ETV Bharat / state

ಬೆಂಗಳೂರು: ವಾರ್ಷಿಕ ಸಂಚಾರ ಉಲ್ಲಂಘನೆ‌ ಪ್ರಕರಣಗಳು, ಅಪಘಾತ ಹಾಗೂ ಮೃತರ ಅಂಕಿ ಅಂಶ ಹೀಗಿದೆ! - ACCIDENT FATALITIES STATISTICS

ಸಿಲಿಕಾನ್​​​​ ಸಿಟಿಯಲ್ಲಿ ಈ ವರ್ಷ ಅಪಘಾತ ಪ್ರಕರಣಗಳು ಸ್ವಲ್ಪ ಕಡಿಮೆಯಾಗಿದೆ. ಈ ಬಗ್ಗೆ ಬೆಂಗಳೂರು ಸಂಚಾರಿ ಪೊಲೀಸ್​​ ಇಲಾಖೆ ವಾರ್ಷಿಕ ಅಂಕಿ ಅಂಶ ಬಿಡುಗಡೆ ಮಾಡಿದೆ.

BENGALURU  ANNUAL TRAFFIC VIOLATION CASES  ACCIDENTS STATISTICS  ಸಂಚಾರ ಉಲ್ಲಂಘನೆ‌ ಪ್ರಕರಣ
ಬೆಂಗಳೂರು: ವಾರ್ಷಿಕ ಸಂಚಾರ ಉಲ್ಲಂಘನೆ‌ ಪ್ರಕರಣಗಳು, ಅಪಘಾತ ಹಾಗೂ ಮೃತರ ಅಂಕಿ ಅಂಶ ಹೀಗಿದೆ! (ETV Bharat)
author img

By ETV Bharat Karnataka Team

Published : Dec 22, 2024, 5:10 PM IST

ಬೆಂಗಳೂರು: ರಾಜಧಾನಿಯಲ್ಲಿ ಕಳೆದ 2 ವರ್ಷಗಳಿಗೆ ಹೋಲಿಸಿದರೆ 2024ರಲ್ಲಿ ಸಂಭವಿಸಿದ ಅಪಘಾತ ಪ್ರಕರಣಗಳ ಸಂಖ್ಯೆ ಕೊಂಚ ಇಳಿಮುಖವಾಗಿದೆ.

ಬೆಂಗಳೂರು ಸಂಚಾರಿ ಪೊಲೀಸ್​​ ಇಲಾಖೆಯ ವಾರ್ಷಿಕ ಅಂಕಿ ಅಂಶಗಳ ಪ್ರಕಾರ 2024 ರಲ್ಲಿ (ಡಿಸೆಂಬರ್‌ವರೆಗಿನ 18ರ ವರೆಗಿನ ಅಂಕಿ ಅಂಶ) ನಗರದಲ್ಲಿ 824 ಗಂಭೀರ ಅಪಘಾತ ಪ್ರಕರಣಗಳು ವರದಿಯಾಗಿದ್ದು, 845 ಜನ ಸಾವನ್ನಪ್ಪಿದ್ದಾರೆ. 3,778 ಗಂಭೀರ ಸ್ವರೂಪವಲ್ಲದ ಅಪಘಾತಗಳು ಸಂಭವಿಸಿದ್ದು, 3,885 ಜನ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಅಪಘಾತದಿಂದ ಮೃತಪಟ್ಟವರ ಸಂಖ್ಯೆ ಇಳಿಮುಖವಾಗಿರುವುದು ಅಂಕಿ ಅಂಶಗಳ ಮೂಲಕ ತಿಳಿದು ಬಂದಿದೆ.

ಕಳೆದ ಮೂರು ವರ್ಷಗಳ ಅಂಕಿ ಅಂಶ:

  • ವರ್ಷ : 2022
  • ಒಟ್ಟು ಅಪಘಾತಗಳು : 3,822
  • ಗಂಭೀರ ಅಪಘಾತಗಳು : 752
  • ಮೃತಪಟ್ಟವರು : 772
  • ಗಂಭೀರವಲ್ಲದ ಅಪಘಾತಗಳು : 3,070
  • ಗಾಯಾಳುಗಳು: 3,189
  • ವರ್ಷ : 2023
  • ಒಟ್ಟು ಅಪಘಾತಗಳು : 4,974
  • ಗಂಭೀರ ಅಪಘಾತಗಳು : 882
  • ಮೃತಪಟ್ಟವರು : 910
  • ಗಂಭೀರವಲ್ಲದ ಅಪಘಾತಗಳು : 4,092
  • ಗಾಯಾಳುಗಳು : 4,191
  • ವರ್ಷ : 2024
  • ಒಟ್ಟು ಅಪಘಾತಗಳು : 4,602
  • ಗಂಭೀರ ಅಪಘಾತಗಳು : 824
  • ಮೃತಪಟ್ಟವರು : 845
  • ಗಂಭೀರವಲ್ಲದ ಅಪಘಾತಗಳು : 3,778
  • ಗಾಯಾಳುಗಳು : 3,885
  • ಠಾಣಾವಾರು ಗರಿಷ್ಠ ಅಪಘಾತ ಪ್ರಕರಣಗಳು (2024)
  • ಕೆ.ಆರ್.ಪುರಂ ಸಂಚಾರಿ ಠಾಣೆ - 202
  • ಯಲಹಂಕ ಸಂಚಾರಿ ಠಾಣೆ - 198
  • ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಚಾರಿ ಠಾಣೆ - 198
  • ವೈಟ್‌ಫೀಲ್ಡ್ ಸಂಚಾರಿ ಠಾಣೆ - 158
  • ಕೆಂಗೇರಿ ಸಂಚಾರಿ ಠಾಣೆ - 152
  • ಇಂದಿರಾನಗರ ಸಂಚಾರಿ ಠಾಣೆ - 100

