"ಶಿವಮೊಗ್ಗ ದುರಂತ ಪರಿಶೀಲನೆಗೆ ಕಂದಾಯ ಇಲಾಖೆಯಿಂದ ತಂಡ ರಚನೆ": ಆರ್.​ ಅಶೋಕ್​ ಹೇಳಿಕೆ

🎬 Watch Now: Feature Video

thumbnail
ಬೆಂಗಳೂರು: ಶಿವಮೊಗ್ಗದಲ್ಲಿ ನಡೆದ ದುರಂತದ ಬಗ್ಗೆ ಕಂದಾಯ ಸಚಿವ ಆರ್​. ಅಶೋಕ್​ ಮಾತನಾಡಿದ್ದು, ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಇನ್ನು ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. "ಈಗಾಗಲೇ ಶಾಸಕರು, ಸಂಸದರು, ಸಚಿವರು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ನೀಡುವ ಕಾರ್ಯ ಮಾಡುತ್ತಿದ್ದಾರೆ. ಕಂದಾಯ ವಿಪತ್ತು ನಿರ್ವಹಣಾ ಇಲಾಖೆಯಿಂದ ತಂಡ ರಚಿಸಿ ಘಟನೆಗೆ ಕಾರಣ ಏನೆಂದು ತಿಳಿಯುವ ಪ್ರಯತ್ನ ಮಾಡಲಿದ್ದೇವೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವೈಜ್ಞಾನಿಕ ಅಧಿಕಾರಿ ಎಸ್ ಜಗದೀಶ್ ಮತ್ತು ಕಿರಿಯ ವೈಜ್ಞಾನಿಕ ಅಧಿಕಾರಿ ರಮೇಶ್ ನೇತೃತ್ವದ ತಂಡ ಶಿವಮೊಗ್ಗಕ್ಕೆ ತೆರಳಲಿದೆ" ಎಂದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.