ETV Bharat / bharat

ಆಂಧ್ರದಲ್ಲಿ ಇಂದಿನಿಂದ ಸರ್ಕಾರಿ ಸೇವೆಗಳು WhatsAppನಲ್ಲೇ ಲಭ್ಯ; ದೇಶದಲ್ಲಿ ಇದು ಮೊದಲ ಪ್ರಯತ್ನ - WHATSAPP GOVERNANCE

ಆಂಧ್ರ ಪ್ರದೇಶದಲ್ಲಿ ಇಂದಿನಿಂದ ವಾಟ್ಸ್‌ಆ್ಯಪ್ ಆಡಳಿತ ಆರಂಭವಾಗಲಿದೆ.

ಆಂಧ್ರದಲ್ಲಿ ಇಂದಿನಿಂದ ವಾಟ್ಸ್ ಆ್ಯಪ್ ಆಡಳಿತ ಜಾರಿ: ಇನ್ನು ಸರ್ಕಾರಿ ಸೇವೆಗಳು ವಾಟ್ಸ್​ ಆ್ಯಪ್​ನಲ್ಲೇ ಲಭ್ಯ
ಆಡಳಿತದಲ್ಲಿ ವಾಟ್ಸ್‌ಆ್ಯಪ್ ಬಳಕೆ (IANS)
author img

By ETV Bharat Karnataka Team

Published : Jan 30, 2025, 1:08 PM IST

ಅಮರಾವತಿ(ಆಂಧ್ರ ಪ್ರದೇಶ): ಭಾರತದಲ್ಲಿ ಮೊದಲ ಬಾರಿಗೆ ಆಂಧ್ರ ಪ್ರದೇಶ ಸರ್ಕಾರವು ಇಂದಿನಿಂದ ವಾಟ್ಸ್‌ಆ್ಯಪ್ ಆಡಳಿತವನ್ನು ಪ್ರಾರಂಭಿಸಲಿದೆ. ವಾಟ್ಸ್‌ಆ್ಯಪ್ ಮೂಲಕವೇ ನಾಗರಿಕ ಸೇವೆಗಳನ್ನು ಒದಗಿಸುವುದು, ಸಾರ್ವಜನಿಕರ ಕುಂದುಕೊರತೆ ಪರಿಹರಿಸುವುದು ಮತ್ತು ಅಗತ್ಯ ಮಾಹಿತಿಯನ್ನು ಒದಗಿಸುವುದು ವಾಟ್ಸ್‌ಆ್ಯಪ್ ಆಡಳಿತದ ಉದ್ದೇಶವಾಗಿದೆ. ಮೊದಲ ಹಂತದಲ್ಲಿ 161 ಸೇವೆಗಳನ್ನು ವಾಟ್ಸ್‌ಆ್ಯಪ್​ನೊಂದಿಗೆ ಜೋಡಿಸಲಾಗುತ್ತಿದ್ದು, ಮುಂದಿನ ಹಂತಗಳಲ್ಲಿ ಸರ್ಕಾರದ ಮತ್ತಷ್ಟು ಸೇವೆಗಳನ್ನು ಸೇರಿಸಲಾಗುವುದು. ಐಟಿ ಸಚಿವ ನಾರಾ ಲೋಕೇಶ್ ಗುರುವಾರ ಅಧಿಕೃತವಾಗಿ ಈ ಸೇವೆಗೆ ಚಾಲನೆ ನೀಡಲಿದ್ದಾರೆ.

ಹಂತ 1ರಲ್ಲಿ ವಾಟ್ಸ್‌ಆ್ಯಪ್ ಆಡಳಿತಕ್ಕೆ ಜೋಡಣೆಯಾಗಲಿರುವ ಇಲಾಖೆಗಳು ಹೀಗಿವೆ:

  • ಕಂದಾಯ
  • ಪುರಸಭೆ ಆಡಳಿತ
  • ದತ್ತಿಗಳು
  • ಇಂಧನ
  • ಆಂಧ್ರ ಪ್ರದೇಶ ರಸ್ತೆ ಸಾರಿಗೆ ಇಲಾಖೆ

ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ಬುಧವಾರ ಯೋಜನೆಯನ್ನು ಪರಿಶೀಲಿಸಿದರು. ವಾಟ್ಸ್‌ಆ್ಯಪ್ ಮೂಲಕ ಸೇವೆಗಳನ್ನು ಹೇಗೆ ಜನರಿಗೆ ತಲುಪಿಸಲಾಗುತ್ತದೆ ಎಂಬುದನ್ನು ಅಧಿಕಾರಿಗಳು ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳಿಗೆ ಪ್ರಾತ್ಯಕ್ಷಿಕೆ ತೋರಿಸಿದರು. ಈ ವ್ಯವಸ್ಥೆಯು ಮೂಲಭೂತ ಸೇವೆಗಳಿಗಾಗಿ ಜನತೆ ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುತ್ತದೆ ಎಂದು ಸಿಎಂ ಹೇಳಿದರು.

ಸೈಬರ್ ಅಪಾಯದಿಂದ ನಾಗರಿಕರ ಡೇಟಾವನ್ನು ರಕ್ಷಿಸುವಂತೆ, ವಿಧಿವಿಜ್ಞಾನ ಮತ್ತು ಸೈಬರ್ ಸುರಕ್ಷತಾ ಕ್ರಮಗಳನ್ನು ಬಲಪಡಿಸುವಂತೆ ಮತ್ತು ಕಟ್ಟುನಿಟ್ಟಾದ ರಕ್ಷಣಾ ಪ್ರೋಟೋಕಾಲ್​ಗಳನ್ನು ಅಳವಡಿಸಿಕೊಳ್ಳುವಂತೆ ಸಿಎಂ ನಾಯ್ಡು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ವಾಟ್ಸ್‌ಆ್ಯಪ್ ಮೂಲಕ ಸರ್ಕಾರದ ಸೇವೆಗಳನ್ನು ಜನರಿಗೆ ತಲುಪಿಸಲು ರಾಜ್ಯವು ಅಕ್ಟೋಬರ್ 22, 2023ರಂದು ಮೆಟಾದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಇದು ಆಂಧ್ರ ಪ್ರದೇಶ ಸರ್ಕಾರದ ಡಿಜಿಟಲ್ ಫಸ್ಟ್​ ನೀತಿಗೆ ಅನುಗುಣವಾಗಿದೆ.

ವಾಟ್ಸ್‌ಆ್ಯಪ್ ಆಡಳಿತ ಹೇಗೆ ಕೆಲಸ ಮಾಡುತ್ತದೆ?:

ವೆರಿಫೈಡ್ ಟ್ಯಾಗ್‌ನೊಂದಿಗೆ ಅಧಿಕೃತ ವಾಟ್ಸ್‌ಆ್ಯಪ್ ಸಂಖ್ಯೆ: ಪರಿಶೀಲಿಸಿದ ಟಿಕ್ ಮಾರ್ಕ್ ಹೊಂದಿರುವ ಸರ್ಕಾರದ ಅಧಿಕೃತ ವಾಟ್ಸ್‌ಆ್ಯಪ್ ಸಂಖ್ಯೆಯನ್ನು ಘೋಷಿಸಲಾಗುವುದು. ಇದರಿಂದ ತುರ್ತು ಎಚ್ಚರಿಕೆಗಳು, ಹವಾಮಾನ ಅಪ್ಡೇಟ್​ಗಳು, ಮೂಲಸೌಕರ್ಯ ಅಭಿವೃದ್ಧಿ, ವೈದ್ಯಕೀಯ ಸೇವೆಗಳು ಮತ್ತು ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಸರ್ಕಾರದ ಸಂದೇಶಗಳು ಲಕ್ಷಾಂತರ ಜನರನ್ನು ತಕ್ಷಣ ತಲುಪುತ್ತವೆ.

ವಿನಂತಿಗಳು ಮತ್ತು ದೂರುಗಳನ್ನು ಸಲ್ಲಿಸುವುದು: ನಾಗರಿಕರು ಅಧಿಕೃತ ವಾಟ್ಸ್‌ಆ್ಯಪ್ ಸಂಖ್ಯೆಗೆ ಸಂದೇಶವನ್ನು ಕಳುಹಿಸಬಹುದು. ಹೆಸರು, ಫೋನ್ ಸಂಖ್ಯೆ, ವಿಳಾಸ ಮತ್ತು ವಿನಂತಿ ಹೀಗೆ ಎಲ್ಲ ವಿವರಗಳನ್ನು ಸಲ್ಲಿಸಲು ಅವರಿಗೆ ಲಿಂಕ್ ಬರುತ್ತದೆ. ದೂರನ್ನು ಟ್ರ್ಯಾಕ್ ಮಾಡಲು ರೆಫರೆನ್ಸ್ ಸಂಖ್ಯೆಯನ್ನು ಒದಗಿಸಲಾಗುವುದು.

