ಮೇಷ: ಉದ್ಯೋಗದಲ್ಲಿರುವ ವ್ಯಕ್ತಿಗಳು ಅವಸರದ ನಿರ್ಧಾರ ತೆಗೆದುಕೊಳ್ಳಬಾರದು. ಹೀಗೆ ಮಾಡಿದರೆ ನಷ್ಟ ಉಂಟಾಗಬಹುದು. ಅಲ್ಲದೆ ನೀವು ಅನುಚಿತ ವರ್ತನೆ ತೋರಿಸುವ ಸಾಧ್ಯತೆ ಇದೆ. ಈ ವಾರವು ಉದ್ಯಮಿಗಳಿಗೆ ಅನುಕೂಲಕರ. ಶಿಕ್ಷಣದ ಕುರಿತು ಹೇಳುವುದಾದರೆ, ಕಲಿಕೆಯ ಪಥವನ್ನು ನಿರ್ಲಕ್ಷಿಸಬೇಡಿ. ಇಲ್ಲದಿದ್ದರೆ ನಿಮಗೆ ನಷ್ಟ ಉಂಟಾಗಬಹುದು. ಈ ವಾರದಲ್ಲಿ ನಿಮ್ಮ ಹೆಚ್ಚಿನ ಹಣವನ್ನು ನೀವು ಅನಗತ್ಯ ವಸ್ತುಗಳಿಗೆ ಖರ್ಚು ಮಾಡಬಹುದು. ನಿಮ್ಮ ಪ್ರೇಮ ಸಂಬಂಧದ ಕುರಿತು ಚರ್ಚಿಸುವುದಾದರೆ, ನಿಮ್ಮ ಸಂಬಂಧದಲ್ಲಿ ಒಂದಷ್ಟು ಒತ್ತಡ ಕಾಣಿಸಿಕೊಳ್ಳಬಹುದು. ಇದರಿಂದಾಗಿ ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳಬಹುದು. ನಂತರ ನೀವು ಈ ವಿಚಾರದಲ್ಲಿ ಪರಿತಪಿಸಬಹುದು. ವಿವಾಹಿತ ವ್ಯಕ್ತಿಗಳು ಈ ಅವಧಿಯಲ್ಲಿ ಸಂತಸ ಅನುಭವಿಸಲಿದ್ದಾರೆ. ಅಲ್ಲದೆ ನಿಮ್ಮ ಸಂಬಂಧದಲ್ಲಿ ಇನ್ನಷ್ಟು ಉತ್ತುಂಗತೆಯನ್ನು ಸಾಧಿಸುವುದಕ್ಕಾಗಿ ನಿಮ್ಮ ಸಂಗಾತಿಗಾಗಿ ಇನ್ನಷ್ಟು ಸಮಯವನ್ನು ಮೀಸಲಿಡಿ. ಇದರಿಂದಾಗಿ ನಿಮ್ಮಿಬ್ಬರ ನಡುವಿನ ತಪ್ಪು ಗ್ರಹಿಕೆಯು ದೂರಗೊಳ್ಳಲಿದೆ.
ವೃಷಭ: ಉದ್ಯೋಗದಲ್ಲಿರುವವರಿಗೆ, ಈ ವಾರದಲ್ಲಿ ತಮ್ಮ ಪ್ರತಿಯೊಂದು ಕೆಲಸವನ್ನು ಪೂರ್ಣಗೊಳಿಸಲು ಧನಾತ್ಮಕ ಮನೋಭಾವವು ಸಹಾಯ ಮಾಡಿದರೆ ಋಣಾತ್ಮಕತೆಯು ನಿಮ್ಮ ಪ್ರಯತ್ನಗಳಲ್ಲಿ ಹಿನ್ನಡೆ ತರಬಹುದು. ಉದ್ಯೋಗದಲ್ಲಿ ಬದಲಾವಣೆಯನ್ನು ಇಚ್ಛಿಸುವ ಜನರು ಸದ್ಯಕ್ಕೆ ಸುಮ್ಮನಿರುವುದು ಒಳ್ಳೆಯದು. ಈ ಅವಧಿಯಲ್ಲಿ ವ್ಯಾಪಾರಿಗಳಿಗೆ ಅತ್ಯುತ್ತಮ ಫಲ ದೊರೆಯಲಿದೆ. ನಿಮ್ಮ ಆರೋಗ್ಯದ ಕುರಿತು ಚರ್ಚಿಸುವುದಾದರೆ, ನಿಮ್ಮ ಕಿಬ್ಬೊಟ್ಟೆಯಲ್ಲಿ ಸಮಸ್ಯೆ ಎದುರಾಗಬಹುದು. ಇದನ್ನು ನೀವು ನಿರ್ಲಕ್ಷಿಸಿದರೆ ಸಮಸ್ಯೆಯು ಇನ್ನಷ್ಟು ಉಲ್ಬಣಗೊಳ್ಳಬಹುದು. ಈ ಅವಧಿಯಲ್ಲಿ ಪ್ರಯಾಣಿಸಿದರೆ ಆಯಾಸ ಉಂಟಾಗಬಹುದು. ನಿರ್ದಿಷ್ಟ ಕಾರ್ಯಕ್ಕಾಗಿ ನೀವು ಸಾಲವನ್ನು ಪಡೆಯಲು ಇಚ್ಛಿಸುವುದಾದರೆ ಈ ನಿಟ್ಟಿನಲ್ಲಿ ನಿಮಗೆ ಯಶಸ್ಸು ದೊರೆಯಲಿದ್ದು ನಿಮ್ಮ ಕೆಲಸವು ಪೂರ್ಣಗೊಳ್ಳಲಿದೆ. ಈ ವಾರದಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ಶಾಲಾ ಕಾರ್ಯಕ್ಕೆ ಗಮನ ನೀಡುವುದು ಕಷ್ಟಕರವೆನಿಸಲಿದೆ. ಆದರೆ ಯಾವುದಾದರೂ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿರುವವರು ಯಶಸ್ಸನ್ನು ಗಳಿಸಲಿದ್ದಾರೆ. ಈ ವಾರದಲ್ಲಿ ಪ್ರೇಮ ಸಂಬಂಧದಲ್ಲಿ ಅಂತರವು ಹೆಚ್ಚಾಗಬಹುದು. ವೈವಾಹಿಕ ಬದುಕಿಗೆ ಸಂಬಂಧಿಸಿದಂತೆ, ನಿಮ್ಮ ಸಂಬಂಧವನ್ನು ಎಚ್ಚರಿಕೆಯಿಂದ ನಿಭಾಯಿಸಿ. ಈ ಮನೋಭಾವವನ್ನು ಪಾಲಿಸುವ ಮೂಲಕ ನಿಮ್ಮ ಜೀವನ ಸಂಗಾತಿಯ ಜೊತೆಗೆ ಅರ್ಥಪೂರ್ಣ ಬದುಕನ್ನು ನೀವು ಸಾಗಿಸಬಹುದು.
ಮಿಥುನ: ಮಿಥುನ ರಾಶಿಯಲ್ಲಿ ಹುಟ್ಟಿದವರಿಗೆ ಈ ವಾರವು ಲಾಭದಾಯಕ ಎನಿಸಲಿದೆ. ಹೊಸ ಉದ್ಯೋಗಾವಕಾಶಗಳನ್ನು ಹುಡುಕುತ್ತಿರುವವರು ಸಾಕಷ್ಟು ಪ್ರಯತ್ನ ಪಡಬೇಕು. ಅಲ್ಲದೆ ನಿಮ್ಮ ಮ್ಯಾನೇಜರ್ ಜೊತೆಗೆ ಉತ್ತಮ ಬಾಂಧವ್ಯವನ್ನು ನೀವು ಕಾಪಾಡಿಕೊಳ್ಳಬೇಕು. ನಿಮ್ಮ ಆರೋಗ್ಯದ ಕುರಿತು ಹೇಳುವುದಾದರೆ, ಹಳೆಯ ನರಸಂಬಂಧಿ ಕಾಯಿಲೆಗಳು ಈ ವಾರದಲ್ಲಿ ಉಲ್ಬಣಿಸಿಕೊಳ್ಳಬಹುದು. ಹೀಗಾಗಿ ಇದನ್ನು ನಿರ್ಲಕ್ಷಿಸದೆ ಸರಿಯಾದ ಚಿಕಿತ್ಸೆಯನ್ನು ಪಡೆಯಿರಿ. ವ್ಯಾಪಾರೋದ್ಯಮದಲ್ಲಿ ತೊಡಗಿಸಿಕೊಂಡಿರುವವರಿಗೆ ಸಮಯವು ಅನುಕೂಲಕರವಾಗಿದೆ. ನಿಮ್ಮ ಮನೆಯ ದುರಸ್ತಿಗೆ ಯೋಜನೆ ರೂಪಿಸುತ್ತಿದ್ದರೆ, ಕೆಲಸವನ್ನು ಪ್ರಾರಂಭಿಸುವ ಮೊದಲು ಸರಿಯಾದ ಬಜೆಟ್ ಅನ್ನು ಸಿದ್ಧಪಡಿಸಿ. ಶಿಕ್ಷಣದ ಕುರಿತು ಹೇಳುವುದಾದರೆ, ಅಧ್ಯಯನಕ್ಕೆ ನೀವು ಹೆಚ್ಚಿನ ಒತ್ತು ನೀಡದೆ ಇರಬಹುದು. ವಿವಿಧ ಕಾರಣಗಳಿಗಾಗಿ ನೀವು ಮಾನಸಿಕ ಒತ್ತಡವನ್ನು ಎದುರಿಸಬಹುದು. ನಿಮ್ಮ ಪ್ರಣಯ ಸಂಬಂಧದ ಕುರಿತು ಹೇಳುವುದಾದರೆ, ನಿಮ್ಮ ಸಂಗಾತಿಯ ಹೆಜ್ಜೆಯು ನಿಮ್ಮ ಆಶ್ಚರ್ಯಕ್ಕೆ ಕಾರಣವೆನಿಸಬಹುದು. ಈ ವಾರದಲ್ಲಿ ವೈವಾಹಿಕ ಬದುಕು ಸಂತಸದಿಂದ ಕೂಡಿರಲಿದೆ. ನಿಮ್ಮ ಜೀವನ ಸಂಗಾತಿಯ ಜೊತೆಗೆ ಸಮಯ ಕಳೆಯಲು ಯತ್ನಿಸಲಿದ್ದೀರಿ.
