Karvi Flower Bloom after 8 Years: ಎಂಟು ವರ್ಷಗಳ ನಂತರ ಅರಳಿರುವ ಕಾರ್ವಿ ಪಶ್ಚಿಮ ಘಟ್ಟದ ಸಹ್ಯಾದ್ರಿ ಕಣಿವೆಯಲ್ಲಿ ನೀಲಿ ರತ್ನಗಂಬಳಿ ಹಾಸಿದೆ. ಪ್ರಕೃತಿಯ ಈ ಅಪರೂಪದ ದೃಶ್ಯ ವೀಕ್ಷಿಸಲು ವಾರಾಂತ್ಯದಲ್ಲಿ ಸಹ್ಯಾದ್ರಿ ಶ್ರೇಣಿಗಳಲ್ಲಿರುವ ಬೆಟ್ಟ ಮತ್ತು ಪರ್ವತಗಳಿಗೆ ಪ್ರಕೃತಿ ಪ್ರೇಮಿಗಳು ಆಗಮಿಸುತ್ತಿದ್ದಾರೆ. ಈ ಹಿಂದೆ 2016ರಲ್ಲಿ ಕಾರ್ವಿ ಸಸ್ಯದ ಹೂವುಗಳು ಅರಳಿದ್ದವು. ನಂತರ ಸತತ ಏಳು ವರ್ಷಗಳವರೆಗೆ ಈ ಸಸ್ಯವು ಬೆಳೆದವು. ನಂತರ ಎಂಟನೇ ವರ್ಷಕ್ಕೆ ಅಂದ್ರೆ, ಇದೀಗ 2024ರಲ್ಲಿ ಕಾರ್ವಿ ಹೂವುಗಳು ಅರಳಿವೆ.
ಈ ನೀಲಿ ನೇರಳೆ ಹೂವುಗಳು ಇಡೀ ಬೆಟ್ಟವನ್ನು ಆವರಿಸುತ್ತವೆ. ಪ್ರತಿ ವರ್ಷ ಮಳೆ ಬಂದ ನಂತರ ಈ ಗಿಡ ಹಸಿರು ಬಣ್ಣಕ್ಕೆ ತಿರುಗುತ್ತದೆ. ಮುಂಗಾರು ಮುಗಿದರೆ ಎಲೆಗಳು ಉದುರಿ ಕಾಂಡ ಮಾತ್ರ ಉಳಿಯುತ್ತದೆ. ಈ ಅನುಕ್ರಮವು ಏಳು ವರ್ಷಗಳವರೆಗೆ ಮುಂದುವರಿಯುತ್ತದೆ. ನಂತರ ಸೆಪ್ಟೆಂಬರ್ನಿಂದ ಅಕ್ಟೋಬರ್ವರೆಗೆ ಎಂಟನೇ ವರ್ಷದಲ್ಲಿ ಈ ಸಸ್ಯಗಳು ನೀಲಿ ನೇರಳೆ ಬಣ್ಣದ ಹೂವುಗಳೊಂದಿಗೆ ಅರಳುತ್ತವೆ. ಈ ಸಮಯದಲ್ಲಿ ಪರ್ವತದ ನೋಟವು ವರ್ಣಯವಾಗಿ ಕಾಣಿಸುತ್ತದೆ.
ಮುಂಬೈನ ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನ, ತುಂಗರೇಶ್ವರ ವನ್ಯಜೀವಿ ಅಭಯಾರಣ್ಯ, ಮುಂಬೈನ ಫಿಲ್ಮ್ ಸಿಟಿ, ಖಾರ್ಘರ್ ಹಿಲ್ಸ್ ಮತ್ತು ಇತರ ಸ್ಥಳಗಳಲ್ಲಿ ಜನರ ನೂಕು ನುಗ್ಗಲು ಕಂಡು ಬರುತ್ತಿದೆ. ಕಾರ್ವಿ ಸಸ್ಯವು ಔಷಧೀಯ ಮೂಲಿಕೆ ಮತ್ತು ದೈನಂದಿನ ಜೀವನದಲ್ಲಿ ಹಲವಾರು ಪ್ರಯೋಜನಗಳನ್ನು ಹೊಂದಿದೆ.
- ಕಾರ್ವಿ ಜೇನಿನ ಪ್ರಯೋಜನ: ಕಾರ್ವಿ ಜೇನು ಅನೇಕ ಪ್ರಯೋಜನಗಳನ್ನು ಹೊಂದಿದೆ. ಅಲ್ಲದೇ, ಈ ಜೇನುತುಪ್ಪವು ಮಕ್ಕಳಿಗೆ, ಹಿರಿಯರಿಗೆ ಮತ್ತು ಮಹಿಳೆಯರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ತಜ್ಞರ ಪ್ರಕಾರ, ಅವರು ಹಿಮೋಗ್ಲೋಬಿನ್ (ಎಚ್ಬಿ) ಸಮಸ್ಯೆ ರಾಮಭಾಣವಾಗಿದೆ. ಕರ್ವಿ ಜೇನು ಮೂಳೆಗಳ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ.
