ಮಣ್ಣಿನ ಸಂರಕ್ಷಣೆ ಕುರಿತು ವಿಜ್ಞಾನಿ ಡಾ.ಎಂ.ಬಿ.ಪಾಟೀಲ್ ಉಪಯುಕ್ತ ಮಾಹಿತಿ - protection of soli
🎬 Watch Now: Feature Video
ಕೊಪ್ಪಳ: ಮಾನವನ ಸಂಸ್ಕೃತಿ ಈ ಮಣ್ಣಿನೊಂದಿಗೆ ಬೆರೆತುಕೊಂಡಿದೆ. ಮಣ್ಣನ್ನು ನಾವು ಕಾಪಾಡಿದರೆ, ನಮ್ಮನ್ನು ಮಣ್ಣು ಕಾಪಾಡುತ್ತದೆ. ಇಂದು ಮಣ್ಣಿನ ಸಂರಕ್ಷಣೆ ಅತ್ಯಂತ ಅಗತ್ಯ. ಆದ್ರೆ ಬದಲಾದ ಕಾಲಘಟ್ಟದಲ್ಲಿ ಮಣ್ಣನ್ನು ನಾವು ವಿಷಪೂರಿತವನ್ನಾಗಿ ಮಾಡುತ್ತಿದ್ದೇವೆ. ಇದರಿಂದ ನಾವು ಸೇವಿಸುವ ಆಹಾರವೂ ಕೂಡ ವಿಷಯುಕ್ತವಾಗುತ್ತಿದೆ. ಹಾಗಾಗಿ ಮಣ್ಣನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕೊಪ್ಪಳ ಕೃಷಿ ವಿಸ್ತರಣಾ ಕೇಂದ್ರದ ಮುಖ್ಯಸ್ಥ, ಕೃಷಿ ವಿಜ್ಞಾನಿ ಡಾ.ಎಂ.ಬಿ.ಪಾಟೀಲ್ ಸಂಪೂರ್ಣ ಮಾಹಿತಿ ನೀಡಿದ್ದಾರೆ.