ವಿಜಯಪುರ ಜಿಲ್ಲಾ ಪೊಲೀಸ್ ವಾಷಿ೯ಕ ಕ್ರೀಡಾಕೂಟಕ್ಕೆ ಡಿಸಿ ವೈ. ಎಸ್. ಪಾಟೀಲ್ ಚಾಲನೆ - ವಿಜಯಪುರ ಜಿಲ್ಲಾ ಪೊಲೀಸ್ ವಾಷಿ೯ಕ ಕ್ರೀಡಾಕೂಟ
🎬 Watch Now: Feature Video
ವಿಜಯಪುರ: ಜಿಲ್ಲೆಯ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾ ಪೊಲೀಸ್ ವಾಷಿ೯ಕ ಕ್ರೀಡಾಕೂಟಕ್ಕೆ ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ್ ಚಾಲನೆ ನೀಡಿದರು. ಬಲೂನ್ ಹಾಗೂ ಪಾರಿವಾಳ ಹಾರಿ ಬಿಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಇದೇ ವೇಳೆ ಮೈದಾನದಲ್ಲಿ ಕ್ರೀಡಾಕೂಟ ಜ್ಯೋತಿ ಬೆಳಗಿಸಿ, ಪ್ರತಿಜ್ಞಾವಿಧಿ ಬೋಧಿಸಲಾಯಿತು. ಕ್ರೀಡಾಕೂಟದಲ್ಲಿ ವಿವಿಧ ವಿಭಾಗಗಳ ತಂಡಗಳು ಭಾಗಿಯಾದವು. ಕಾರ್ಯಕ್ರಮದಲ್ಲಿ ಎಸ್. ಪಿ. ಪ್ರಕಾಶ್ ನಿಕ್ಕಂ ಸೇರಿ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.