ETV Bharat / bharat

ದೆಹಲಿ ಶಾಲೆಗಳಿಗೆ ವಿದ್ಯಾರ್ಥಿಗಳಿಂದಲೇ ಬಾಂಬ್​ ಬೆದರಿಕೆ: ಕಾರಣ ಕೇಳಿದ್ರೆ ಅಚ್ಚರಿ ಗ್ಯಾರಂಟಿ! - BOMB THREAT TO SCHOOLS

ದೆಹಲಿಯ ಶಾಲೆಗಳಿಗೆ ಬಂದ್​ ನಕಲಿ ಬಾಂಬ್ ಬೆದರಿಕೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಪತ್ತೆಯಾದ ಆರೋಪಿಗಳ ಕಂಡು ಪೊಲೀಸರೇ ಶಾಕ್​ ಆಗಿದ್ದಾರೆ.

ದೆಹಲಿ ಶಾಲೆಗಳಿಗೆ ವಿದ್ಯಾರ್ಥಿಗಳಿಂದಲೇ ಬಾಂಬ್​ ಬೆದರಿಕೆ
ದೆಹಲಿ ಶಾಲೆಗಳಿಗೆ ವಿದ್ಯಾರ್ಥಿಗಳಿಂದಲೇ ಬಾಂಬ್​ ಬೆದರಿಕೆ (ETV Bharat)
author img

By ANI

Published : 4 hours ago

ನವದೆಹಲಿ: ದೆಹಲಿ ಶಾಲೆಗಳಿಗೆ ಬಾಂಬ್​ ಬೆದರಿಕೆ ಹಾಕಿದ ಪ್ರಕರಣದಲ್ಲಿ ವಿಚಿತ್ರ ಸಂಗತಿ ಹೊರಬಿದ್ದಿದೆ. ಶಾಲೆಗಳಿಗೆ ಬೆದರಿಕೆ ಹಾಕಿದ್ದು, ಅದೇ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಇಲ್ಲಿನ ರೋಹಿಣಿ ಶಾಲೆಗಳಿಗೆ ಇತ್ತೀಚಿಗೆ ಬಾಂಬ್​ ಬೆದರಿಕೆ ಇಮೇಲ್​ ಬಂದಿತ್ತು. ಇದರ ಜಾಡು ಹಿಡಿದು ಹೊರಟಾಗ ಅದೇ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಈ ಬೆದರಿಕೆ ಹಾಕಿದ್ದು ಪತ್ತೆಯಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಎರಡೂ ಶಾಲೆಗಳಿಗೆ ಅಲ್ಲೇ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳು ಬಾಂಬ್​ ಬೆದರಿಕೆಯ ಇಮೇಲ್​ ಕಳುಹಿಸಿದ್ದಾರೆ. ತನಿಖೆಯ ವೇಳೆ ಐಪಿ ಅಡ್ರೆಸ್​ನಿಂದಾಗಿ ಮಕ್ಕಳ ಮನೆಯನ್ನು ಪತ್ತೆ ಮಾಡಲಾಯಿತು. ವಿಚಾರಣೆಯ ವೇಳೆ ಅವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪರೀಕ್ಷೆ ಮುಂಡೂಡಲು ಪ್ಲಾನ್​: ಶಾಲಾ ಪರೀಕ್ಷೆಗಳಿಗೆ ತಾವು ಸಿದ್ಧರಾಗಿಲ್ಲದ ಕಾರಣ, ಪರೀಕ್ಷೆಗಳನ್ನು ಮುಂದೂಡಲು ಬಯಸಿ ಬೆದರಿಕೆ ಇಮೇಲ್‌ಗಳನ್ನು ಕಳುಹಿಸಿದ್ದಾರೆ. ಇಬ್ಬರೂ ವಿದ್ಯಾರ್ಥಿಗಳಾಗಿದ್ದರಿಂದ ಕೌನ್ಸೆಲಿಂಗ್ ಮಾಡಿ, ಪೋಷಕರಿಗೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಕಳೆದ ಕೆಲ ದಿನಗಳಿಂದ ದೆಹಲಿ ಶಾಲೆಗಳಿಗೆ ಬೆದರಿಕೆ ಕರೆಗಳು ಬರುತ್ತಿದ್ದ ಕಾರಣ, ಇದೇ ತಂತ್ರವನ್ನು ಬಳಸಿ ತಾವು ಪರೀಕ್ಷೆಯಿಂದ ತಪ್ಪಿಸಿಕೊಳ್ಳುವ ಯೋಜನೆ ಮಾಡಿದ್ದೆವು ಎಂದು ವಿದ್ಯಾರ್ಥಿಗಳು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ.

