ಶಿವಮೊಗ್ಗ: ಪೆಟ್ರೋಲ್ ಹಾಕುವಾಗ ಧಗ ಧಗನೇ ಉರಿದ ಓಮ್ನಿ ಕಾರು, ನಾಲ್ವರಿಗೆ ಗಾಯ - OMNI CAR CAUGHT FIRE
🎬 Watch Now: Feature Video
Published : Nov 17, 2024, 7:50 PM IST
ಶಿವಮೊಗ್ಗ : ತೀರ್ಥಹಳ್ಳಿ ತಾಲೂಕು ಹೊನ್ನಾಪುರ ಗ್ರಾಮದ ಬಳಿ ಓಮ್ನಿ ಕಾರಿಗೆ ಪೆಟ್ರೋಲ್ ಹಾಕುವಾಗ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ನಂತರ ಇದು ಕಾರಿಗೆ ವ್ಯಾಪಿಸಿ, ಕಾರು ಧಗ ಧಗನೆ ಉರಿದು ಸುಟ್ಟು ಕರಕಲಾಗಿದೆ.
ಮೊಹಮ್ಮದ್ ಸನಾವುಲ್ಲಾ ಎಂಬುವರಿಗೆ ಸೇರಿದ ಓಮ್ನಿ ಕಾರು ಇದಾಗಿದೆ. ಸನಾವುಲ್ಲಾ ಮಂಗಳೂರು ಆಸ್ಪತ್ರೆಗೆ ಹೋಗಿ ಶಿವಮೊಗ್ಗಕ್ಕೆ ವಾಪಸ್ ಬರುವಾಗ ಕಾರಿಗೆ ಬೆಂಕಿ ಬಿದ್ದಿದೆ.
ಮಂಗಳೂರಿನಿಂದ ವಾಪಸ್ ಆಗುವಾಗ ಕಾರಿನ ಪೆಟ್ರೋಲ್ ಖಾಲಿಯಾಗಿತ್ತು. ಆಗ ಅವರು ಹೊನ್ನಾಪುರ ಗ್ರಾಮದ ರಸ್ತೆ ಪಕ್ಕದಲ್ಲಿ ಕಾರು ನಿಲ್ಲಿಸಿ, ಪೆಟ್ರೋಲ್ ಹಾಕುವಾಗ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕಾರಿನಲ್ಲಿ ಒಟ್ಟು ಐದು ಜನ ಪ್ರಯಾಣ ಮಾಡುತ್ತಿದ್ದರು. ಕಾರಿನಲ್ಲಿದ್ದ ನಾಲ್ವರಿಗೆ ಬೆಂಕಿಯಿಂದ ಸಣ್ಣಪುಟ್ಟ ಗಾಯಗಳಾಗಿವೆ. ವಿಷಯ ತಿಳಿದು ಸ್ಥಳಕ್ಕೆ ಬಂದ ತೀರ್ಥಹಳ್ಳಿ ಅಗ್ನಿ ಶಾಮಕದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಈ ಕುರಿತು ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಬೆಂಗಳೂರು: ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊತ್ತಿ ಉರಿದ ಕಾರು, ಪ್ರಯಾಣಿಕರು ಪಾರು - Car Caught Fire