ಶಿವಮೊಗ್ಗ: ಪತ್ನಿಯನ್ನು ಕೊಂದು ಪತಿಯೊಬ್ಬ ಪೊಲೀಸರಿಗೆ ಶರಣಾಗಿರುವ ಪ್ರಕರಣ ಜಿಲ್ಲೆಯಲ್ಲಿ ನಡೆದಿದೆ. ಶಿವಮೊಗ್ಗ ಹೊರ ವಲಯದ ವಾದಿ-ಎ- ಹುದಾ ನಗರದ ನಿವಾಸಿ ಯೂಸುಫ್ (42) ತನ್ನ ಪತ್ನಿ ರುಕ್ಸಾನಳನ್ನು (38) ಕೊಂದು ನಂತರ ತಾನೇ ಪೊಲೀಸರಿಗೆ ಶರಣಾಗಿದ್ದಾನೆ.
ಕೊಲೆ ನಡೆದ ಸ್ಥಳಕ್ಕೆ ಭೇಟಿ ನೀಡಿದ ಎಸ್ಪಿ ಮಿಥುನ್ ಕುಮಾರ್; ನಗರದ ವಾದಿ- ಎ- ಹುದಾನಗರದಲ್ಲಿ ಬೆಳಗ್ಗೆ ಕೊಲೆಯೊಂದು ನಡೆದಿದೆ. ಗಂಡನೇ ಹೆಂಡತಿಯನ್ನು ಕೊಂದಿದ್ದಾರೆ. ವಿಷಯ ತಿಳಿದ ಮೇಲೆ ಪೊಲೀಸರು ಬಂದು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನಾ ಸ್ಥಳವನ್ನು ನಾನು ಪರಿಶೀಲಿಸಿದೆ. ಮನೆಯ ತುಂಬಾ ರಕ್ತದ ಕಲೆಯಾಗಿತ್ತು. ಈ ಕೃತ್ಯಕ್ಕೆ ಎರಡು ಮೂರು ಆಯುಧಗಳನ್ನ ಕೂಡಾ ಬಳಸಿದ್ದಾನೆ. ಕೊಲೆಗೆ ಕೌಟುಂಬಿಕ ಕಲಹವೇ ಮೇಲ್ನೋಟಕ್ಕೆ ಕಾರಣ ಎಂಬುದು ಕಂಡುಬಂದಿದೆ. ತನಿಖೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕೊಲೆ ಮಾಡಿ ಆರೋಪ ಹೊತ್ತಿರುವ ಯೂಸುಫ್ ಸಹೋದರ ಇಸ್ಮಾಯಿಲ್ ಈಟಿವಿ ಭಾರತ ಜೊತೆ ಮಾತನಾಡಿ, ನಮ್ಮ ಅತ್ತಿಗೆಗೆ ಬೇರೆ ಯುವಕನೊಂದಿಗೆ ಅಫೇರ್ ಇತ್ತು. ಇದು ನಮ್ಮಣ್ಣಗೆ ತಿಳಿದು ಜಗಳ ಮಾಡಿದ್ದ. ಅತ್ತಿಗೆ ಏನ್ ಮಾಡುತ್ತಾರೆ ಅಂತ ನೋಡೋದಕ್ಕೆ ಮನೆಯಲ್ಲಿ ರೆಕಾರ್ಡಿಂಗ್ಗೆ ಫೋನ್ ಇಟ್ಟಿದ್ದ. ಸಾಕ್ಷಿ ಸಿಕ್ಕ ನಂತರ ಜಗಳ ಮಾಡಿ ಅತ್ತಿಗೆ ತವರು ಮನೆ ಆನಂದಪುರಂಗೆ ಕಳುಹಿಸಿ ಕೊಟ್ಟಿದ್ದರು. ಯೂಸುಫ್ನ ಮೂರು ಜನ ಮಕ್ಕಳನ್ನು ಇನ್ನೋರ್ವ ಅಣ್ಣನ ಮನೆಯಲ್ಲಿ ಬಿಟ್ಟಿದ್ದರು. ಇಂದು ಬೆಳಗ್ಗೆ ಅತ್ತಿಗೆಗೆ ಫೋನ್ ಮಾಡಿ ಮಕ್ಕಳಿಗೆ ಹುಷಾರಿಲ್ಲ ಎಂದು ಕರೆಯಿಸಿದ್ದಾರೆ. ರುಕ್ಸಾಳನನ್ನು ಅವರ ತಾಯಿ ಹಾಗೂ ಸಹೋದರ ಕರೆದುಕೊಂಡು ಬಂದು ಬಿಟ್ಟು ಹೋಗಿದ್ದಾರೆ. ಇತ್ತ ಜಗಳವಾಡಿ ಕೊಲೆ ಮಾಡಿದ ನಂತರ ಯೂಸುಫ್ ಅತ್ತಿಗೆ ತಮ್ಮನಿಗೆ ಫೋನ್ ಮಾಡಿ ಕೊಲೆ ಮಾಡಿದ್ದೇನೆ. ಹೆಣ ತೆಗೆದುಕೊಂಡು ಹೋಗು ಎಂದು ತಿಳಿಸಿದ್ದಾನೆ ಎಂದು ತಿಳಿಸಿದರು.
ಇದನ್ನೂ ಓದಿ : ಬೆಳಗಾವಿ: ಟ್ರ್ಯಾಕ್ಟರ್ ಹತ್ತಿಸಿ ತಮ್ಮನ ಕೊಂದ ಅಣ್ಣ - MURDER BY DRIVING TRACTOR