ಕರ್ಕಾಟಕ: ಈ ವಾರದಲ್ಲಿ ಒಳ್ಳೆಯ ಫಲ ದೊರೆಯಲಿದೆ. ಉದ್ಯೋಗಸ್ಥರ ಕುರಿತು ಹೇಳುವುದಾದರೆ, ನೀವು ಹೊಸ ಕಾಮಗಾರಿಯಲ್ಲಿ ಪಾಲ್ಗೊಳ್ಳಬಹುದು. ನಿಮ್ಮ ಬಾಸ್ ಎದುರು ನಿಮ್ಮ ವರ್ಚಸ್ಸು ವೃದ್ಧಿಸಲಿದೆ. ವ್ಯವಹಾರ ನಡೆಸಲು ಈ ಸಮಯ ಅನುಕೂಲಕರ. ಕೆಲವೊಂದು ಹೊಸ ಜನರನ್ನು ನೀವು ಭೇಟಿಯಾಗಲಿದ್ದೀರಿ. ನಿಮ್ಮ ವ್ಯವಹಾರವನ್ನು ಮುಂದಕ್ಕೆ ಕೊಂಡೊಯ್ಯಲು ಇವರು ನಿಮಗೆ ಸಹಾಯ ಮಾಡಲಿದ್ದಾರೆ. ನಿಮ್ಮ ಆರೋಗ್ಯದ ಕುರಿತು ಹೇಳುವುದಾದರೆ, ನಿಮ್ಮ ಆಹಾರಕ್ರಮದ ಕುರಿತು ನೀವು ಹೆಚ್ಚಿನ ಕಾಳಜಿ ವಹಿಸಬೇಕು. ಇಲ್ಲದಿದ್ದರೆ ನಿಮ್ಮ ತಲೆ, ಹೊಟ್ಟೆ ಅಥವಾ ಚರ್ಮಕ್ಕೆ ಸಂಬಂಧಿಸಿದ ಯಾವುದಾದರೂ ಸಮಸ್ಯೆಯು ನಿಮ್ಮನ್ನು ಕಾಡಬಹುದು. ಈ ವಾರದಲ್ಲಿ ನಿಮ್ಮ ಹೆಚ್ಚಿನ ಹಣವನ್ನು ಮನೆಯ ನವೀಕರಣಕ್ಕಾಗಿ ಖರ್ಚು ಮಾಡಲಿದ್ದೀರಿ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣವನ್ನು ಪಡೆಯಬೇಕಾದರೆ ಕಠಿಣ ಶ್ರಮ ಪಡಬೇಕು. ಪ್ರೇಮ ಸಂಬಂಧದ ಕುರಿತು ಮಾತನಾಡುವುದಾದರೆ, ಹೊಸ ವ್ಯಕ್ತಿಯು ನಿಮ್ಮ ಬದುಕಿನಲ್ಲಿ ಪ್ರವೇಶಿಸಬಹುದು. ಅವರೊಂದಿಗೆ ನಿಮ್ಮ ಹೃದಯದ ಭಾವನೆಗಳನ್ನು ನೀವು ಹಂಚಿಕೊಳ್ಳಬಹುದು. ವೈವಾಹಿಕ ಬದುಕಿನಲ್ಲಿ ಸ್ವಲ್ಪ ಒತ್ತಡ ಕಾಣಿಸಿಕೊಳ್ಳಲಿದೆ. ಆದರೆ ನಿಮ್ಮ ಜಾಣ್ಮೆಯ ಮೂಲಕ ಎಲ್ಲಾ ಸಮಸ್ಯೆಗಳನ್ನು ಬಗೆಹರಿಯಲು ನಿಮಗೆ ಸಾಧ್ಯವಾಗಲಿದೆ.
ಸಿಂಹ: ಸಿಂಹ ರಾಶಿಯವರಿಗೆ ಈ ವಾರದಲ್ಲಿ ಒಳ್ಳೆಯ ಫಲ ದೊರೆಯಲಿದೆ. ಉದ್ಯೋಗದಲ್ಲಿರುವವರು ತಮ್ಮ ಗುರಿಯಲ್ಲಿ ಯಶಸ್ಸನ್ನು ಪಡೆಯಬೇಕಾದರೆ ಸಾಕಷ್ಟು ಪ್ರಯತ್ನಪಟ್ಟು ಸವಾಲುಗಳನ್ನು ಎದುರಿಸಬೇಕು. ಆದರೆ ನಿಮ್ಮ ಬಾಸ್ ನಿಮ್ಮ ಬಗ್ಗೆ ಏನು ಭಾವಿಸುತ್ತಾರೆ ಎಂಬ ಕುರಿತು ನಿಮ್ಮಲ್ಲಿ ಸ್ಪಷ್ಟತೆ ಇಲ್ಲದೆ ಇರಬಹುದು. