ಕೋಲಾರ: ಟೋಲ್​ ಶುಲ್ಕ ಕೇಳಿದ್ದಕ್ಕೆ ಮಾಜಿ ಯೋಧನ ಮೇಲೆ ಬಿಜೆಪಿ ಮುಖಂಡನಿಂದ ಹಲ್ಲೆ ಆರೋಪ - ವಿಶ್ವನಾಥ್ ರೆಡ್ಡಿ

🎬 Watch Now: Feature Video

thumbnail

By

Published : Apr 10, 2021, 8:18 PM IST

ಕೋಲಾರ: ಟೋಲ್​ನಲ್ಲಿ ಉಚಿತವಾಗಿ ತಮ್ಮ ಪರಿಚಯಸ್ಥರ ಕಾರು ಬಿಡದ ಹಿನ್ನೆಲೆ ಮಾಜಿ ಯೋಧನ ಮೇಲೆ ಬಿಜೆಪಿ ಮುಖಂಡ ಹಾಗೂ ಆತನ ಸಹಚರರು ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಮುಳಬಾಗಿಲು ತಾಲೂಕಿನ ನಂಗಲಿ ವ್ಯಾಪ್ತಿಯಲ್ಲಿರುವ ಟೋಲ್​ನಲ್ಲಿ ಈ ಘಟನೆ ನಡೆದಿದೆ. ಬಿಜೆಪಿ ಪಕ್ಷದ ಸ್ಥಳೀಯ ಮುಖಂಡ ವಿಶ್ವನಾಥ್ ರೆಡ್ಡಿ ಎಂಬುವರ ಸಂಬಂಧಿಕರು ಬಂದಾಗ ಟೋಲ್ ಶುಲ್ಕ ಕಟ್ಟಿಸಿಕೊಳ್ಳದೆ ಉಚಿತವಾಗಿ ಬಿಡುವುದಕ್ಕೆ ಸಿಬ್ಬಂದಿಗೆ ಸೂಚಿಸಿದ್ದರಂತೆ. ಈ ವೇಳೆ ಟೋಲ್​ ಶುಲ್ಕ ಕೇಳಿದ್ದಕ್ಕೆ ಟೋಲ್​ನಲ್ಲಿದ್ದ ಮಾಜಿ ಯೋಧನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಹಲ್ಲೆ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ನಂಗಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.