ETV Bharat / technology

ವಾಟ್ಸ್​​​​ಆ್ಯಪ್​​​​​​​ನಲ್ಲಿ ಬ್ಲೂ ಸರ್ಕಲ್​ ಕಾಣಿಸುತ್ತಿದೆಯೆ?: ಇದರ ಉಪಯೋಗಳು ತಿಳಿದ್ರೇ ಶಾಕ್​! - META AI ON WHATSAPP

Meta AI on WhatsApp: ವಾಟ್ಸ್​​​​ಆ್ಯಪ್​ನಲ್ಲಿರುವ ಮೆಟಾ ಎಐ ಯಾರಿಗೆ ಉಪಯೋಗ, ಇದು ಬಳಸುವುದು ಹೇಗೆ, ಇದರಿಂದ ಬಳಕೆದಾರರಿಗೆ ಲಾಭವೇನು ಎಂಬ ಇತ್ಯಾದಿಗಳನ್ನು ತಿಳಿದುಕೊಳ್ಳೋಣ ಬನ್ನಿ..

META AI  HOW TO USE META AI ON WHATSAPP  USE OF META AI ON WHATSAPP  BENEFITS OF META AI
ಬ್ಲೂ ಸರ್ಕಲ್ (Photo Credit- Meta)
author img

By ETV Bharat Tech Team

Published : Dec 28, 2024, 9:29 AM IST

Meta AI on WhatsApp: ಫೇಸ್​ಬುಕ್​ ಮಾತೃಸಂಸ್ಥೆ ಮೆಟಾ ವಾಟ್ಸ್​​​​ಆ್ಯಪ್​ನಲ್ಲಿ ತನ್ನ 'ಮೆಟಾ ಎಐ' ಚಾಟ್ ಬ್ಯಾಟ್ ಸೇವೆಯೊಂದಿಗೆ ಬಳಕೆದಾರರ ಇಂಟರಾಕ್ಷನ್​​ ಇನ್ನಷ್ಟು ಸುಧಾರಿಸುತ್ತಿದೆ. ಪ್ರಸ್ತುತ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಬಳಕೆ ಹೆಚ್ಚುತ್ತಿರುವ ಕಾಲದಲ್ಲಿ ಕಂಪನಿಯು ಇತ್ತೀಚೆಗೆ ಈ ಚಾಟ್‌ಬಾಟ್ ಅನ್ನು ಪರಿಚಯಿಸಿದೆ. ಬಳಕೆದಾರರ ಕಾನ್ವರ್ಜೆಶನ್‌ಗಳನ್ನು ಸ್ಮಾರ್ಟ್‌ಗಳನ್ನಾಗಿ, ಹೆಚ್ಚು ಸಮರ್ಥವಾಗಿ ಮಾಡಲು ಈ ವೈಶಿಷ್ಟ್ಯವನ್ನು ಭಾರತದ ಜೊತೆ ನಿಯಮಿತವಾಗಿ ಇತರ ದೇಶಗಳಲ್ಲಿ ಸಹ ಪರಿಚಯಿಸಲಾಗುತ್ತಿದೆ.

ಆಹಾರದ ಪ್ರಶ್ನೆಗಳಿಗೆ ಉತ್ತರವನ್ನು ನೀಡಲು, ಟೆಕ್ಸ್ಟ್ ಕಂಟೆಂಟ್ ಅನ್ನು ಪ್ರಿಪೇರ್ ಮಾಡಲು, ಟೆಕ್ಸ್ಟ್ ಪ್ರಾಂಪ್ಟ್‌ನಿಂದ ಇಮೇಜ್‌ಗಳನ್ನು ಕ್ರಿಯೇಟ್ ಮಾಡುವುದು, ಸಮ್ರೀಸ್ ಮತ್ತು ಟ್ರಾನ್ಸ್‌ಲೇಷನ್ಸ್ ಜೊತೆಗೆ ಇತರ ಟಾಸ್ಕ್‌ಗಳಲ್ಲಿ ಸಹಾಯ ಮಾಡಲು ಇದನ್ನು ಬಳಸಬಹುದು. ಮೆಟಾ.. ಇದನ್ನು ಭಾರತ, ಅಮೆರಿಕ, ಆಸ್ಟ್ರೇಲಿಯಾ, ಯುನೈಟೆಡ್ ಕಿಂಗ್ಡಮ್, ಕೆನಡಾ, ಸಿಂಗಪುರ್ ಸೇರಿದಂತೆ 12 ದೇಶಗಳಲ್ಲಿ ಲಭ್ಯವಿದೆ. ಕಂಪನಿ ಇದನ್ನು ಭವಿಷ್ಯದಲ್ಲಿ ಹೆಚ್ಚು ವಿಸ್ತರಿಸಲು ಯೋಚಿಸುತ್ತಿದೆ.

ಈ 'Meta AI'ನು ವಾಟ್ಸ್​​​​ಆ್ಯಪ್, ಬುಕ್, ಮೆಸೆಂಜರ್, ಇನ್​ಸ್ಟಾಗ್ರಾಮ್ ಸೇರಿದಂತೆ meta.ai ಪೋರ್ಟಲ್‌ನಲ್ಲಿ ಬಳಸಬಹುದು ಎಂದು ಕಂಪನಿ ಸ್ಪಷ್ಟಪಡಿಸಿದೆ. ಬಳಕೆದಾರರು ಎಐ ಫೋಟೋಗಳನ್ನು ಉಚಿತವಾಗಿ ರಚಿಸಬಹುದು. ಮೆಟಾ ಅಭಿವೃದ್ಧಿಪಡಿಸಿದ ಈ ಎಐಲಾಮಾ 3.2 ಭಾಷಾ ಮಾದರಿಯ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ.

