ETV Bharat / international

ಪಾಕಿಸ್ತಾನ: ಕರಾಚಿ-ಲಾಹೋರ್​ಗಳಲ್ಲಿ ಶೀತಗಾಳಿ, ಅಪಾಯಕಾರಿ ಮಟ್ಟದಲ್ಲಿ ವಾಯುಮಾಲಿನ್ಯ - PAKISTAN COLD WAVE

ಪಾಕಿಸ್ತಾನದ ಪ್ರಮುಖ ನಗರಗಳಲ್ಲಿ ವಾಯುಮಾಲಿನ್ಯ ತೀವ್ರವಾಗಿದೆ.

ಪಾಕಿಸ್ತಾನ: ಕರಾಚಿ-ಲಾಹೋರ್​ಗಳಲ್ಲಿ ಶೀತಗಾಳಿ, ಅಪಾಯಕಾರಿ ಮಟ್ಟದಲ್ಲಿ ವಾಯುಮಾಲಿನ್ಯ
ಪಾಕಿಸ್ತಾನ: ಕರಾಚಿ-ಲಾಹೋರ್​ಗಳಲ್ಲಿ ಶೀತಗಾಳಿ, ಅಪಾಯಕಾರಿ ಮಟ್ಟದಲ್ಲಿ ವಾಯುಮಾಲಿನ್ಯ (ani)
author img

By ANI

Published : Dec 22, 2024, 4:05 PM IST

ಕರಾಚಿ: ಪಾಕಿಸ್ತಾನದ ಆರ್ಥಿಕ ರಾಜಧಾನಿ ಕರಾಚಿಯಲ್ಲಿ ಶೀತಗಾಳಿ ಬೀಸುತ್ತಿದ್ದು, ಆತಂಕದ ಮಟ್ಟದಲ್ಲಿ ವಾಯುಮಾಲಿನ್ಯ ಉಂಟಾಗಿದೆ. ಕರಾಚಿಯಲ್ಲಿ 9.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ನಗರದ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 199 ರಷ್ಟಿದ್ದು, ಸ್ವಿಸ್ ವಾಯು ಗುಣಮಟ್ಟ ಮಾನಿಟರ್ ಐಕ್ಯೂಏರ್ ಇದನ್ನು "ಅನಾರೋಗ್ಯಕರ" ಎಂದು ಹೇಳಿದೆ.

ಜಿಯೋ ನ್ಯೂಸ್ ಪ್ರಕಾರ, ಕರಾಚಿ ಮತ್ತು ಲಾಹೋರ್ ಸೇರಿದಂತೆ ಪಾಕಿಸ್ತಾನದ ಪ್ರಮುಖ ನಗರಗಳಲ್ಲಿ ಶೀತಗಾಳಿ ಬೀಸುತ್ತಿದ್ದು ಈ ನಗರಗಳಲ್ಲಿ ದಟ್ಟ ಹೊಗೆಭರಿತ ಮಂಜು ಆವರಿಸಿಕೊಂಡಿದೆ.

ಶೀತಗಾಳಿಯ ಮಧ್ಯೆ ಅನೇಕ ಪ್ರದೇಶಗಳಲ್ಲಿ ತಾಪಮಾನವು ಒಂದಂಕಿಗೆ ಇಳಿಕೆಯಾಗಿರುವುದು ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸಿದೆ. ವಾಯುವ್ಯದಿಂದ ಗಂಟೆಗೆ 8 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಆರ್ದ್ರತೆಯು ಶೇಕಡಾ 41 ರಷ್ಟಿದೆ. ಕರಾಚಿಯಲ್ಲಿ ಈ ತಿಂಗಳಲ್ಲಿ ಎರಡನೇ ಬಾರಿಗೆ ತಾಪಮಾನವು 10 ಡಿಗ್ರಿ ಸೆಲ್ಸಿಯಸ್ ಗಿಂತ ಕಡಿಮೆಯಾಗಿದೆ. ಆಗ್ನೇಯ ಸಿಂಧ್​​ನಲ್ಲಿ ತಾಪಮಾನವು 3 ಡಿಗ್ರಿ ಸೆಲ್ಸಿಯಸ್​ನಿಂದ 4 ಡಿಗ್ರಿ ಸೆಲ್ಸಿಯಸ್​ಗೆ ಇಳಿಯಲಿದೆ ಎಂದು ಪಾಕಿಸ್ತಾನ ಹವಾಮಾನ ಇಲಾಖೆ (ಪಿಎಂಡಿ) ಈ ಹಿಂದೆ ಮುನ್ಸೂಚನೆ ನೀಡಿತ್ತು.

