ವಿಡಿಯೋ : ಭಾರತೀಯ ಸೇನೆಗೆ ಸೇರ್ಪಡೆಗೊಂಡ ಚತುರಮತಿ 'ಬೆಲ್ಜಿಯನ್ ಮಾಲಿನೋಯಿಸ್' - 'ಬೆಲ್ಜಿಯನ್ ಮಾಲಿನೋಯಿಸ್ ತಳಿ ಶ್ವಾನ
🎬 Watch Now: Feature Video
ತನ್ನ ಜಾಣ್ಮೆ ಹಾಗೂ ಬುದ್ದಿವಂತಿಕೆಯಿಂದ ಪ್ರಸಿದ್ಧವಾಗಿರುವ ಬೆಲ್ಜಿಯನ್ ಮಾಲಿನೋಯಿಸ್ ತಳಿಯ ನಾಯಿ ಇದೀಗ ಭಾರತೀಯ ಸೇನೆಯ ಭಯೋತ್ಪಾದನಾ ನಿಗ್ರಹ ದಳ ಸೇರಿದೆ. ಈ ತಳಿಯನ್ನು ವಿಶೇಷ ದಾಳಿಯ ಸಂದರ್ಭದಲ್ಲಿ ಬಳಸಲಾಗುತ್ತದೆ. ತಮ್ಮ ಅತ್ಯುತ್ತಮ ಚುರುಕುತನ, ಸಹಿಷ್ಣುತೆ, ತ್ರಾಣ, ಬುದ್ಧಿವಂತಿಕೆಗೆ ಈ ತಳಿ ಹೆಸರುವಾಸಿಯಾಗಿದೆ. ಸದ್ಯ ನಾಯಿಗೆ ತರಬೇತಿ ನೀಡಿರುವ ವಿಡಿಯೋವನ್ನು ಭಾರತೀಯ ಸೇನೆ ಹಂಚಿಕೊಂಡಿದೆ.