ಕಳೆದ 2 ವರ್ಷಗಳಿಗೆ ಹೋಲಿಸಿದಾಗ ನಗರದಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳ ಸಂಖ್ಯೆ ಸಹ ಗಣನೀಯವಾಗಿ ತಗ್ಗಿರುವುದು ಸಂಚಾರಿ ಪೊಲೀಸ್​ ಇಲಾಖೆಯ ವಾರ್ಷಿಕ ಅಂಕಿ ಅಂಶಗಳ ಮೂಲಕ ತಿಳಿದು ಬಂದಿದೆ. 2022 ರಲ್ಲಿ ವಿವಿಧ ಸಂಚಾರಿ ನಿಯಮಗಳ ಉಲ್ಲಂಘನೆಯ ಆರೋಪದಡಿ ಒಟ್ಟು 1.04 ಕೋಟಿ ಪ್ರಕರಣಗಳನ್ನು ಸಂಚಾರಿ ಪೊಲೀಸರು ದಾಖಲಿಸಿದ್ದರೆ, 2023ರಲ್ಲಿ 89.99 ಲಕ್ಷ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದರು. ಆದರೆ 2024ರಲ್ಲಿ (ಅಕ್ಟೋಬರ್ 31ರ ವರೆಗಿನ ಅಂಕಿ ಅಂಶಗಳ ಅನುಸಾರ) ಒಟ್ಟು 69.73 ಲಕ್ಷ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಹೆಚ್ಚು ದಾಖಲಾದ ಪ್ರಕರಣಗಳು

  • ಹೆಲ್ಮೆಟ್ ರಹಿತ ದ್ವಿಚಕ್ರ ವಾಹನ ಚಾಲನೆ - 27,41,532
  • ಹಿಂಬದಿ ಸವಾರ ಹೆಲ್ಮೆಟ್ ಧರಿಸದಿರುವುದು - 18,23,665
  • ನೋ ಪಾರ್ಕಿಂಗ್‌ನಲ್ಲಿ ವಾಹನ ನಿಲುಗಡೆ - 8,18,996
  • ಸೀಟ್ ಬೆಲ್ಟ್ ಧರಿಸದೆ ಕಾರು ಚಾಲನೆ - 3,34,860
  • ದೋಷಪೂರಿತ ನಂಬರ್ ಪ್ಲೇಟ್ - 1,57,665
  • ಸಿಗ್ನಲ್ ಜಂಪ್ - 4,95,874

ನಗರದ ಬಹುತೇಕ ಕಡೆಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನಾಧಾರಿತ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಪ್ರಮುಖ ಜಂಕ್ಷನ್‌ಗಳು ಮತ್ತು ಕಾರಿಡಾರ್‌ಗಳಲ್ಲಿ ಅಳವಡಿಸಲಾಗಿರುವ 1,500ಕ್ಕೂ ಹೆಚ್ಚು ಕ್ಯಾಮರಾಗಳ ಸಹಾಯದಿಂದ ಸಂಚಾರ ನಿಯಂತ್ರಣ ಕೋಣೆಯಿಂದಲೇ ಕುಳಿತು ಲೈವ್ ಫೀಡ್‌ಗಳನ್ನು ರಿಯಲ್ ಟೈಮ್‌ನಲ್ಲಿ ವೀಕ್ಷಿಸಬಹುದಾಗಿದೆ. ಇದರಿಂದಾಗಿ ಮೊದಲಿಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ದಂಡ ವಿಧಿಸಲಾಗುತ್ತಿದೆ.

ಹೆಚ್ಚು ದಂಡ ಬಾಕಿ ಇರುವ ವಾಹನಗಳ ಮಾಲೀಕರ ಪಟ್ಟಿ ಸಿದ್ಧಪಡಿಸಿಕೊಂಡು ಅಂಥವರ ಮನೆ ಬಾಗಿಲಿಗೆ ಹೋಗಿ ದಂಡ ವಸೂಲಿಯಂಥಹ ಕೆಲಸಗಳನ್ನು ಆರಂಭಿಸಿರುವುದರಿಂದ ಉಲ್ಲಂಘನೆ ಪ್ರಕರಣಗಳು ಕಡಿಮೆಯಾಗುತ್ತಿವೆ ಎಂದು ಬೆಂಗಳೂರು ಸಂಚಾರಿ ಪೊಲೀಸ್ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಇದನ್ನೂ ಓದಿ: ರಾತ್ರಿ 12 ಗಂಟೆ ಬಳಿಕ ಸಂಭ್ರಮಾಚರಣೆ, ಬೀಚ್​​ನಲ್ಲಿ ಮದ್ಯಪಾನ ನಿರ್ಬಂಧ: ಹೊಸ ವರ್ಷಾಚರಣೆಗೆ ಮಾರ್ಗಸೂಚಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.