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳು ತಮ್ಮ ಉದ್ದೇಶವನ್ನು ಈಡೇರಿಸಿಕೊಳ್ಳುವಾಗ ಸಮಸ್ಯೆಗಳನ್ನು ಎದುರಿಸಬಹುದು. ಹಣಕಾಸಿನ ಸಮಸ್ಯೆಗಳ ಕುರಿತು ಹೇಳುವುದಾದರೆ, ಕೆಲವೊಂದು ಕಾರ್ಯಗಳ ಕುರಿತು ನೀವು ನಿರ್ಣಾಯಕ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಆದರೆ ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಲು ಇದು ಸಕಾಲವಲ್ಲ. ಆರೋಗ್ಯದ ಕುರಿತು ಚರ್ಚಿಸುವುದಾದರೆ, ನಿಮ್ಮ ತಲೆ, ಹೊಟ್ಟೆ ಮತ್ತು ಕಾಲುಗಳಲ್ಲಿ ಅಸ್ವಸ್ಥತೆ ಕಾಣಿಸಿಕೊಳ್ಳಬಹುದು. ಇಂತಹ ಸಂದರ್ಭದಲ್ಲಿ ನಿಮ್ಮ ಆರೋಗ್ಯವನ್ನು ನಿರ್ಲಕ್ಷಿಸಬೇಡಿ. ತಜ್ಞ ವೈದ್ಯರಿಂದ ಚಿಕಿತ್ಸೆಯನ್ನು ಪಡೆಯಿರಿ. ನಿಮ್ಮ ಪ್ರಣಯ ಸಂಬಂಧದ ಕುರಿತು ಚರ್ಚಿಸುವುದಾದರೆ, ಈ ಹಂತದಲ್ಲಿ ನಿಮ್ಮ ಅಹಂ ಅನ್ನು ನಿಭಾಯಿಸುವುದು ಒಳ್ಳೆಯದು. ಇಲ್ಲದಿದ್ದರೆ ನಿಮ್ಮ ಸಂಬಂಧದಲ್ಲಿ ಬಿರುಕು ಉಂಟಾಗಬಹುದು. ವಿವಾಹಿತ ವ್ಯಕ್ತಿಗಳ ಕುರಿತು ಹೇಳುವುದಾದರೆ, ನಿಮ್ಮ ಜೀವನ ಸಂಗಾತಿಯೊಂದಿಗೆ ಸಮನ್ವಯವನ್ನು ಸಾಧಿಸುವುದು ಒಳ್ಳೆಯದು. ಇದರಿಂದಾಗಿ ವಿವಾಹಿತ ವ್ಯಕ್ತಿಗಳ ಬದುಕು ಹಸನಾಗಲಿದೆ.
ಕನ್ಯಾ: ಕನ್ಯಾ ರಾಶಿಯವರಿಗೆ ಈ ವಾರದಲ್ಲಿ ಒಳ್ಳೆಯ ಫಲ ದೊರೆಯಲಿದೆ. ವ್ಯವಹಾರಕ್ಕೆ ಸಂಬಂಧಿಸಿದಂತೆ ನೀವು ಸಾಕಷ್ಟು ಪ್ರಯಾಣಿಸಬೇಕಾದೀತು. ಈ ವಾರದಲ್ಲಿ ಉದ್ಯೋಗದಲ್ಲಿರುವವರು ಸಾಕಷ್ಟು ಕಠಿಣ ಶ್ರಮವನ್ನು ಮಾಡಲಿದ್ದಾರೆ. ನಿಮ್ಮ ಅರೋಗ್ಯದ ಕುರಿತು ಹೇಳುವುದಾದರೆ, ಆರೋಗ್ಯವನ್ನು ಕಾಪಾಡುವುದಕ್ಕಾಗಿ ನಿರಂತರವಾಗಿ ಯೋಗಾಭ್ಯಾಸ ಮಾಡಿರಿ. ಆರ್ಥಿಕವಾಗಿ ಈ ಸಮಯವು ದುಬಾರಿ ಎನಿಸಲಿದೆ. ನಿಮ್ಮ ಮನೆಯ ದುರಸ್ತಿಗಾಗಿ ಒಂದಷ್ಟು ಹಣವನ್ನು ನೀವು ಖರ್ಚು ಮಾಡಲಿದ್ದೀರಿ. ಇದೇ ವೇಳೆ, ಶಿಕ್ಷಣದಲ್ಲಿ ನಿರೀಕ್ಷಿತ ಫಲಿತಾಂಶವನ್ನು ಪಡೆಯುವುದಕ್ಕಾಗಿ ನೀವು ಕಠಿಣ ಶ್ರಮ ಪಡಬೇಕು. ನಿಮ್ಮ ಪ್ರೇಮ ಸಂಬಂಧದ ಕುರಿತು ಮಾತನಾಡುವುದಾದರೆ, ನಿಮ್ಮ ನಡುವೆ ಇದ್ದ ಅಂತರ ಮತ್ತು ತಪ್ಪು ಗ್ರಹಿಕೆಯು ಈ ವಾರದಲ್ಲಿ ದೂರಗೊಳ್ಳಲಿದೆ. ಹೀಗಾಗಿ ನಿಮ್ಮ ಸಂಬಂಧದಲ್ಲಿ ಮತ್ತೆ ಪ್ರೇಮವು ಅಂಕುರಿಸಲಿದೆ. ವೈವಾಹಿಕ ಬದುಕಿನ ವಿಚಾರದಲ್ಲಿ ಹೇಳುವುದಾದರೆ ಈ ವಾರವು ಚೆನ್ನಾಗಿರಲಿದೆ. ನೀವು ನಿಮ್ಮ ಜೀವನ ಸಂಗಾತಿಯೊಂದಿಗೆ ಎಲ್ಲಾದರೂ ಹೋಗಬಹುದು.