ಪ್ರಸ್ತುತ ಈ ಟೂಲ್​ ಇಂಗ್ಲಿಷ್ ಭಾಷೆಯನ್ನು ಮಾತ್ರ ಬೆಂಬಲಿಸುತ್ತಿದೆ. ಶೀಘ್ರದಲ್ಲೇ ಇದು ಇತರ ಭಾಷೆಗಳಲ್ಲಿಯೂ ಲಭ್ಯವಾಗಲಿದೆ. ಇದು ನೇರವಾಗಿ ವಾಟ್ಸ್​​​​ಆ್ಯಪ್​​​ಗೆ ಸಂಯೋಜನೆಗೊಳ್ಳುತ್ತದೆ ಮತ್ತು ಸೃಜನಶೀಲತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಕಳುಹಿಸಿದ ಸಂದೇಶಗಳನ್ನು ಮಾತ್ರ ಪ್ರಕ್ರಿಯೆಗೊಳಿಸುವ ಮೂಲಕ ಬಳಕೆದಾರರ ಗೌಪ್ಯತೆಯನ್ನು ರಕ್ಷಿಸುತ್ತದೆ. ಈ ವೇಳೆ ವಾಟ್ಸಾಪ್​ ವೈಯಕ್ತಿಕ ಚಾಟ್‌ನಲ್ಲಿ 'Meta AI' ನೊಂದಿಗೆ ಸಂವಹನ ನಡೆಸುವುದು ಹೇಗೆ ಎಂದು ಈಗ ಕಲಿಯೋಣ ಬನ್ನಿ.

'ಮೆಟಾ ಎಐ' ಬಳಸುವುದು ಹೇಗೆ?:

  • ಮೊದಲು ನಿಮ್ಮ ಆಂಡ್ರಾಯ್ಡ್ ಅಥವಾ ಐಒಎಸ್ ಸಾಧನದಲ್ಲಿ ವಾಟ್ಸ್​​​​ಆ್ಯಪ್ ಓಪನ್​ ಮಾಡಿ.
  • 'Meta AI' ಐಕಾನ್: ಆಂಡ್ರಾಯ್ಡ್​ ಬಳಕೆದಾರರಿಗೆ ವಾಟ್ಸಾಪ್​ನಲ್ಲಿ 'Meta AI' ಐಕಾನ್ ಮೇನ್​ ಸ್ಕ್ರೀನ್​ನಲ್ಲಿ 'ನ್ಯೂ ಚಾಟ್' ಮೇಲೆ ಕಾಣಿಸಿಕೊಳ್ಳುತ್ತದೆ. ಐಒಎಸ್ ಬಳಕೆದಾರರಿಗೆ, ಈ ಐಕಾನ್ ಇನ್‌ಬಾಕ್ಸ್‌ನಲ್ಲಿ ಸ್ಕ್ರೀನ್​ ಮೇಲ್ಭಾಗದಲ್ಲಿ ಗೋಚರಿಸುತ್ತದೆ.
  • ಚಾಟ್ ವಿಂಡೋ: ಈಗ ಪ್ರತ್ಯೇಕ ಚಾಟ್ ವಿಂಡೋವನ್ನು ಓಪನ್​ ಮಾಡಲು 'Meta AI' ಐಕಾನ್ ಮೇಲೆ ಕ್ಲಿಕ್ ಮಾಡಿ. ಈ ಚಾಟ್ ವಿಂಡೋದಲ್ಲಿ ನೀವು ಎಐನೊಂದಿಗೆ ಚಾಟ್ ಮಾಡಲು ಪ್ರಾರಂಭಿಸಬಹುದು.
  • ಆದರೆ, ಈ ಟೂಲ್​ ಪ್ರಸ್ತುತ ಇಂಗ್ಲಿಷ್ ಭಾಷೆಗೆ ಮಾತ್ರ ಸೀಮಿತವಾಗಿದೆ. ಹಾಗಾಗಿ ಬಳಕೆದಾರರು 'Meta AI' ಗೆ ಯಾವುದೇ ಪ್ರಶ್ನೆಯನ್ನು ಕೇಳಲು ಬಯಸಿದರೆ ಅವರು ಇಂಗ್ಲಿಷ್‌ನಲ್ಲಿ ಮಾತ್ರ ಟೈಪ್ ಮಾಡಬೇಕು. 'ಮೆಟಾ ಎಐ' ನೀವು ಕೇಳುವ ಯಾವುದೇ ವಿವಿಧ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುತ್ತದೆ ಮತ್ತು ಉತ್ತರಿಸುತ್ತದೆ.
  • ಇದು ನಿಮ್ಮ ವಿವರಣೆಯನ್ನು ಆಧರಿಸಿ ತಕ್ಷಣವೇ ಚಿತ್ರವನ್ನು ರಚಿಸಲು ಸಾಧ್ಯವಿಲ್ಲ. ಸೃಜನಾತ್ಮಕ ಕಲ್ಪನೆಗಳನ್ನು ದೃಶ್ಯೀಕರಿಸಲು ಅಥವಾ ಗ್ರಾಫಿಕ್ಸ್ ಕ್ರಿಯೆಟ್​ ಮಾಡಲು ಈ ವೈಶಿಷ್ಟ್ಯವು ವಿಶೇಷವಾಗಿ ಉಪಯುಕ್ತವಾಗಿದೆ.

ಓದಿ: ಪ್ರಜ್ವಲಿಸುವ ಸೂರ್ಯನ ಸಮೀಪಕ್ಕೆ ತಲುಪಿದ ಬಳಿಕವೂ ಈ ಬಾಹ್ಯಾಕಾಶ ನೌಕೆ ಜೀವಂತವಾಗಿರುವುದು ಹೇಗೆ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.