ಚೆನ್ನೈ: ತಮಿಳುನಾಡಿನಲ್ಲಿ ಕನಿಷ್ಠ 5300 ವರ್ಷಗಳ ಹಿಂದೆಯೇ ಕಬ್ಬಿಣ ಕರಗಿಸುವ ತಂತ್ರಜ್ಞಾನದ ಅರಿವು ಇತ್ತು ಎಂಬುದನ್ನು ವಿಶ್ವಾಸದಿಂದ ಹೇಳುತ್ತೇನೆ ಎಂದು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಗುರುವಾರ ಘೋಷಿಸಿದ್ದಾರೆ.
ರಾಜ್ಯ ಪುರಾತತ್ವ ಇಲಾಖೆಯಿಂದ ಪ್ರಕಟವಾಗಿರುವ 'ಆಂಟಿಕ್ಷಿಟಿ ಆಫ್ ಐರನ್' (ತಮಿಳುನಾಡಿನ ಇತ್ತೀಚಿನ ರೇಡಿಯೋಮೆಟ್ರಿಕ್ ದತ್ತಾಂಶ) ಎಂಬ ಸಂಶೋಧನಾ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.
ತೂತುಕುಡಿ ಜಿಲ್ಲೆಯ ಶಿವಗಲೈಯಲ್ಲಿ ಉತ್ಖನನ ನಡೆಸುವ ವೇಳೆ ಸಿಕ್ಕ ಕತ್ತಿಗಳು ಸೇರಿದಂತೆ ಕಬ್ಬಿಣದ ಕಲಾಕೃತಿಗಳು ಎಷ್ಟು ಕಾಲ ಹಿಂದಿನದು ಎಂಬುದನ್ನು ಪರೀಕ್ಷಿಸುವಾಗ ಈ ವಿಚಾರ ಬಯಲಿದೆ ಬಂದಿದೆ.
ತಮಿಳುನಾಡು ರಾಜ್ಯ ಪುರಾತತ್ವ ಇಲಾಖೆಯ ಶೈಕ್ಷಣಿಕ ಮತ್ತು ಸಂಶೋಧನಾ ಸಲಹೆಗಾರ ಪ್ರೊ.ಕೆ.ರಾಜನ್ ಮತ್ತು ತಮಿಳುನಾಡು ರಾಜ್ಯ ಪುರಾತತ್ವ ಇಲಾಖೆಯ ಜಂಟಿ ನಿರ್ದೇಶಕ ಆರ್.ಶಿವಾನಂದಂ ಈ ಪುಸ್ತಕವನ್ನು ಬರೆದಿದ್ದಾರೆ.
ANTIQUITY OF IRON
— TN DIPR (@TNDIPRNEWS) January 23, 2025
IRON TECHNOLOGY - Mastered by Tamils 5 THOUSAND years ago.#CMMKSTALIN l #DyCMUdhay #TNDIPR l@CMOTamilnadu @mkstalin
@mp_saminathan@TThenarasu pic.twitter.com/wPEWE3dA0h
ತಮಿಳಿಗರು ಅತ್ಯಂತ ಹಳೆಯ ಜನಾಂಗ ಎಂದು ಟೀಕೆಗಳ ಮಧ್ಯೆ, ಕಬ್ಬಿಣದ ಯುಗವು ತಮಿಳುನಾಡಿನ ನೆಲದಿಂದ ಪ್ರಾರಂಭವಾಯಿತು. 5300 ವರ್ಷಗಳ ಹಿಂದೆಯೇ ಕಬ್ಬಿಣ ಕರಗಿಸುವ ತಂತ್ರಜ್ಞಾನವನ್ನು ತಮಿಳುನಾಡು ಹೊಂದಿತ್ತು ಎಂಬುದನ್ನು ಮಾನವಶಾಸ್ತ್ರ ಸಂಶೋಧನೆ ಫಲಿತಾಂಶವನ್ನು ನಾನು ಈ ಜಗತ್ತಿಗೆ ಘೋಷಿಸುತ್ತಿದ್ದೇನೆ ಎಂದು ಸಿಎಂ ತಿಳಿಸಿದರು.