ತುಲಾ: ತುಲಾ ರಾಶಿಯಲ್ಲಿ ಹುಟ್ಟಿದವರಿಗೆ ಈ ವಾರದಲ್ಲಿ ಧನಾತ್ಮಕ ಫಲ ದೊರೆಯಲಿದೆ. ಉದ್ಯೋಗಸ್ಥರ ಕುರಿತು ಚರ್ಚಿಸುವುದಾದರೆ, ನಿಮ್ಮ ಕೆಲಸದಲ್ಲಿ ನೀವು ಸಾಕಷ್ಟು ಜಾಗರೂಕರಾಗಿರಬೇಕು. ಈ ಸಂದರ್ಭದಲ್ಲಿ ನಿಮ್ಮ ಹಿರಿಯ ಅಧಿಕಾರಿಗಳೊಂದಿಗೆ ವಾದ ಮಾಡಬೇಡಿ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರು ಈ ವಾರದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಇಲ್ಲದಿದ್ದರೆ ವ್ಯವಹಾರದಲ್ಲಿ ಸವಾಲುಗಳು ಎದುರಾಗಬಹುದು. ಈ ವಾರದಲ್ಲಿ ಋತುಮಾನಕ್ಕೆ ಸಂಬಂಧಿಸಿದ ಜ್ವರ, ಚಳಿ, ಕೆಮ್ಮು ಇತ್ಯಾದಿ ಸಮಸ್ಯೆಗಳು ಎದುರಾಗಬಹುದು. ಇಂತಹ ಸಂದರ್ಭದಲ್ಲಿ ನಿಮ್ಮ ಆರೋಗ್ಯಕ್ಕೆ ನೀವು ಗಮನ ನೀಡುವುದು ಒಳ್ಳೆಯದು. ಜಮೀನು ಅಥವಾ ಆಸ್ತಿಯ ಖರೀದಿಯನ್ನು ನೀವು ಯೋಚಿಸುತ್ತಿದ್ದರೆ ಮುಂದಕ್ಕೆ ಹೆಜ್ಜೆ ಇಡುವ ಮೊದಲು ಸಾಕಷ್ಟು ಪರ್ಯಾಲೋಚನೆಯನ್ನು ನಡೆಸಿರಿ. ಇದೇ ವೇಳೆ ವಿದ್ಯಾರ್ಥಿಗಳು ಅನಗತ್ಯ ವಿಚಾರಗಳಲ್ಲಿ ಕೈ ಹಾಕದೆ ಅಗತ್ಯ ಶೈಕ್ಷಣಿಕ ವಿಷಯದ ಮೇಲೆ ಮಾತ್ರವೇ ಗಮನ ಹರಿಸಬೇಕು. ಹೀಗೆ ಮಾಡಿದರೆ ಮಾತ್ರವೇ ನಿಮ್ಮ ಬದುಕಿನಲ್ಲಿ ನೀವು ಯಶಸ್ಸನ್ನು ಗಳಿಸಬಹುದು. ಪ್ರೇಮಿಗಳ ಕುರಿತು ಚರ್ಚಿಸುವುದಾದರೆ, ನಿಮ್ಮ ಸಂಗಾತಿಗೆ ಸಂಬಂಧಿಸಿದಂತೆ ನೀವು ಸ್ವಲ್ಪ ಅಸಮಾಧಾನವನ್ನು ಎದುರಿಸಬಹುದು. ಇದೇ ವೇಳೆ ವೈವಾಹಿಕ ಜೀವನದಲ್ಲಿ ಉದ್ವೇಗ ಕಾಣಿಸಿಕೊಳ್ಳಬಹುದು. ಹೀಗಾಗಿ ಮಾನಸಿಕ ಶಾಂತಿ ಕದಡಬಹುದು. ಇಂತಹ ಸಂದರ್ಭದಲ್ಲಿ ತಾಳ್ಮೆ ವಹಿಸುವುದು ಒಳ್ಳೆಯದು.
ವೃಶ್ಚಿಕ: ವೃಶ್ಚಿಕ ರಾಶಿಯಲ್ಲಿ ಹುಟ್ಟಿದವರಿಗೆ ಈ ವಾರದಲ್ಲಿ ಧನಾತ್ಮಕ ಫಲ ದೊರೆಯಲಿದೆ. ಉದ್ಯೋಗದಲ್ಲಿರುವವರ ಕುರಿತು ಹೇಳುವುದಾದರೆ, ನೀವು ನಿಮ್ಮ ಕೆಲಸವನ್ನು ಬದಲಾಯಿಸಲು ಇಚ್ಛಿಸುವುದಾದರೆ ಇದು ಸಕಾಲವಲ್ಲ. ಈಗ ಈ ವಿಷಯಕ್ಕೆ ಸಂಬಂಧಿಸಿದ ಯಾವುದೇ ಕ್ರಮವನ್ನು ತೆಗೆದುಕೊಳ್ಳಬೇಡಿ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರಿಗೆ ಈ ಸಮಯವು ಪ್ರಯೋಜನಕಾರಿಯಾಗಿದೆ. ನಿಮ್ಮ ಉದ್ಯಮವನ್ನು ಬೆಳೆಸುವುದಕ್ಕಾಗಿ ಎಚ್ಚರಿಕೆಯಿಂದ ಹೆಜ್ಜೆ ಇಡಿ. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವವರಿಗೆ ಸಮಯವು ಅನುಕೂಲಕರವಾಗಿದೆ. ಆಧುನಿಕ ಶಿಕ್ಷಣವನ್ನು ಮುಂದುವರಿಸುವುದಾದರೆ ಈ ಸಮಯವು ಅನುಕೂಲಕರವಾಗಿದೆ. ನೀವು ಯಾರಿಂದಾದರೂ ಹಣವನ್ನು ಸಾಲ ಪಡೆದಿದ್ದರೆ, ಇದರ ಮರುಪಾವತಿಗೆ ಸಮಯವು ಅನುಕೂಲಕರವಾಗಿದೆ. ನಿಮ್ಮ ಪ್ರಣಯ ಸಂಬಂಧದ ಕುರಿತು ಹೇಳುವುದಾದರೆ, ನಿಮ್ಮ ಮಾಜಿ ಸಂಗಾತಿಯು ನಿಮ್ಮತ್ತ ಮರಳಬಹುದು. ಆದರೂ ನಿಮ್ಮ ಸಂಬಂಧವು ಹಿಂದೆಗಿಂತ ಭಿನ್ನವಾಗಿರಲಿದೆ. ವೈವಾಹಿಕ ಬದುಕಿನ ಕುರಿತು ಹೇಳುವುದಾದರೆ, ಹಿಂದಿನ ಕುಂದುಕೊರತೆಗಳನ್ನು ಮರೆತು ನಿಮ್ಮ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲು ಗಮನ ನೀಡುವುದು ಒಳ್ಳೆಯದು.
