ಅಕ್ರಮ ಡಾಬಾ ನಿರ್ಮಾಣ: ತೆರವುಗೊಳಿಸಿದ ಅಧಿಕಾರಿಗಳು
ಅಕ್ರಮವಾಗಿ ಸರ್ಕಾರಿ ಜಾಗದಲ್ಲಿ ನಿರ್ಮಿಸಿಕೊಂಡಿದ್ದ ಡಾಬಾವನ್ನ ಬೆಳ್ಳಂಬೆಳಗ್ಗೆ ತಹಶೀಲ್ದಾರ್ ನೇತೃತ್ವದಲ್ಲಿ ತೆರವು ಗೊಳಿಸಲಾಗಿದೆ.
ಧಾರವಾಡದ ಹಳಿಯಾಳ ರಸ್ತೆಯಲ್ಲಿ ಅಕ್ರಮವಾಗಿ ಮೌಂಟೇನ್ ವಿಲ್ ಎಂಬ ಡಾಬಾ ನಿರ್ಮಾಣಗೊಂಡಿತ್ತು. ಡಾಬಾ ಮಾಲೀಕರಿಗೆ ನೋಟಿಸ್ ನೀಡಿ ಡಾಬಾ ತೆರವುಗೊಳಿಸುವಂತೆ ಸೂಚನೆ ನೀಡಲಾಗಿತ್ತು. ಮಾಲೀಕರು ತೆರವುಗೊಳಿಸದ ಕಾರಣ ಇಂದು ಬೆಳಗ್ಗೆ ತಹಶಿಲ್ದಾರರು, ಕಂದಾಯ ನಿರೀಕ್ಷಕರು ಪೊಲೀಸ್ ಭದ್ರತೆಯಲ್ಲಿ ತೆರವು ಕಾರ್ಯಾಚರಣೆ ನಡೆಸಿದರು.