ETV Bharat / state

ದಾವಣಗೆರೆಯಲ್ಲಿ ಟ್ರ್ಯಾಕ್ಟರ್ ಓಡಿಸುವ ಟೂರ್ನಿ: ಹಳ್ಳಿ ಚಾಲಕರ ಪ್ರತಿಭೆ ಅನಾವರಣ - Tractor Tournament

author img

By ETV Bharat Karnataka Team

Published : 2 hours ago

ಬೆಣ್ಣೆನಗರಿಯಲ್ಲಿ ಹಳ್ಳಿ ಚಾಲಕರಿಗಾಗಿಯೇ ಶನಿವಾರ ಟ್ರ್ಯಾಕ್ಟರ್ ಟೂರ್ನಮೆಂಟ್ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ನೂರಕ್ಕೂ ಹೆಚ್ಚು ಚಾಲಕರು ಪಾಲ್ಗೊಂಡು ಟ್ರ್ಯಾಕ್ಟರ್​ ಅನ್ನು ನಿಯಮದಂತೆ ಚಲಾಯಿಸಿ ಪ್ರೇಕ್ಷಕರನ್ನು ಬೆರಗುಗೊಳಿಸಿದರು.

ಟ್ರ್ಯಾಕ್ಟರ್ ಟೂರ್ನಮೆಂಟ್
ದಾವಣಗೆರೆಯಲ್ಲಿ ನಡೆದ ಟ್ರ್ಯಾಕ್ಟರ್ ಟೂರ್ನಮೆಂಟ್‌ನ ಒಂದು ಝಲಕ್‌ (ETV Bharat)

ದಾವಣಗೆರೆ: ಜಿಲ್ಲೆಯ ಹಳ್ಳಿ ಟ್ರ್ಯಾಕ್ಟರ್ ಚಾಲಕರ ಪ್ರತಿಭೆ ಅನಾವರಣಗೊಳಿಸಲು ಶನಿವಾರ ಟ್ರ್ಯಾಕ್ಟರ್ ಸ್ಪರ್ಧೆ ಏರ್ಪಡಿಸಲಾಗಿತ್ತು. ನೂರಾರು ಟ್ರ್ಯಾಕ್ಟರ್​ ಚಾಲಕರು ಟ್ರ್ಯಾಕ್ಟರ್‌ಸಮೇತ ಭಾಗಿಯಾಗಿ ಬಹುಮಾನಕ್ಕಾಗಿ ಸೆಣಸಿದರು.

ಹರಿಹರ ತಾಲೂಕಿನ ಕೊಕ್ಕನೂರು ಗ್ರಾಮದಲ್ಲಿ ಗಣೇಶ ಹಬ್ಬದ ಪ್ರಯುಕ್ತ ಟ್ರ್ಯಾಕ್ಟರ್​​ ಪಂದ್ಯಾವಳಿಯನ್ನು ಗ್ರಾಮಸ್ಥರು ಆಯೋಜಿಸಿದ್ದರು. ಭತ್ತದ ಗದ್ದೆಯಲ್ಲಿ ಹೇಗೆ ರೊಳ್ಳೆ ಹೊಡೆಯುತ್ತಾರೋ ಅದೇ ರೀತಿ ಸ್ಪರ್ಧೆಯಲ್ಲೂ ಪ್ರತಿಭೆ ತೋರಿಸಲು ಇದೊಂದು ವೇದಿಕೆಯಾಗಿತ್ತು. ಚಾಲಕರು ಬೇರೆ ಬೇರೆ ಭಂಗಿಯಲ್ಲಿ ಟ್ರ್ಯಾಕ್ಟರ್​ ಚಲಾಯಿಸಿ ನೆರೆದಿದ್ದ ಜನರ ಮನರಂಜಿಸಿದರು.‌ ಹಾವೇರಿ, ದಾವಣಗೆರೆ, ಶಿವಮೊಗ್ಗದಿಂದ ಸ್ಪರ್ಧಾಳುಗಳು ಆಗಮಿಸಿದ್ದರು. ನಿಯಮದಂತೆ ಟೈಯರ್​ಗಳ ಮಧ್ಯೆ ಟ್ಯಾಕ್ಟರ್ ಅ​​ನ್ನು ವೇಗವಾಗಿ ಚಲಾಯಿಸಬೇಕಿತ್ತು.

ಟ್ರ್ಯಾಕ್ಟರ್ ಓಡಿಸುವ ಟೂರ್ನಿ ನಡೆದದ್ದು ಹೀಗೆ. (ETV Bharat)

ಆಯೋಜಕ ಕರಿಯಪ್ಪ ಕಡೂರು ಪ್ರತಿಕ್ರಿಯಿಸಿ, "ಟ್ರ್ಯಾಕ್ಟರ್​​ ಚಾಲಕರು ಅತ್ಯುತ್ತಮವಾಗಿ ಚಾಲನೆ ಮಾಡುತ್ತಾರೆ. ಅವರ ಈ ವಿಶೇಷ ಪ್ರತಿಭೆಯನ್ನು ಹೊರತರಲು ನಾವು ಈ ಸ್ಪರ್ಧೆ ಆಯೋಜಿಸಿದ್ದೆವು. ಕಡಿಮೆ ಅವಧಿಯಲ್ಲಿ ಟ್ರ್ಯಾಕ್ಟರ್​ ಚಲಾಯಿಸಿದವರಿಗೆ ಬಹುಮಾನ ನೀಡಲಾಗಿದೆ. ಮೊದಲನೇ ಬಹುಮಾನ 8 ಸಾವಿರ ರೂ, ಎರಡನೇ ಬಹುಮಾನ 5 ಸಾವಿರ ರೂ, ಮೂರನೇ ಬಹುಮಾನ 3 ಸಾವಿರ ರೂ ಮತ್ತು ನಾಲ್ಕನೇ ಬಹುಮಾನ, 1,500 ಸಾವಿರ ರೂ ಇಡಲಾಗಿತ್ತು" ಎಂದು ಮಾಹಿತಿ ನೀಡಿದರು.‌

"ಒಂದು ನಿಮಿಷದ ಅವಧಿಯಲ್ಲಿ ಟ್ರ್ಯಾಕ್ಟರ್​ನಲ್ಲಿ ತಿರುವುಗಳನ್ನು ಸುತ್ತಿ ಬರುವುದು ಸವಾಲಿನ ಕೆಲಸ" ಎಂದು ಗ್ರಾಮಸ್ಥರಾದ ಲಕ್ಷ್ಮಪ್ಪ ಹೇಳಿದರು.

ಇದನ್ನೂ ಓದಿ: ಕಿವುಡರ ರಾಜ್ಯ ಮಟ್ಟದ ಕ್ರೀಡಾಕೂಟ: 25 ಜಿಲ್ಲೆಗಳಿಂದ 500ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗಿ - Deaf State Level Games

ETV Bharat Logo

Copyright © 2024 Ushodaya Enterprises Pvt. Ltd., All Rights Reserved.