ನರಗುಂದ: ಪ್ರವಾಹದಲ್ಲಿ ಕೊಚ್ಚಿ ಹೋಗ್ತಿದ್ದ ಯುವಕರನ್ನು ಬೈಕ್ ಸಮೇತ ರಕ್ಷಿಸಿದ ಜೆಸಿಬಿ ಚಾಲಕ! - gadagafloodnews
🎬 Watch Now: Feature Video
ಮಲಪ್ರಭಾ ಪ್ರವಾಹಕ್ಕೆ ಸಿಕ್ಕು ಬೈಕ್ನಲ್ಲಿ ಕೊಚ್ಚಿ ಹೋಗ್ತಿದ್ದ ಯುವಕರ ಪ್ರಾಣವನ್ನು ಜೆಸಿಬಿ ಚಾಲಕ ಉಳಿಸಿದ ಘಟನೆ ಗದಗ ಜಿಲ್ಲೆ ನರಗುಂದ ತಾಲೂಕಿನ ಕೊಣ್ಣೂರು ಗ್ರಾಮದಲ್ಲಿ ನಡೆದಿದೆ. ಬದಾಮಿಯಿಂದ ಕೊಣ್ಣೂರು ಗ್ರಾಮಕ್ಕೆ ಬರ್ತಿದ್ದ ಯುವಕರು ಪ್ರವಾಹದ ನಡುವೆಯೂ ರಸ್ತೆ ದಾಟಲು ಪ್ರಯತ್ನಿಸಿದ್ದಾರೆ. ಇದೇ ವೇಳೆ ಜೆಸಿಬಿ ಚಾಲಕ ಸದ್ದಾಂ ಎಂಬಾತ ಬೈಕ್ ಸಮೇತ ಕೊಚ್ಚಿ ಹೋಗ್ತಿದ್ದ ಉಮೇಶ್ ಹಾಗೂ ಪ್ರವೀಣ ಎಂಬ ಯುವಕರನ್ನು ರಕ್ಷಣೆ ಮಾಡಿದ್ದಾರೆ. ರಕ್ಷಣೆಗೊಳಗಾದ ಯುವಕರು ನರಗುಂದ ತಾಲೂಕಿನ ಕಲ್ಲಾಪುರ ಗ್ರಾಮದವರೆಂದು ತಿಳಿದು ಬಂದಿದೆ. ಚಾಲಕನ ಸಮಯಪ್ರಜ್ಞೆಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.