- ನಾಲಿಗೆ ರುಚಿ ಕಳೆದುಕೊಂಡಿದ್ದರೆ ಪರಿಹಾರ: ಜ್ವರ ಸೇರಿದಂತೆ ಇನ್ನಿತರ ಸಮಸ್ಯೆಗಳಿಂದ ನಾಲಿಗೆ ರುಚಿ ಕಳೆದುಕೊಂಡಿದ್ದರೆ, ಆಗ ಕಾರ್ವಿ ಹೂವು ಸೇವಿಸಿದರೆ ನಾಲಿಗೆ ರುಚಿ ಸರಿಯಾಗುತ್ತದೆ.
- ಉಷ್ಣಾಂಶ ಕಡಿಮೆ ಮಾಡುತ್ತೆ: ದೇಹದ ಉಷ್ಣಾಂಶವನ್ನು ಕಡಿಮೆ ಮಾಡುವ ಗುಣವನ್ನು ಒಂದಿದೆ. ಕಾರ್ವಿ ಬೇರು ತಂಪು ನೀಡುವ ಆಯುರ್ವೇದ ಔಷಧವಾಗಿದೆ. ಚರ್ಮದಲ್ಲಿ ಉರಿ ಕಾಣಿಸಿಕೊಂಡರೆ, ಈ ಸಸ್ಯದ ಬೇರುಗಳನ್ನು ತೇಯ್ದು ಹಚ್ಚಿಕೊಂಡರೆ ಉರಿ ಕಡಿಮೆಯಾಗುತ್ತದೆ ಎಂದು ಆಯುರ್ವೇದ ತಜ್ಞರು ತಿಳಿಸುತ್ತಾರೆ.
- ಉರಿ ಮೂತ್ರ ಸಮಸ್ಯೆ ಕಡಿಮೆ ಮಾಡುತ್ತೆ: ಉರಿ ಮೂತ್ರ ಸಮಸ್ಯೆ ಕಾಣಿಸಿದರೆ, ಕಾರ್ವಿಯ ಎಲೆಯನ್ನು ಸೇವಿಸಬೇಕಾಗುತ್ತದೆ. ಇದು ಉರಿ ಮೂತ್ರದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.
- ಚರ್ಮದ ತುರಿಕೆ ಮಾಡುತ್ತೆ: ಕಾರ್ವಿಯ ಎಲೆ ರಸವನ್ನು ಸೇವಿಸುವುದರಿಂದ ಚರ್ಮದಲ್ಲಿ ಉಂಟಾಗುವ ತುರಿಕೆ ಸಮಸ್ಯೆ ಕಡಿಮೆ ಮಾಡುತ್ತದೆ. ಅಲ್ಲದೆ ಕಾರ್ವಿ ರಸವನ್ನು ಸೇವಿಸುವುದರಿಂದ ದೇಹದ ಮೇಲಿನ ಊತ ಕೂಡ ಗುಣವಾಗುತ್ತದೆ.
- ಗಾಯ ವಾಸಿ ಗುಣ ಹೊಂದಿದೆ: ಕಾರ್ವಿ ಬೇರನ್ನು ತೇಯ್ದು ಗಾಯಕ್ಕೆ ಹಚ್ಚಿದ ಗಾಯವು ಮಾಯವಾಗುತ್ತದೆ. ಕೀವು ಸ್ರವಿಸುತ್ತಿದ್ದರೆ ಕಡಿಮೆಯಾಗುತ್ತದೆ. ಕಾರ್ವಿ ಸಸ್ಯದ ಬೇರುಗಳಲ್ಲಿ ಹಲವು ಔಷಧಿಯ ಗುಣಗಳನ್ನು ಹೊಂದಿದೆ.
- ದೇಹದಲ್ಲಿನ ಊತ ಹೋಗಲಾಡಿಸುತ್ತೆ: ಕಾರ್ವಿ ಸಸ್ಯದ ಬೇರುನ್ನು ಅರೆದು ಊತದ ಮೇಲೆ ಲೇಪಿಸಿದರೆ ಊತ ತಕ್ಷಣವೇ ಕಡಿಮೆಯಾಗುತ್ತದೆ. ಹೀಗೆ ಕಾರ್ವಿ ಬೇರು ಆರೋಗ್ಯದ ವಿವಿಧ ಸಮಸ್ಯೆಗಳನ್ನು ಪರಿಹರಿಸುವ ಔಷಧೀಯ ಗುಣಗಳನ್ನು ಹೊಂದಿದೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ನ್ನು ವೀಕ್ಷಿಸದಬಹುದು: https://www.wisdomlib.org/definition/karvi
ಪ್ರಮುಖ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳುವಳಿಕೆಗಾಗಿ ಮಾತ್ರವೇ ಒದಗಿಸಲಾಗಿದೆ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತರ ಸಲಹೆ ಪಡೆದುಕೊಳ್ಳುವುದು ಉತ್ತಮ.