ಧನು: ಧನು ರಾಶಿಯವರಿಗೆ ಈ ವಾರದಲ್ಲಿ ಒಳ್ಳೆಯ ಫಲ ದೊರೆಯಲಿದೆ. ಉದ್ಯೋಗದಲ್ಲಿರುವವರ ಕುರಿತು ಹೇಳುವುದಾದರೆ, ನೀವು ಕೆಲಸವನ್ನು ಬದಲಾಯಿಸಲು ಇಚ್ಛಿಸುವುದಾದರೆ ಈ ಸಮಯವು ಅನುಕೂಲಕರವಾಗಿದೆ. ಶೇರು ಮಾರುಕಟ್ಟೆ ಅಥವಾ ಸಟ್ಟಾ ಮಾರುಕಟ್ಟೆಯಲ್ಲಿ ನೀವು ಹಣ ಹೂಡಲು ಇಚ್ಛಿಸುವುದಾದರೆ ಸಾಕಷ್ಟು ಎಚ್ಚರಿಕೆಯಿಂದ ಹೂಡಿಕೆ ಮಾಡಿರಿ. ವ್ಯವಹಾರದಲ್ಲಿ ತಪ್ಪು ಮಾಡುವ ಕಾರಣ ನೀವು ನಷ್ಟಕ್ಕೀಡಾಗಬಹುದು. ನಿಮ್ಮ ಆರೋಗ್ಯದ ಕುರಿತು ಹೇಳುವುದಾದರೆ, ನಿಮ್ಮ ಕಣ್ಣು ಅಥವಾ ಹೊಟ್ಟೆಗೆ ಸಂಬಂಧಿಸಿದಂತೆ ಏನಾದರೂ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಈ ಸಂದರ್ಭದಲ್ಲಿ ಅನಗತ್ಯ ಒತ್ತಡವನ್ನು ದೂರವಿಡಿ. ಆಗ ಮಾತ್ರವೇ ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ. ನಿಮ್ಮ ಶಿಕ್ಷಣದ ಕುರಿತು ಹೇಳುವುದಾದರೆ, ಯಾವುದಾದರೂ ಸ್ಪರ್ಧೆಗೆ ನೀವು ಸಿದ್ಧತೆ ನಡೆಸುತ್ತಿದ್ದರೆ, ಅತಿಯಾದ ಆತ್ಮವಿಶ್ವಾಸದ ಕಾರಣ ನಿಮಗೆ ಯಶಸ್ಸು ದೊರೆಯದೆ ಹೋಗಬಹುದು. ನಿಮ್ಮ ಹಣಕಾಸಿನ ಕುರಿತು ಚರ್ಚಿಸುವುದಾದರೆ, ನೀವು ಶೇರು ಮಾರುಕಟ್ಟೆ ಅಥವಾ ಸಟ್ಟಾ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಇಚ್ಛಿಸುವುದಾದಲ್ಲಿ, ನೀವು ಹೆಚ್ಚಿನ ಲಾಭವನ್ನು ಪಡೆಯಬಹುದು. ಪ್ರೇಮ ಸಂಬಂಧಕ್ಕೆ ಸಂಬಂಧಿಸಿದಂತೆ, ಏನಾದರೂ ತಪ್ಪು ಗ್ರಹಿಕೆಯ ಕಾರಣ ನಿಮ್ಮ ಸಂಗಾತಿಯ ಜೊತೆಗೆ ಸಂಘರ್ಷ ಉಂಟಾಗಬಹುದು. ಇದರಿಂದಾಗಿ ಸಂಬಂಧದಲ್ಲಿ ಸಾಕಷ್ಟು ಅಂತರ ಕಾಣಿಸಿಕೊಳ್ಳಬಹುದು. ವೈವಾಹಿಕ ಸಂಬಂಧಕ್ಕೆ ಸಂಬಂಧಿಸಿದಂತೆ ಈ ವಾರವು ಅನುಕೂಲಕರ. ನಿಮ್ಮ ಜೀವನ ಸಂಗಾತಿಯ ಜೊತೆಗೆ ನೀವು ಎಲ್ಲಾದರೂ ಹೋಗಬಹುದು.