ಇತ್ತೀಚಿನ ಅಧ್ಯಯನದಲ್ಲಿ ನಡೆದು ಸಮಯದ ಲೆಕ್ಕಾಚಾರ ಆಧಾರದ ಮೇಲೆ ಕಬ್ಬಿಣವೂ ಕ್ರಿ.ಪೂ 4000ಕ್ಕಿಂತ ಮುಂಚೆಯೇ ಇತ್ತು ಎಂದ ಅವರು, ಇದನ್ನು ಸಂಶೋಧನೆ ಆಧಾರದ ಮೇಲೆ ನಾನು ಘೋಷಣೆ ಮಾಡುತ್ತೇನೆ ಎಂದರು.
ಉತ್ಖನನದ ವೇಳೆ ಸಂಗ್ರಹಿಸಿದ ಮಾದರಿಗಳನ್ನು ಅಮೆರಿಕದ ಫ್ಲೋರಿಡಾದ ಬೆಟಾ ಅನಾಲಿಟಿಕ್ಸ್ಗೆ ಕಳುಹಿಸಲಾಗಿತ್ತು. ಇಲ್ಲಿ ರೇಡಿಯೋಕಾರ್ಬನ್ ವಿಶ್ಲೇಷಣೆಗೆ ಚಿನ್ನದ ಗುಣಮಟ್ಟದ ಮಾದರಿಗಳನ್ನು ಬಳಕೆ ಮಾಡಲಾಗಿದೆ. ಇದೇ ಮಾದರಿಯನ್ನು ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಲಕ್ನೋನ ಬೀರ್ಬಲ್ ಸಾಹ್ನಿ ಇನ್‌ಸ್ಟಿಟ್ಯೂಟ್ ಆಫ್ ಪ್ಯಾಲಿಯೋಸೈನ್ಸ್ ಮತ್ತು ಅಹಮದಾಬಾದ್‌ನ ಫಿಸಿಕಲ್ ರಿಸರ್ಚ್ ಲ್ಯಾಬೋರೇಟರಿಗೆ ಕಳುಹಿಸಲಾಗಿತ್ತು. ಈ ಮೂರು ಅಧ್ಯಯನಗಳ ಫಲಿತಾಂಶಗಳ ವಿಶ್ಲೇಷಣೆ ನಡೆಸಿದಾಗ, ದಕ್ಷಿಣ ಭಾರತದಲ್ಲಿ ಕ್ರಿ.ಪೂ 3500ಕ್ಕಿಂತ ಮುಂಚೆಯೇ ಕಬ್ಬಿಣ ಚಾಲ್ತಿಯಲ್ಲಿತ್ತು ಎಂಬುದು ತಿಳಿಯುತ್ತದೆ. ಈ ಅಧ್ಯಯನದ ಫಲಿತಾಂಶವನ್ನು ಕಬ್ಬಿಣದ ಬಳಕೆ ಮತ್ತು ಉಗಮದ ಸಂಶೋಧನೆ ನಡೆಸುತ್ತಿದ್ದ ದೇಶದ ಪ್ರಮುಖ ಪುರತಾತ್ವಶಾಸ್ತ್ರಜ್ಞರೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಸಿಎಂ ತಿಳಿಸಿದರು.
