ETV Bharat / state

ಮಾಯಕೊಂಡದಲ್ಲಿ ಕುಸಿದ ಬೆಳೆ-ಬೆಲೆ: ದಲ್ಲಾಳಿಗಳ ಕಮಿಷನ್ ಹಾವಳಿಗೆ ಬೇಸತ್ತ ರೈತರು; ಎಪಿಎಂಸಿ ತೆರೆಯಲು ಮನವಿ - VEGETABLE FARMERS PROBLEMS

ಮಳೆನೀರು ಸಂಗ್ರಹಿಸಿ, ಕೊಳವೆ ಬಾವಿಗಳನ್ನು ತೆರೆದು, ಕಷ್ಟಪಟ್ಟು ಬೆಳೆದ ತರಹೇವಾರಿ ತರಕಾರಿಗೆ ಮಾರುಕಟ್ಟೆಯಲ್ಲಿ ಬೆಲೆಯೇ ಇಲ್ಲ. ಹೀಗಾಗಿ ಮಾಯಕೊಂಡ ಹೋಬಳಿಯಲ್ಲೇ ಎಪಿಎಂಸಿ ತೆರೆದು, ಬೆಂಬಲ ಬೆಲೆ ನೀಡಬೇಕೆಂಬುದು ರೈತರ ಒತ್ತಾಯ.

Mayakonda  DAVANAGERE  vegetable prices  APMC in Mayakonda
ಮಾಯಕೊಂಡದಲ್ಲಿ ಕುಸಿದ ತರಕಾರಿ ಬೆಳೆ-ಬೆಲೆ (ETV Bharat)
author img

By ETV Bharat Karnataka Team

Published : Dec 22, 2024, 11:41 AM IST

ದಾವಣಗೆರೆ: ಜಿಲ್ಲೆಯ ಮಾಯಕೊಂಡ ಒಂದು ಕಾಲದಲ್ಲಿ ತರಕಾರಿ ಬೆಳೆಗೆ ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧಿ ಗಳಿಸಿತ್ತು. ಆದರೆ ಈಗ ಬೆಳೆ-ಬೆಲೆ ಎರಡೂ ಇಲ್ಲ. ಹಾಗಾಗಿ, ರೈತರು ರೋಸಿ ಹೋಗಿದ್ದಾರೆ.

ರೈತರ ಹೇಳಿಕೆಗಳು. (ETV Bharat)

ಮಾಯಕೊಂಡದ ರೈತರು ತರಹೇವಾರಿ ತರಕಾರಿ ಬೆಳೆಯುತ್ತಾರೆ. ಇಲ್ಲಿ ಒಣ ಭೂಮಿ ಹೆಚ್ಚು. ಹಾಗಾಗಿ ಮಳೆ ಆಶ್ರಯಿಸಿ ಮೆಕ್ಕೆಜೋಳ, ರಾಗಿ, ತೊಗರಿ ಬೆಳೆಯುತ್ತಿದ್ದರು.‌ ಸದ್ಯ ಕೊಳವೆ ಬಾವಿಗಳನ್ನು ಕೊರೆಸಿ ತರಕಾರಿ ಬೆಳೆ ