ETV Bharat / state

ಬೆಂಗಳೂರು: ಶಾಪಿಂಗ್​ ಮಾಲ್​ನ ಎರಡನೇ ಮಹಡಿಯಿಂದ ಜಿಗಿದು ವ್ಯಕ್ತಿ ಸಾವು - MAN JUMPS FROM SHOPPING MALL

ಮಂತ್ರಿಮಾಲ್‌ನ ಎರಡನೇ ಮಹಡಿಯಿಂದ ಜಿಗಿದು ವ್ಯಕ್ತಿಯೊಬ್ಬ ಆತ್ಮಹತ್ಯೆೆ ಮಾಡಿಕೊಂಡಿದ್ದಾರೆ.

MANTRI MALL
ಮಂತ್ರಿಮಾಲ್‌ (ಸಂಗ್ರಹ ಚಿತ್ರ) (ETV Bharat)
author img

By ETV Bharat Karnataka Team

Published : Jan 24, 2025, 9:33 AM IST

ಬೆಂಗಳೂರು: ಎರಡನೇ ಮಹಡಿಯಿಂದ ಜಿಗಿದು ವ್ಯಕ್ತಿಯೊಬ್ಬರು ಆತ್ಮಹತ್ಯೆೆಗೆ ಶರಣಾದ ಘಟನೆ ಗುರುವಾರ ರಾತ್ರಿ ಮಂತ್ರಿಮಾಲ್‌ನಲ್ಲಿ ನಡೆದಿದೆ. ಟಿ.ಸಿ ಮಂಜುನಾಥ್ (55) ಆತ್ಮಹತ್ಯೆಗೆ ಶರಣಾದ ದುರ್ದೈವಿ.

ತುಮಕೂರು ಜಿಲ್ಲೆಯ ತಿಪಟೂರು ಮೂಲದ ಮಂಜುನಾಥ್, ಬೆಂಗಳೂರಿನ ನಾಗರಭಾವಿಯಲ್ಲಿ ನೆಲೆಸಿದ್ದರು. ಗುರುವಾರ ಸಂಜೆ ಮಂತ್ರಿಮಾಲ್‌ಗೆ ಬಂದಿರುವ ಮಂಜುನಾಥ್, ರಾತ್ರಿ 9 ಗಂಟೆ ಸುಮಾರಿಗೆ ಎರಡನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸ್​ ಮೂಲಗಳು ತಿಳಿಸಿವೆ. ಎಲೆಕ್ಟ್ರಾನಿಕ್ಸ್ ಅಂಗಡಿ ನಡೆಸುತ್ತಿದ್ದ ಇವರು ಸಾಲ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.

"ಬ್ಯಾಂಕ್ ಸೇರಿದಂತೆ ವಿವಿಧೆಡೆ 2 ಕೋಟಿಯಷ್ಟು ಸಾಲವಿದೆ. ಸಾಲವನ್ನ ತೀರಿಸಲು ಸಾಧ್ಯವಾಗುತ್ತಿಲ್ಲ'' ಎಂದು ಡೆತ್ ನೋಟ್ ಬರೆದು, ಜೊತೆಗೆ ತಮ್ಮ ಸಾವಿನ ಬಳಿಕ ಸಂಪರ್ಕಿಸಬೇಕಾದವರ ಹೆಸರು ಹಾಗೂ ನಂಬರ್‌ಗಳನ್ನ ಬರೆದಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಮೃತನ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ. ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಮಲ್ಲೇಶ್ವರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಮೃತ ಮಂಜುನಾಥನ ಸ್ನೇಹಿತ ಪರಮೇಶ್ (ETV Bharat)

''ವಾಟ್ಸಪ್​ ಗ್ರೂಪ್​​ನಲ್ಲಿ ಬಂದ ಸ್ನೇಹಿತ ಮಂಜುನಾಥನ ಸಾವಿನ ಸುದ್ದಿ ಕಂಡು ಶಾಕ್​ ಆಯಿತು. ತಕ್ಷಣ ಅವರ ತಮ್ಮನಿಗೆ ಫೋನ್​ ಮಾಡಿ ವಿಚಾರಿಸಿದೆ. ಆಗ ಅವರು ಹಣಕಾಸಿನ ಸಮಸ್ಯೆಯಿಂದ ತನ್ನ ಅಣ್ಣ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿದರು. ವಿಷಯ ಕೇಳಿ ಬಹಳ ಬೇಸರ ಅನ್ನಿಸಿತು. ನನಗೂ ಮಂಜುನಾಥನಿಗೂ ಸುಮಾರು 40 ವರ್ಷದ ಸ್ನೇಹ. ನಾವು ಜೊತೆಯಲ್ಲಿಯೇ ಆಡಿ, ಓದಿ ಬೆಳೆದವರು. ಮಂಜುನಾಥ ತುಂಬಾ ಒಳ್ಳೆಯ ವ್ಯಕ್ತಿಯಾಗಿದ್ದ. ಈ ರೀತಿ ಸಮಸ್ಯೆಯಲ್ಲಿರುವ ಬಗ್ಗೆ ಗೊತ್ತಿರಲಿಲ್ಲ. ಆತ ಮಾಡಿಕೊಂಡಿರುವ ಸಾಲದ ವಿಚಾರ ನನಗೆ ಗೊತ್ತಿಲ್ಲ. ಈ ಬಗ್ಗೆ ಅವರ ತಮ್ಮನನ್ನು ಕೇಳಬೇಕು. ನಿನ್ನೆ-ಮೊನ್ನೆತಾನೇ ಫೋನ್​ ಮಾಡಿ ಮಾತನಾಡಿದ್ದೆವು. ರಿಯಲ್​ ಎಸ್ಟೇಟ್​ ಮಾಡುತ್ತಿರುವುದಾಗಿ ತಿಳಿಸಿದ್ದ. ಇದೀಗ ಈ ಸುದ್ದಿ ತಿಳಿದು ಶಾಕ್​ ಆಯಿತು. ಮನೆಯಲ್ಲಿ ಎರಡು ಮುದ್ದಾದ ಮಕ್ಕಳು, ಸಂಸಾರ ಇದೆ. ಕೊನೆಯ ಸಾರಿಯಾದರೂ ಅವನ ಮುಖ ನೋಡಿದರಾಯಿತೆಂದು ಇಲ್ಲಿಗೆ ಬಂದಿರುವೆ'' ಎಂದು ಮೃತ ಮಂಜುನಾಥನ ಸ್ನೇಹಿತ ಪರಮೇಶ್​ ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: ಬೆಂಗಳೂರು: ಏರೋಸ್ಪೇಸ್ ಇಂಜಿನಿಯರಿಂಗ್‌ ವಿದ್ಯಾರ್ಥಿ ಸಾವು - ENGINEERING STUDENT DEATH

ETV Bharat Logo

Copyright © 2025 Ushodaya Enterprises Pvt. Ltd., All Rights Reserved.