ಬನವಾಸಿ ಕದಂಬೋತ್ಸವಕ್ಕೆ ಅದ್ಧೂರಿ ತೆರೆ... ಸಾಂಸ್ಕೃತಿಕ ಕಾರ್ಯಕ್ರಮಗಳ ಝಲಕ್ - Kadambotsav Program
🎬 Watch Now: Feature Video
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿ ಕಳೆದ ಎರಡು ದಿನಗಳಿಂದ ಕನ್ನಡಮಯವಾಗಿತ್ತು. ಹೇಳಿ ಕೇಳಿ ಬನವಾಸಿ ಕನ್ನಡದ ಮೊದಲ ರಾಜಧಾನಿ ಎನ್ನುವ ಹೆಗ್ಗಳಿಕೆ ಪಡೆದಿರುವ ಐತಿಹಾಸಿಕ ಪ್ರದೇಶ. ಇದರ ಜೊತೆಗೆ ಬನವಾಸಿಯ ಕದಂಬೋತ್ಸವ ಕಾರ್ಯಕ್ರಮ ಕನ್ನಡದ ಕಂಪು ಇನ್ನಷ್ಟು ಹರಡುವಂತೆ ಮಾಡಿತು. ಕಾರ್ಯಕ್ರಮದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದಿದ್ದ ಜನರನ್ನ ಆಕರ್ಷಿಸಿದವು.