ಸರ್ಕಾರಿ ಸೇವೆಗಳನ್ನು ಪಡೆಯುವುದು: ಸಂದೇಶವನ್ನು ಕಳುಹಿಸುವ ಮೂಲಕ ಕಲ್ಯಾಣ ಯೋಜನೆಗಳು, ಅರ್ಹತೆ ಮತ್ತು ಪ್ರಯೋಜನಗಳ ಬಗ್ಗೆ ವಿವರಗಳನ್ನು ಪಡೆಯಬಹುದು.

ಪ್ರವಾಸೋದ್ಯಮ ಸೇವೆಗಳು: ಮಾಹಿತಿ ಪಡೆಯಬಹುದು, ಟಿಕೆಟ್ ಕಾಯ್ದಿರಿಸಬಹುದು, ವಸತಿ ಮತ್ತು ದೇವಾಲಯದ ದರ್ಶನ ಸ್ಲಾಟ್‌ಗಳನ್ನು ಕಾಯ್ದಿರಿಸಬಹುದು.

ವಾಟ್ಸ್‌ಆ್ಯಪ್ ಮೂಲಕ ನೇರವಾಗಿ ದೇವಾಲಯಗಳಿಗೆ ದೇಣಿಗೆ ನೀಡಬಹುದು.

ವಾಟ್ಸ್‌ಆ್ಯಪ್ ಮೂಲಕ ಪ್ರಮಾಣಪತ್ರ ಪಡೆಯುವುದು ಮತ್ತು ಬಿಲ್ ಪಾವತಿ:

ಪ್ರಮಾಣಪತ್ರಗಳು: ಒಬಿಸಿ, ಇಡಬ್ಲ್ಯೂಎಸ್, ಆದಾಯ ಮತ್ತು ಇತರ ಪ್ರಮಾಣಪತ್ರಗಳನ್ನು ವಾಟ್ಸ್‌ಆ್ಯಪ್ ಮೂಲಕ ಪಡೆಯಬಹುದು.

ಸಿಎಂ ಪರಿಹಾರ ನಿಧಿ: ಅರ್ಜಿಗಳ ಸ್ಥಿತಿಯನ್ನು ಟ್ರ್ಯಾಕ್ ಮಾಡಬಹುದು.

ಬಿಲ್ ಪಾವತಿಗಳು: ವಿದ್ಯುತ್ ಬಿಲ್, ಆಸ್ತಿ ತೆರಿಗೆ ಮತ್ತು ಟ್ರೇಡ್ ಲೈಸೆನ್ಸ್ ಶುಲ್ಕವನ್ನು ಪಾವತಿಸಬಹುದು.

ಕಂದಾಯ ದಾಖಲೆಗಳು: ಭೂ ದಾಖಲೆಗಳು ಮತ್ತು ಕಂದಾಯ ಸಂಬಂಧಿತ ದಾಖಲೆಗಳನ್ನು ಪಡೆಯಬಹುದು.

ಎಪಿಎಸ್ಆರ್​ಟಿಸಿ ಸೇವೆಗಳು: ಟಿಕೆಟ್ ಕಾಯ್ದಿರಿಸಬಹುದು, ಟಿಕೆಟ್ ರದ್ದುಗೊಳಿಸಬಹುದು, ಬಸ್‌ಗಳನ್ನು ಟ್ರ್ಯಾಕ್ ಮಾಡಬಹುದು ಮತ್ತು ಮರುಪಾವತಿ ಪಡೆಯಬಹುದು.

ಈ ಡಿಜಿಟಲ್ ಉಪಕ್ರಮವು ಸರ್ಕಾರಿ ಸೇವೆಗಳನ್ನು ಸುಗಮಗೊಳಿಸುವ, ಲಭ್ಯತೆಯನ್ನು ಸುಧಾರಿಸುವ ಮತ್ತು ದಕ್ಷತೆಯನ್ನು ಹೆಚ್ಚಿಸುವ ಗುರಿಗಳನ್ನು ಹೊಂದಿದೆ.

ಇದನ್ನೂ ಓದಿ: ಚೀನಾದ DeepSeek ತರಬೇತಿಗೆ Chat GPT ಡೇಟಾ ಕಳವು ಶಂಕೆ: ತನಿಖೆಗೆ ಮುಂದಾದ OpenAI - DEEPSEEK AI

ETV Bharat Logo

Copyright © 2025 Ushodaya Enterprises Pvt. Ltd., All Rights Reserved.