ಹಾವೇರಿ: ಮಗಳನ್ನು ಕಳಿಸದ ಮಾವನ 106 ಅಡಿಕೆ ಗಿಡಗಳನ್ನು ಕಡಿದುಹಾಕಿದ ಅಳಿಯ! - ARECA NUT TREES - ARECA NUT TREES

🎬 Watch Now: Feature Video

thumbnail

By ETV Bharat Karnataka Team

Published : Sep 26, 2024, 12:51 PM IST

Updated : Sep 26, 2024, 1:42 PM IST

ಹಾವೇರಿ: ಅಳಿಯನೊಬ್ಬ ತನ್ನ ಮಾವನ ಅಡಿಕೆ ತೋಟದಲ್ಲಿದ್ದ 106 ಗಿಡಗಳನ್ನು ಕಡಿದು ಹಾಕಿದ ವಿಚಿತ್ರ ಘಟನೆ ಜಿಲ್ಲೆಯ ಹಾನಗಲ್ ತಾಲೂಕಿನ ಬಸಾಪುರ ಗ್ರಾಮದಲ್ಲಿ ನಡೆದಿದೆ. 

ಗ್ರಾಮದ ದೇವೆಂದ್ರಪ್ಪ ಗಾಣಿಗೇರ ಅವರಿಗೆ ಸೇರಿದ ಅಡಿಕೆ ತೋಟದ ಗಿಡಗಳನ್ನು ಅಳಿಯ ಕಡಿದು ಹಾಕಿದ್ದಾನೆ. ಅಳಿಯ ಬಸವರಾಜ್ ಸುಮಾರು 2 ಲಕ್ಷ ರೂಪಾಯಿ ಮೌಲ್ಯದ 106 ಗಿಡಗಳನ್ನು ನಾಶ ಮಾಡಿದ್ದಾನೆ. ಬಸವರಾಜ್​ಗೆ ದೇವೇಂದ್ರಪ್ಪ 10 ವರ್ಷದ ಹಿಂದೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದರು. ಮದ್ಯ ವ್ಯಸನಿಯಾಗಿದ್ದ ಬಸವರಾಜ್ ಪತ್ನಿಯೊಂದಿಗೆ ಜಗಳ ಮಾಡುತ್ತಿದ್ದ. ಇದರಿಂದ ಬೇಸತ್ತ ದೇವೇಂದ್ರಪ್ಪ ಮಗಳನ್ನು ತವರು ಮನೆಗೆ ಕರೆದುಕೊಂಡು ಬಂದಿದ್ದರು. ಮೂರು ತಿಂಗಳಾದರೂ ಮಗಳನ್ನು ವಾಪಸ್​ ಕಳಿಸದ ಹಿನ್ನೆಲೆಯಲ್ಲಿ ಹತಾಶೆಗೊಂಡ ಅಳಿಯ ಬಸವರಾಜ್ ಮಾವನಿಗೆ ಸೇರಿದ ಅಡಿಕೆ ಗಿಡಗಳನ್ನು ನಾಶ ಮಾಡಿದ್ದಾನೆ ಎಂದು ಆಡೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸ್ಥಳಕ್ಕೆ ಭೇಟಿ ನೀಡಿರುವ ಆಡೂರು ಪೊಲೀಸರು ಪರಿಶೀಲನೆ ನಡೆಸಿದರು.

ಇದನ್ನೂ ಓದಿ: ಪ್ರೀತಿಸುತ್ತಿದ್ದ ಯುವತಿಯ ತಾಯಿಗೆ ಇರಿದು ಪರಾರಿಯಾದ ಕಿಡಿಗೇಡಿ ಪ್ರೇಮಿ‌ಗೆ ಗುಂಡೇಟು - Police Shot At Accused

Last Updated : Sep 26, 2024, 1:42 PM IST

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.