ಡಿಸೆಂಬರ್​ 14 ರಂದು ಪಶ್ಚಿಮ ವಿಹಾರ್ ಶಾಲೆಗೆ ಬಾಂಬ್ ಬೆದರಿಕೆಯ ಇಮೇಲ್ ಬಂದಿತ್ತು. ಅದಕ್ಕೂ ಮೊದಲು ಇಲ್ಲಿನ ಪಿವಿಆರ್​ ಮಲ್ಟಿಫ್ಲೆಕ್ಸ್​​ನಲ್ಲಿ ಸ್ಫೋಟ ಸಂಭವಿಸಿತ್ತು. ಹೀಗಾಗಿ, ನಗರದ ಶಾಲೆಗಳಿಗೆ ಬರುತ್ತಿದ್ದ ಬೆದರಿಕೆಗಳ ಮೇಲೆ ಪೊಲೀಸರು ತೀವ್ರ ನಿಗಾ ವಹಿಸಿದ್ದರು.

ಕಳೆದ 11 ದಿನಗಳಲ್ಲಿ ದೆಹಲಿಯ 100ಕ್ಕೂ ಅಧಿಕ ಶಾಲೆಗಳಿಗೆ ನಕಲಿ ಬಾಂಬ್​ ಬೆದರಿಕೆಯ ಇಮೇಲ್​ ಸಂದೇಶಗಳು ಬಂದಿವೆ. ಎಲ್ಲವನ್ನೂ ವಿಪಿಎನ್​ (ವರ್ಚುವಲ್​ ಪ್ರೈವೇಟ್​​ ನೆಟ್​ವರ್ಕ್​) ಮೂಲಕ ರವಾನಿಸಲಾಗಿದ್ದು, ಇದರಿಂದ ಆರೋಪಿಗಳನ್ನು ಪತ್ತೆ ಮಾಡುವುದು ಪೊಲೀಸರಿಗೆ ಸವಾಲಾಗಿತ್ತು.

ಕೇಜ್ರಿವಾಲ್ ಕಳವಳ: ಶಾಲೆಗಳಿಗೆ ನಿರಂತರ ಬಾಂಬ್​ ಬೆದರಿಕೆಗಳು ಬಂದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಅರವಿಂದ್​ ಕೇಜ್ರಿವಾಲ್​ ಅವರು ಕಳವಳ ಮತ್ತು ಆತಂಕ ವ್ಯಕ್ತಪಡಿಸಿದ್ದರು. ಇದು ಮಕ್ಕಳ ಶಿಕ್ಷಣದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದಿದ್ದರು. ಇಂತಹ ಘಟನೆಗಳು ನಿರಂತರವಾಗಿ ಮುಂದುವರಿದರೆ ಈ ಬಗ್ಗೆ ಉನ್ನತ ಮಟ್ಟ ತನಿಖೆ ನಡೆಸುವ ಬಗ್ಗೆ ಚಿಂತಿಸಬೇಕು ಎಂದಿದ್ದರು.

ಇದನ್ನೂ ಓದಿ: ಮಹಾರಾಷ್ಟ್ರ ಸಚಿವರಿಗೆ ಖಾತೆ ಹಂಚಿಕೆ: ಸಿಎಂ ಬಳಿ ಗೃಹ, ಶಿಂಧೆಗೆ ಲೋಕೋಪಯೋಗಿ, ಅಜಿತ್ ಪವಾರ್​ಗೆ ಹಣಕಾಸು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.