ಇವತ್ತು ಉತ್ತರ ಕೊಡುತ್ತೇನೆ ಎಂದ ಸಿಎಂ ನಾಪತ್ತೆಯಾಗಿದ್ದಾರೆ: ಸದನದಲ್ಲಿ ಉಪವಾಸ ಸತ್ಯಾಗ್ರಹದ ಎಚ್ಚರಿಕೆ ಕೊಟ್ಟ ಯತ್ನಾಳ್​

🎬 Watch Now: Feature Video

thumbnail
2ಎ ಮೀಸಲಾತಿ ವಿಚಾರವಾಗಿ ಸದನದಲ್ಲಿ ಮಾತನಾಡಿದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, ನಿನ್ನೆ ನಮಗೆ ಸಿಎಂ ಹೇಳಿದ್ದರು. ಇವತ್ತು ಉತ್ತರ ಕೊಡುತ್ತೇನೆ ಅಂತ. ಆದರೆ, ಇಂದು ಮುಖ್ಯಮಂತ್ರಿಗಳು ನಾಪತ್ತೆಯಾಗ್ತಾರೆ. ಇದೇನು ವ್ಯವಸ್ಥೆ ಏನು ಎಂದು ಪ್ರಶ್ನಿಸಿದರು. ನಮ್ಮದು ಕಷ್ಟದ ಜೀವನ ನಡೆಸುವ ಸಮುದಾಯ. ಮೊನ್ನೆ ನಮ್ಮ ಸಮಾಜದ ಸಚಿವರು, ಶಾಸಕರಿಗೆ ಯಾವುದೇ ಪರಿಸ್ಥಿತಿಯಲ್ಲಿ ನಿಮ್ಮ ಬೇಡಿಕೆ ಈಡೇರಿಸುವೆ ಎಂದಿದ್ದಾರೆ. ಇಂದು ಸದನದಲ್ಲಿ ನಿಮಗೆ ಮೀಸಲಾತಿ ಹೆಚ್ಚಳಕ್ಕೆ ಬೇಕಾದ ಸಮಯಾವಕಾಶ ತಿಳಿಸಿ. ಮಾಡುವುದೇ ಇಲ್ಲ ಎಂದಾದರೆ ಅದನ್ನೇ ಹೇಳಿ. ಮುಖ್ಯಮಂತ್ರಿಗಳು ಈ ಬಗ್ಗೆ ಒಂದು ನಿರ್ಣಯವನ್ನು ಹೇಳಬೇಕು. ಇಲ್ಲದಿದ್ದರೆ ನಮ್ಮ ಸಮುದಾಯದವರು ಅಲ್ಲಿ ಆ ಮರಣ ಉಪವಾಸ ಮಾಡುತ್ತಾರೆ. ನಾನು ಇಲ್ಲಿ ಸತ್ಯಾಗ್ರಹ ಮಾಡುತ್ತೇನೆ ಎಂದು ಎಚ್ಚರಿಸಿದರು.
Last Updated : Mar 10, 2021, 12:37 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.