ಉಡುಪಿ: ಕಾರಿನ ಬಾನೆಟ್ ಒಳಗೆ 12 ಅಡಿ ಉದ್ದದ ಹೆಬ್ಬಾವು ಪತ್ತೆ- ಅರಣ್ಯಾಧಿಕಾರಿಗಳಿಂದ ರಕ್ಷಣೆ - Python found inside car bonnet - PYTHON FOUND INSIDE CAR BONNET
🎬 Watch Now: Feature Video
Published : Sep 27, 2024, 5:56 PM IST
ಉಡುಪಿ: ಬೈಂದೂರಿನ ನಾಡ ಗ್ರಾಮದ ಕೋಣ್ಕಿ ಎಂಬಲ್ಲಿ ಚಂದ್ರಪ್ರಕಾಶ್ ಶೆಟ್ಟಿ ಅವರ ಕಾರಿನ ಬಾನೆಟ್ ಒಳಗೆ ಬೃಹತ್ ಗಾತ್ರದ ಹೆಬ್ಬಾವು ಪತ್ತೆಯಾಗಿದೆ. ಚಂದ್ರಪ್ರಕಾಶ್ ಶೆಟ್ಟಿ ಬಡಾಕೆರೆ ಜೋಯಿಸರ ಬೆಟ್ಟು ನಿವಾಸಿಯಾಗಿದ್ದು, ಅವರ ಕಾರಿನ ಬಾನೆಟ್ ಒಳಗೆ ಬಾರಿ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿದೆ.
ಎಂದಿನಂತೆ ಕಾರು ಚಲಾಯಿಸುತ್ತಾ ಬರುತ್ತಿರುವಾಗ ದಾರಿ ಮಧ್ಯದಲ್ಲಿ ಕಾರಿನ ಬಾನೆಟ್‌ನಲ್ಲಿ ವಿಪರೀತ ಶಬ್ದವಾಗಿದೆ. ಇಳಿದು ಗಮನಿಸಿದಾಗ 12 ಅಡಿ ಉದ್ದದ ಹೆಬ್ಬಾವು ಇರುವುದು ಕಂಡು ಬಂದಿದೆ. ತಕ್ಷಣ ಕಾರ್ಯಪ್ರವೃತ್ತರಾದ ಚಂದ್ರಪ್ರಕಾಶ್ ಶೆಟ್ಟಿ ಅರಣ್ಯ ಅಧಿಕಾರಿಗಳಿಗೆ ಕರೆ ಮಾಡಿದರು. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಕಾರಿನ ಬಾನೆಟ್ ಒಳಗಿರುವ ಹೆಬ್ಬಾವನ್ನು ಸತತ ಕಾರ್ಯಾಚರಣೆ ಬಳಿಕ ಹೊರತೆಗೆದರು.
ಬೃಹತ್ ಗಾತ್ರದ ಹೆಬ್ಬಾವನ್ನು ಸ್ಥಳೀಯರ ಸಹಾಯದೊಂದಿದೆ ಸುರಕ್ಷಿತವಾಗಿ ಅರಣ್ಯಕ್ಕೆ ಬಿಡಲಾಗಿದೆ. ಈ ಸಂದರ್ಭದಲ್ಲಿ ಅರಣ್ಯ ಅಧಿಕಾರಿಗಳು ಗ್ರಾಮ ಪಂಚಾಯಿತಿ ಸದಸ್ಯರು ಸಹಕರಿಸಿದರು.
ಇದನ್ನೂ ನೋಡಿ: ಮನೆಯಲ್ಲಿದ್ದ ಐಫೋನ್ ಎತ್ತೊಯ್ದು ಟವರ್ ಮೇಲೆ ಕುಳಿತ ಕೋತಿ; ಮಂಗನಾಟಕ್ಕೆ ಕಂಗಾಲಾದ ಮೊಬೈಲ್ ಒಡತಿ! - iPhone in Monkey hand