ಮಹಿಳಾ ದಿನಾಚರಣೆಯಂದು ತುಪ್ಪದ ಬೆಡಗಿ ಭಾವನಾತ್ಮಕ ಮಾತು - Ragini

🎬 Watch Now: Feature Video

thumbnail

By

Published : Mar 8, 2021, 8:34 PM IST

ಬೆಂಗಳೂರು: ತನ್ನ ಗ್ಲ್ಯಾಮರ್​ನಿಂದಲೇ ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸಿದ ನಟಿ ರಾಗಿಣಿ ದ್ವಿವೇದಿ. ಕಳೆದ ವರ್ಷ ನಡೆದ ಕಹಿ ಘಟನೆಗಳ ಬಳಿಕ ಸದ್ಯ ಕುಟುಂಬದ ಜೊತೆ ಕಾಲ ಕಳೆಯುತ್ತಿರುವ ತುಪ್ಪದ ಬೆಡಗಿ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಮಹಿಳಾ ದಿನಾಚರಣೆಯಂದು ರಾಗಿಣಿ ದ್ವಿವೇದಿ ಆರ್​ಡಿ ಹೆಸರಿನ ಯೂಟ್ಯೂಬ್ ಚಾನೆಲ್ ಹುಟ್ಟು ಹಾಕಿದ್ದಾರೆ. ಈ ಮಹಿಳಾ ವಿಶೇಷ ದಿನದಂದು ರಾಗಿಣಿ ದ್ವಿವೇದಿ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಅನ್ಯಾಯ ಹಾಗೂ ಶೋಷಣೆ ಬಗ್ಗೆ ತಮ್ಮದೇ ಶೈಲಿಯಲ್ಲಿ ಭಾವನಾತ್ಮಕವಾಗಿ ಮಾತನಾಡಿದ್ದಾರೆ. ಸಮಾಜದಲ್ಲಿ ನಾನು ಈ ಸ್ಥಾನಕ್ಕೆ ಬರೋದಿಕ್ಕೆ ಸಾಕಷ್ಟು ಫೈಟ್ ಮಾಡಿದೀನಿ. ಮೊದಲು ನಿಮ್ಮ ಬಗ್ಗೆ ನಿಮಗೆ ಗೌರವವಿರಬೇಕು. ಆಮೇಲೆ ಬೇರೆಯವರ ಬಗ್ಗೆ ಯೋಚನೆ ಮಾಡಬೇಕು. ಯಾಕೆ ಹೆಣ್ಣು ಮಕ್ಕಳನ್ನ ಟಾರ್ಗೆಟ್ ಮಾಡ್ತಾರೆ ಎಂಬುದು ಪ್ರಶ್ನೆಯಾಗಿ ಕಾಡುತ್ತೆ ಎಂದಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.