ್‌ಫೋನ್‌ಗಳನ್ನು ಸ್ಯಾಮ್​ಸಂಗ್ ಶೀಘ್ರವೇ ಮಾರುಕಟ್ಟೆಗೆ ಪರಿಚಯಿಸಲಿದೆ.

SAMSUNG GALAXY S25 SERIES LAUNCH  SAMSUNG INDIA  SAMSUNG GALAXY S25 SERIES SPECS  SAMSUNG GALAXY S25 SERIES
ಗ್ಯಾಲಕ್ಸಿ ಎಸ್​25 (Samsung)
author img

By ETV Bharat Tech Team

Published : Nov 18, 2024, 1:11 PM IST

Samsung Galaxy S25: ಬಹುನಿರೀಕ್ಷಿತ 'Samsung Galaxy S25' ಸೀರಿಸ್​ ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆಯಿಡಲಿದೆ. ಅಂದರೆ, ಮುಂದಿನ ವರ್ಷ ಜನವರಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಈ ಸ್ಮಾರ್ಟ್​ಫೋನ್​ಗಳನ್ನು ಅಮೆರಿಕದಲ್ಲಿ ನಡೆಯುವ 'ಗ್ಯಾಲಕ್ಸಿ ಅನ್ಪ್ಯಾಕ್ಡ್' ಸಮಾರಂಭದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ವರದಿಯಾಗಿದೆ. ಆದರೆ, ಸ್ಯಾಮ್​ಸಂಗ್ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ದಿ ಫೈನಾನ್ಶಿಯಲ್ ನ್ಯೂಸ್ (ಕೊರಿಯನ್) ವರದಿ ಪ್ರಕಾರ, 'ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಸ್​25' ಸೀರಿಸ್​ ಫೋನ್‌ಗಳು ಜನವರಿ 23, 2025ರಂದು ಬಿಡುಗಡೆಯಾಗಲಿದೆ. ಮುಂಬರುವ ಸಾಲಿನಲ್ಲಿ ನಿಯಮಿತವಾದ 'Galaxy S25', 'Galaxy S25+', 'Galaxy S25 Ultra' ಮಾದರಿಗಳು ಮತ್ತು ಬಹು ದಿನಗಳಿಂದ ವದಂತಿಯಲ್ಲಿರುವ 'Galaxy S25 Slim' ಮಾಡೆಲ್​ ಅನ್ನು ಸಹ ಸಮಾರಂಭದಲ್ಲಿ ಪರಿಚಯಿಸಬಹುದು ಎಂದು ತಿಳಿದು ಬಂದಿದೆ.

ಹೆಚ್ಚುವರಿಯಾಗಿ ಟಿಪ್‌ಸ್ಟರ್ ಮ್ಯಾಕ್ಸ್‌ಜಾಂಬೋರ್ ಈ ಲಾಂಚ್​ ಟೈಮ್‌ಲೈನ್ ಅನ್ನು ಸ್ಕೆಪ್ಟಿಕ್ 'ಎಕ್ಸ್' ಪೋಸ್ಟ್‌ನಲ್ಲಿ ದೃಢಪಡಿಸಿದ್ದಾರೆ. ಜನವರಿ 22ರಂದು ಸ್ಯಾಮ್‌ಸಂಗ್ ಗ್ಯಾಲಕ್ಸಿ ಅನ್ಪ್ಯಾಕ್ಡ್ ಈವೆಂಟ್ ನಡೆಸಬಹುದು ಎಂದು ಅವರು ಹೇಳಿದ್ದಾರೆ. Q3 ಗಳಿಕೆಯ ಕರೆ ಸಮಯದಲ್ಲಿ Samsung Electronics 'Galaxy S25' ಸರಣಿಯನ್ನು ಮುಂದಿನ ವರ್ಷದ ಮೊದಲಾರ್ಧದಲ್ಲಿ ಅನಾವರಣಗೊಳಿಸಲಾಗುವುದು ಎಂದು ಬಹಿರಂಗಪಡಿಸಿತು. ಆದರೂ ಕಂಪನಿ, ಬಿಡುಗಡೆ ದಿನಾಂಕವನ್ನು ಪ್ರಕಟಿಸಿಲ್ಲ.

ಗ್ಯಾಲಕ್ಸಿ ಎಸ್​25 ಶ್ರೇಣಿಯಲ್ಲಿರುವ ಎಲ್ಲಾ ಫೋನ್‌ಗಳು ಸ್ನಾಪ್‌ಡ್ರಾಗನ್ 8 ಎಲೈಟ್ ಚಿಪ್‌ಸೆಟ್‌ನೊಂದಿಗೆ ಬರುತ್ತವೆ ಎಂದು ವರದಿಯಾಗಿದೆ. ಹೊಸ Galaxy AI ವೈಶಿಷ್ಟ್ಯಗಳಿರುವ ಸಾಧ್ಯತೆಯಿದೆ. Galaxy S25, Galaxy S25 Ultra ಏಳು ಬಣ್ಣಗಳಲ್ಲಿ ಲಭ್ಯವಿದೆ. Galaxy S25+ ಎಂಟು ಬಣ್ಣ​ಗಳಲ್ಲಿ ಗ್ರಾಹಕರಿಗೆ ದೊರೆಯಲಿದೆ.

ಈ ಫೋನ್‌ಗಳು ಮುಂದಿನ ವರ್ಷ ಜನವರಿ 5ರಂದು ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ವರದಿಗಳು ಹೇಳುತ್ತಿವೆ. 'Galaxy S24' ಸರಣಿಯನ್ನು ಕಳೆದ ಜನವರಿ 17ರಂದು ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್‌ನಲ್ಲಿ ಆರಂಭಿಸಲಾಯಿತು. 'Galaxy S23' ಸರಣಿಯನ್ನು ಕಳೆದ ಫೆಬ್ರವರಿ 1ರಂದು ಲಾಂಚ್ ಮಾಡಲಾಗಿತ್ತು.

ಇದನ್ನೂ ಓದಿ: 50ನೇ ವಾರ್ಷಿಕೋತ್ಸವ ಸಂಭ್ರಮದಲ್ಲಿ ರಿಂಗ್​ ವಾಚ್​ ಪರಿಚಯಿಸಿದ ಕ್ಯಾಸಿಯೊ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.