ಮಕರ: ಮಕರ ರಾಶಿಯಲ್ಲಿ ಹುಟ್ಟಿದವರಿಗೆ ಈ ವಾರವು ಅನುಕೂಲಕರವಾಗಿದೆ. ಉದ್ಯೋಗದಲ್ಲಿರುವವರ ಕುರಿತು ಮಾತನಾಡುವುದಾದರೆ, ನಿಮ್ಮ ವೃತ್ತಿಪರ ಕ್ಷೇತ್ರದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯವಿದೆ. ನೀವು ಉದ್ಯೋಗವನ್ನು ಬದಲಾಯಿಸಲು ಇಚ್ಛಿಸುವುದಾದಲ್ಲಿ, ಸಮಯವು ಇದಕ್ಕೆ ಅನುಕೂಲಕರವಾಗಿದೆ. ನಿಮ್ಮ ಕೌಶಲ್ಯವನ್ನು ವೃದ್ಧಿಸಲು ನಿಮಗೆ ಹೆಚ್ಚಿನ ಅವಕಾಶ ಲಭಿಸಲಿದೆ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳು ಈ ವಾರದಲ್ಲಿ ಯಾವುದೇ ಬದಲಾವಣೆಯನ್ನು ಮಾಡಬಾರದು. ಶೇರು ಮಾರುಕಟ್ಟೆ ಅಥವಾ ಸಟ್ಟಾ ಮಾರುಕಟ್ಟೆಯಲ್ಲಿ ಹಣ ಹೂಡುವವರಿಗೆ ನಷ್ಟ ಉಂಟಾಗಲಿದೆ. ಉದ್ಯೋಗದಲ್ಲಿರುವವರಿಗೆ ಸಮಯವು ಅನುಕೂಲಕರವಾಗಿದೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಮೈಗ್ರೇನ್ ಸಮಸ್ಯೆಯಿಂದ ಬಳಲುತ್ತಿರುವವರು ಈ ವಾರದಲ್ಲಿ ತಮ್ಮ ಸ್ವಯಂ ಆರೈಕೆಗೆ ಒತ್ತು ನೀಡಬೇಕು. ನಿಮ್ಮ ದೈನಂದಿನ ಬದುಕಿನಲ್ಲಿ ಯೋಗ ಮತ್ತು ವ್ಯಾಯಾಮಕ್ಕೆ ಒತ್ತು ನೀಡಿರಿ. ಶಿಕ್ಷಣದ ಕುರಿತು ಹೇಳುವುದಾದರೆ, ಈ ವಾರದಲ್ಲಿ ನಿಮಗೆ ಹೊಸ ಅವಕಾಶಗಳು ಲಭಿಸಲಿವೆ. ನಿರ್ದಿಷ್ಟ ಸಂಶೋಧನೆಯಲ್ಲಿ ಪಾಲ್ಗೊಳ್ಳುವ ಅವಕಾಶ ನಿಮಗೆ ಲಭಿಸಲಿದೆ. ನಿಮ್ಮ ಪ್ರಣಯ ಸಂಬಂಧದ ಕುರಿತು ಚರ್ಚಿಸುವುದಾದರೆ, ನಿಮ್ಮ ಹಿಂದಿನ ಸಂಗಾತಿಯ ಜೊತೆಗೆ ಒಡಕು ಉಂಟಾಗಬಹುದು ಹಾಗೂ ಹೊಸ ಸಂಗಾತಿಯನ್ನು ಪಡೆಯಬಹುದು. ಈ ಅವಧಿಯಲ್ಲಿ ನಿಮ್ಮ ವೈವಾಹಿಕ ಬದುಕು ಚೆನ್ನಾಗಿರಲಿದೆ. ನಿಮ್ಮ ಜೀವನ ಸಂಗಾತಿ ಮತ್ತು ನೀವು ಯಾವುದಾದರೂ ಒಂದು ಸ್ಥಳಕ್ಕೆ ಒಟ್ಟಿಗೆ ಭೇಟಿ ನೀಡಬಹುದು.
