ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿಯಿಂದ ದೂರವಾಗಲು ಮಕ್ಕಳಿಗೆ ಶಾಲೆಗಳು ಸುರಕ್ಷಿತ: ದೊಡ್ಡಬಸಪ್ಪ ನೀರಲಕೇರಿ
🎬 Watch Now: Feature Video
ಕುಷ್ಟಗಿ/ಕೊಪ್ಪಳ: ಪ್ರಸಕ್ತ ಜನವರಿಯಿಂದ ಅಲ್ಪಾವಧಿಯ ಶೈಕ್ಷಣಿಕ ವರ್ಷ ಆರಂಭಿಸಿರುವುದು ಮಕ್ಕಳಿಗಿಂತ ಹೆಚ್ಚು ಖುಷಿ ಪಾಲಕರಿಗೆ ಆಗಿದೆ ಎಂದು ಡಿಡಿಪಿಐ ದೊಡ್ಡಬಸಪ್ಪ ನೀರಲಕೇರಿ ಹೇಳಿದರು. ಕುಷ್ಟಗಿ ತಾಲೂಕಿನ ವಿವಿಧ ಶಾಲೆಗಳಿಗೆ ಭೇಟಿ ನೀಡಿದ ಬಳಿಕ ಈಟಿವಿ ಭಾರತ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಕೋವಿಡ್ ಹಿನ್ನೆಲೆ ಶಾಲಾ ಮಕ್ಕಳಿಗೆ ಸುದೀರ್ಘಾವಧಿ ರಜೆಯಾಗಿತ್ತು. ಇದೀಗ ಶಾಲೆಗಳು ಆರಂಭವಾಗಿರುವುದು ಸಮುದಾಯದಲ್ಲಿ ಹೊಸ ವರ್ಷದ ಹೊಸ ಬದಲಾವಣೆ ಇದಾಗಿದ್ದು, ಸಮುದಾಯದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವು ದಿನಗಳಿಂದ ಮಕ್ಕಳು ಶಾಲೆಯಿಂದ ದೂರವಿದ್ದು, ಶೈಕ್ಷಣಿಕ ಭವಿಷ್ಯದ ಬಗ್ಗೆ ಪಾಲಕರಿಗಿದ್ದ ಆತಂಕ ಇದೀಗ ದೂರವಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಮಕ್ಕಳು ಶಾಲೆಯಲ್ಲಿ ಇದ್ದರೆ ಹೆಚ್ಚು ಸುರಕ್ಷಿತ ಎನ್ನುವುದು ಸಮುದಾಯದ ನಂಬಿಕೆ ಎನ್ನುವುದು ವಿದ್ಯಾಗಮದಿಂದ ಗೊತ್ತಾಗಿದೆ. ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿಯಿಂದ ದೂರವಾಗಲು ಮಕ್ಕಳಿಗೆ ಶಾಲೆಗಳು ಸುರಕ್ಷಿತ ಎನ್ನುವುದು ಸಮುದಾಯಕ್ಕೆ ಮನವರಿಕೆಯಾಗಿದೆ ಎಂದರು.