ETV Bharat / state

ಅಂಬೇಡ್ಕರ್ ಕುರಿತು ಅಮಿತ್​​​ ಶಾ ಹೇಳಿಕೆ ಖಂಡಿಸಿ ಬಳ್ಳಾರಿಯ ಕಂಪ್ಲಿ ಸಂಪೂರ್ಣ ಬಂದ್​! - BANDH IN KAMPLI TALUK

ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬಳ್ಳಾರಿಯ ಕಂಪ್ಲಿ ತಾಲೂಕಿನಲ್ಲಿ ಇಂದು ಬಂದ್​ ಹೇರಲಾಗಿದೆ.

BANDH  BALLARI  AMIT SHAH  AMBEDKAR
ಅಂಬೇಡ್ಕರ್ ಕುರಿತು ಅಮಿತ್​​​ ಶಾ ಹೇಳಿಕೆ ಖಂಡಿಸಿ ಬಳ್ಳಾರಿಯ ಕಂಪ್ಲಿ ಸಂಪೂರ್ಣ ಬಂದ್​! (ETV Bharat)
author img

By ETV Bharat Karnataka Team

Published : Dec 30, 2024, 2:08 PM IST

ಬಳ್ಳಾರಿ: ಡಾ. ಬಿ.ಆರ್​​​. ಅಂಬೇಡ್ಕರ್​​​​ ಅವರ ಕುರಿತಾದ ಕೇಂದ್ರ ಗೃಹ ಸಚಿವ ಅಮಿತ್​​​ ಶಾ ಹೇಳಿಕೆ ಖಂಡಿಸಿ ಇಂದು ಜಿಲ್ಲೆಯ ಕಂಪ್ಲಿ ತಾಲೂಕು ಸಂಪೂರ್ಣ ಬಂದ್​ ಆಗಿದೆ.

ಸಂವಿಧಾನ ಶಿಲ್ಪಿ ಅಂಬೇಡ್ಕರ್​​​ ಅವರ ಬಗ್ಗೆ ಬಿಜೆಪಿಗರು ಅವಮಾನ ಮಾಡುವುದೇ ಕಾಯಕ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿರುವ ವಿವಿಧ ಸಂಘಟನೆಗಳ ಪ್ರತಿಭಟನಕಾರರು ಬೆಳಗ್ಗೆ 6 ಗಂಟೆಯಿಂದಲೇ ಬಂದ್​ ಆರಂಭಿಸಿದ್ದಾರೆ. ಬಂದ್​ ಇದ್ದರೂ ಕಂಪ್ಲಿಯಲ್ಲಿ ಎಂದಿನಂತೆ ದಿನಸಿ ಮಾರುಕಟ್ಟೆಗಳು, ಮತ್ತು ಆಟೋ, ಕ್ಯಾಬ್​ ಮಾತ್ರ ಓಪನ್ ಇತ್ತು. ಇವುಗಳನ್ನು 10 ಗಂಟೆ ಬಳಿಕ ಬಂದ್​ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕನ್ನಡಪರ ಸಂಘಟನೆಗಳು, ವ್ಯಾಪಾರಿ ಸಂಘಟನೆಗಳು ಬಂದ್​ಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ಶಾಲೆ ಕಾಲೇಜುಗಳಿಗೆ ಯಾವ ಸಮಸ್ಯೆ ನೀಡದೇ ಅವುಗಳು ಎಂದಿನಂತೆ ನಡೆಯಲು ಅವಕಾಶ ಮಾಡಿದ್ದಾರೆ. ಬಂದ್​​​ ಹಿನ್ನೆಲೆ ಕಂಪ್ಲಿ ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆಯಾಗಿ ನಗರದಾದ್ಯಂತ ಹಲವು ಕಡೆ ಅಲ್ಲಲ್ಲಿ ಪೊಲೀಸ್ ತುಕಡಿ ನಿಯೋಜನೆಗೊಂಡಿದೆ.

ಇದನ್ನೂ ಓದಿ: ಅಂಬೇಡ್ಕರ್ ಬಗ್ಗೆ ಅಮಿತ್​ ಶಾ ಹೇಳಿಕೆಗೆ ಖಂಡನೆ: ಜ.3ರಂದು ಕೋಲಾರ ಬಂದ್‌ಗೆ ಕರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.