ಕುಂಭ: ಕುಂಭ ರಾಶಿಯವರಿಗೆ ಈ ವಾರದಲ್ಲಿ ಒಳ್ಳೆಯ ಫಲ ದೊರೆಯಲಿದೆ. ಉದ್ಯೋಗದಲ್ಲಿರುವವರ ಕುರಿತು ಹೇಳುವುದಾದರೆ, ಹೊಸ ಕೆಲಸವನ್ನು ಹುಡುಕಲು ನಿರ್ಧರಿಸುವುದಾದರೆ ಇದು ನಿಮಗೆ ಸಕಾಲ. ಇದೇ ವೇಳೆ, ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರಿಗೆ ಪ್ರಗತಿ ಸಾಧಿಸುವುದಕ್ಕಾಗಿ ಅವಕಾಶಗಳು ಲಭಿಸಲಿವೆ. ಈ ವಾರದಲ್ಲಿ ನಿಮ್ಮ ಆರೋಗ್ಯದಲ್ಲಿ ಕುಸಿತ ಉಂಟಾಗಬಹುದು. ನಿಮ್ಮ ಅಜಾಗರೂಕತೆಯ ಕಾರಣ ನರಕ್ಕೆ ಸಂಬಂಧಿಸಿದ ಕೆಲ ಸಮಸ್ಯೆಗಳು ಎದುರಾಗಬಹುದು. ನಿಮ್ಮ ಹಣಕಾಸಿನ ಕುರಿತು ಹೇಳುವುದಾದಲ್ಲಿ, ಮನೆಯ ದುರಸ್ತಿ ಮತ್ತು ಇತರ ಅನಗತ್ಯ ವಸ್ತುಗಳಿಗಾಗಿ ನೀವು ಹೆಚ್ಚಿನ ಹಣವನ್ನು ಖರ್ಚು ಮಾಡಬಹುದು. ಈ ಸಮಯವು ಯಾವುದೇ ವೃತ್ತಿಪರ ಕೋರ್ಸ್ ಅನ್ನು ಮುಂದುವರಿಸಲು ಒಳ್ಳೆಯದು. ನಿಮ್ಮ ಪ್ರೇಮ ಸಂಬಂಧದ ಕುರಿತು ಹೇಳುವುದಾದಲ್ಲಿ, ಈ ಸಂದರ್ಭದಲ್ಲಿ ಕಚೇರಿಯಲ್ಲಿ ನಿಮ್ಮ ಸಹೋದ್ಯೋಗಿಯ ಜೊತೆಗಿನ ಅನುರಾಗವು ಹೆಚ್ಚಲಿದೆ. ವೈವಾಹಿಕ ಬದುಕಿನ ಕುರಿತು ಹೇಳುವುದಾದಲ್ಲಿ, ನಿಮ್ಮ ಜೀವನ ಸಂಗಾತಿಯ ಜೊತೆಗೆ ಭಿನ್ನಾಭಿಪ್ರಾಯ ಉಂಟಾಗಲಿದೆ. ಆದರೆ ಕೌಟುಂಬಿಕ ವಿಷಯವನ್ನು ನಾಲ್ಕು ಗೋಡೆಗಳ ನಡುವೆಯೇ ನಿಭಾಯಿಸಲು ಯತ್ನಿಸಿ.
ಮೀನ: ಮೀನ ರಾಶಿಯವರಿಗೆ ಈ ವಾರವು ಪ್ರಯೋಜನಕಾರಿ ಎನಿಸಲಿದೆ. ಆದರೆ ಉದ್ಯೋಗದಲ್ಲಿರುವವರು ಈ ಅವಧಿಯಲ್ಲಿ ಕೆಲವೊಂದು ಸಮಸ್ಯೆಗಳನ್ನು ಎದುರಿಸಬಹುದು. ಸರ್ಕಾರಿ ಹುದ್ದೆಗಳಲ್ಲಿರುವ ವ್ಯಕ್ತಿಗಳು ಉದ್ಯೋಗವನ್ನು ಬದಲಾಯಿಸಲು ಇಚ್ಛಿಸುವುದಾದರೆ, ಇದು ಸಕಾಲವಲ್ಲ. ವ್ಯಾಪಾರೋದ್ಯಮಿಗಳಿಗೆ ಪರಿಸ್ಥಿತಿಯು ಅನುಕೂಲಕರವಾಗಿದೆ. ನಿಮ್ಮ ವ್ಯವಹಾರವನ್ನು ಬೆಳೆಸುವುದಕ್ಕಾಗಿ ನೀವು ಸಾಕಷ್ಟು ಶ್ರಮ ಪಡಬೇಕು. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ವಾಹನ ಚಲಾಯಿಸುವಾಗ ಸಾಕಷ್ಟು ಎಚ್ಚರ ವಹಿಸಿ. ಇಲ್ಲದಿದ್ದರೆ ನೀವು ಗಾಯಗೊಳ್ಳುವ ಸಾಧ್ಯತೆ ಇದೆ. ಶಿಕ್ಷಣದ ವಿಚಾರದಲ್ಲಿ ಈ ವಾರವು ಅನುಕೂಲಕರವಾಗಿದೆ. ವೃತ್ತಿಪರ ಕೋರ್ಸ್ ಅನ್ನು ಮುಂದುವರಿಸಲು ನೀವು ಇಚ್ಛಿಸುವುದಾದರೆ, ಇದರಲ್ಲಿ ನಿಮಗೆ ಯಶಸ್ಸು ದೊರೆಯಲಿದೆ. ಈ ವಾರವು ಪ್ರೇಮ ಜೀವನಕ್ಕೆ ಒಳ್ಳೆಯದು. ನಿಮ್ಮ ಸಂಗಾತಿ ಮತ್ತು ನಿಮ್ಮ ನಡುವಿನ ಯಾವುದೇ ತಪ್ಪು ಗ್ರಹಿಕೆಯು ನಿವಾರಣೆಯಾಗಲಿದೆ. ವಿವಾಹಿತ ವ್ಯಕ್ತಿಗಳ ಕುರಿತು ಹೇಳುವುದಾದರೆ, ಮೂರನೇ ವ್ಯಕ್ತಿಗೆ ಹಸ್ತಕ್ಷೇಪ ಮಾಡಲು ಅವಕಾಶ ನೀಡಬೇಡಿ. ಬದಲಾಗಿ ನಿಮ್ಮ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲು ಯತ್ನಿಸಿ.