ANTIQUITY OF IRON
— TN DIPR (@TNDIPRNEWS) January 23, 2025
IRON TECHNOLOGY - Mastered by Tamils 5 THOUSAND years ago.#CMMKSTALIN l #DyCMUdhay #TNDIPR l@CMOTamilnadu @mkstalin
@mp_saminathan@TThenarasu pic.twitter.com/VYjCAcZMoG
ತಮಿಳುನಾಡಿನಲ್ಲಿ 5300 ವರ್ಷಗಳ ಹಿಂದೆಯೇ ಕಬ್ಬಿಣದ ಬಳಕೆ ಇತ್ತು ಎಂಬ ವೈಜ್ಫಾನಿಕ ಸತ್ಯ ನಮಗೆ ಸಿಕ್ಕಿದೆ. ಇದೀಗ ನಾವು ಹೆಮ್ಮೆಯಿಂದ ದೇಶಕ್ಕೆ ಮಾತ್ರವಲ್ಲದೇ ಜಗತ್ತಿಗೆ ಇದು ತಮಿಳುನಾಡು ಕೊಡುಗೆ ಎಂದು ಹೇಳಬಹುದು. ಅಷ್ಟೇ ಅಲ್ಲದೇ ಇಂದು ಪ್ರಕಟವಾದ ಪುಸ್ತಕವನ್ನು ಪ್ರಮುಖ ಪುರಾತತ್ವ ತಜ್ಞರ ಪ್ರತಿಕ್ರಿಯೆ ಹೊಂದಿದ್ದು, ಅವರು ಕೂಡ ಸಂಶೋಧನೆಗಳು ಮತ್ತು ಪರೀಕ್ಷಾ ಫಲಿತಾಂಶಗಳನ್ನು ಪರಿಶೀಲಿಸಿದ್ದಾರೆ ಎಂದು ಉಲ್ಲೇಖಿಸಿದರು.
ಈ ಅಧ್ಯಯನದ ಫಲಿತಾಂಶವು ರಾಜ್ಯದಲ್ಲಿ ಭವಿಷ್ಯದ ಪುರಾತತ್ವ ಉತ್ಖನನಗಳು ಮತ್ತು ಅದರ ಸಂಪರ್ಕಿತ ಸಂಶೋಧನಾ ಕಾರ್ಯಗಳ ಮೇಲೆ ಸಕಾರಾತ್ಮಕ ಪ್ರಭಾವ ಹೊಂದಿದೆ. ಭಾರತದ ಇತಿಹಾಸವನ್ನು ತಮಿಳುನಾಡಿನಿಂದ ಬರೆಯಬೇಕಿದ್ದು, ಈ ಹಕ್ಕಿನೆಡೆಗೆ ರಾಜ್ಯದ ಪುರಾತತ್ವ ಇಲಾಖೆ ಕಾರ್ಯ ನಿರ್ವಹಿಸಲಿದೆ ಎಂದರು.
இரும்பின் தொன்மை குறித்தான காணொலி#CMMKSTALIN | #DyCMUdhay | #TNDIPR |@CMOTamilnadu @mkstalin@TThenarasu @mp_saminathan pic.twitter.com/wQxjVQ4Axc
— TN DIPR (@TNDIPRNEWS) January 23, 2025
ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ದಕ್ಷಿಣ ಏಷ್ಯಾ ಪುರಾತತ್ವ ರಾಯಭಾರಿ ಪ್ರೊ.ದಿಲೀಪ್ ಕುಮಾರ್ ಚಕ್ರವರ್ತಿ ಮಾತನಾಡಿ, ವಿಶ್ವದಲ್ಲಿ ಮೊದಲ ಬಾರಿಗೆ ಕಬ್ಬಿಣ ಕರಗಿಸುವ ತಂತ್ರಜ್ಞಾನ ಕ್ರಿಪೂ 3 ಮಿಲಿನೇಯಮ್ ಹಿಂದೆ ಇತ್ತು ಎಂಬುದನ್ನು ತಮಿಳುನಾಡು ಪುರಾತತ್ವ ಇಲಾಖೆ ಕಂಡು ಹಿಡಿದಿರುವುದು ರಾಜ್ಯಕ್ಕೆ ಹೆಮ್ಮೆಯ ಸಂಗತಿ ಎಂದರು.
ಇದನ್ನೂ ಓದಿ: ಇಲ್ಲಿವೆ ಮನುಷ್ಯರಂತೆ ರಕ್ತದಾನ ಮಾಡುವ ನಾಯಿಗಳು; ಇದು ಹೇಗೆ ಸಾಧ್ಯ ಅನ್ನೋದು ನಿಮ್ಮ ಪ್ರಶ್ನೆಯೇ?
ಇದನ್ನೂ ಓದಿ: ಶಹಜಹಾನ್ ಉರುಸ್: ಪ್ರವಾಸಿಗರಿಗೆ ಉಚಿತ ಪ್ರವೇಶ, ಬಿಗಿ ಭದ್ರತೆ