ಈಗಾಗಲೇ ವಾರಗಳಿಂದ ನಿರಂತರ ಮಂಜು ಹೊಗೆಯಿಂದ ಆವೃತವಾಗಿರುವ ಲಾಹೋರ್, 303 ಎಕ್ಯೂಐನೊಂದಿಗೆ ವಿಶ್ವದ ಎರಡನೇ ಅತ್ಯಂತ ಕಲುಷಿತ ನಗರವಾಗಿದೆ. ಈ ಮಟ್ಟವನ್ನು ಐಕ್ಯೂಏರ್ "ಅಪಾಯಕಾರಿ" ಎಂದು ವರ್ಗೀಕರಿಸಿದೆ. ಲಾಹೋರ್​ನಲ್ಲಿ ವಾಯುಮಾಲಿನ್ಯದಿಂದ ಜನ ತೀವ್ರ ಆರೋಗ್ಯ ಸಮಸ್ಯೆಗಳಿಂದ ಬಳಲುವಂತಾಗಿದೆ.

ಇತರ ಪ್ರದೇಶಗಳ ಪೈಕಿ ಬಲೂಚಿಸ್ತಾನ್ ಮತ್ತು ಖೈಬರ್ ಪಖ್ತುನಖ್ವಾ (ಕೆಪಿ)ಗಳಲ್ಲಿ ಕೂಡ ತಾಪಮಾನ ಅಸಹಜ ಕಡಿಮೆ ಮಟ್ಟಕ್ಕಿಳಿದಿದೆ. ಬಲೂಚಿಸ್ತಾನದ ರಾಜಧಾನಿ ಕ್ವೆಟ್ಟಾದಲ್ಲಿ ತಾಪಮಾನವು ಮೈನಸ್ 4 ಡಿಗ್ರಿ ಸೆಲ್ಸಿಯಸ್​ಗೆ ಇಳಿದಿದೆ. ಕಲಾತ್ ಮತ್ತು ತುರ್ಬತ್​ನಂಥ ಇತರ ನಗರಗಳಲ್ಲಿಯೂ ತಾಪಮಾನ ಕಡಿಮೆಯಾಗಿದೆ.

ಪ್ರತಿ ಚಳಿಗಾಲದಲ್ಲಿ ಪಾಕಿಸ್ತಾನದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರದೇಶಗಳಲ್ಲಿ ಬಿಕ್ಕಟ್ಟು ಎದುರಾಗುತ್ತಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ತಂಪಾದ ಗಾಳಿಯು ಧೂಳನ್ನು ಹಿಡಿದಿಟ್ಟುಕೊಳ್ಳುವುದು, ಕಡಿಮೆ ಗುಣಮಟ್ಟದ ಡೀಸೆಲ್​ನ ಬಳಕೆಯಿಂದ ಹೊರಬರುವ ಹೊಗೆ ಮತ್ತು ಬೆಳೆ ತ್ಯಾಜ್ಯ ಸುಡುವುದರಿಂದ ಉಂಟಾಗುವ ಹೊಗೆಯಿಂದಾಗಿ ವಾಯುಮಾಲಿನ್ಯವು ಹದಗೆಟ್ಟಿದೆ. ನಗರ ಪ್ರದೇಶಗಳಲ್ಲಿ ಹೊಗೆ ಮಿಶ್ರಿತ ಮಂಜು ಆವರಿಸುತ್ತಿರುವುದರಿಂದ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ನಿವಾಸಿಗಳಿಗೆ ಸೂಚಿಸಲಾಗಿದೆ. ಉಸಿರಾಟದ ಸಮಸ್ಯೆ ಇರುವವರು ವಿಶೇಷವಾಗಿ ಜಾಗರೂಕರಾಗಿರುವಂತೆ ತಿಳಿಸಲಾಗಿದೆ.

ಇದನ್ನೂ ಓದಿ : 13 ವರ್ಷಗಳ ನಂತರ ಡಮಾಸ್ಕಸ್​ನಲ್ಲಿ ಕತಾರ್ ರಾಯಭಾರ ಕಚೇರಿ ಪುನಾರಂಭ - QATAR EMBASSY IN DAMASCUS

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.