400ಕ್ಕೂ ಅಧಿಕ ಎಕರೆ ಬೆಳೆ ನೀರುಪಾಲು: ರೈತರಿಗೆ ವರದಾನವಾಗಬೇಕಿದ್ದ ಯುಟಿಪಿ ಕಾಲುವೆ ಶಾಪವಾಯ್ತು! - haveri farmers problem
🎬 Watch Now: Feature Video
ಹಾವೇರಿ: ತಾಲೂಕಿನ ಕೂರಗುಂದ ಗ್ರಾಮಕ್ಕೆ ತುಂಗಾ ಮೇಲ್ದಂಡೆ ಯೋಜನೆ ಬರುತ್ತೆ ಎಂದಾಗ ಇಲ್ಲಿಯ ರೈತರು ಸಂತಸಗೊಂಡಿದ್ದರು. ಆದ್ರೆ ಅವರ ಸಂತಸ ಬಹಳ ದಿನ ಉಳಿಯಲಿಲ್ಲ. ಗ್ರಾಮದ ಪಕ್ಕದಲ್ಲಿ ಹಾದು ಹೋಗಿರುವ ಯುಟಿಪಿ ಕಾಲುವೆ ಗ್ರಾಮದ ರೈತರಿಗೆ ವರದಾನವಾಗುವ ಬದಲು ಶಾಪವಾಗಿ ಪರಿಣಮಿಸಿದೆ. ಯುಟಿಪಿ ಕಾಲುವೆಯ ನೀರು ಬಸಿಯುತ್ತಿದ್ದು, ಇಲ್ಲಿಯ ನಾಲ್ಕುನೂರಕ್ಕೂ ಅಧಿಕ ಎಕರೆ ಬೆಳೆ ನೀರುಪಾಲಾಗುತ್ತಿದೆ. ಒಂದು ಕಡೆ ಅಧಿಕ ಮಳೆ ಮತ್ತೊಂದೆಡೆ ಕಾಲುವೆಯಿಂದ ಬಸಿಯುವ ನೀರು. ಇವುಗಳಿಂದ ಸಾಕಷ್ಟು ಸಂಕಷ್ಟಕ್ಕೀಡಾಗಿದ್ದಾರೆ ಇಲ್ಲಿನ ರೈತರು.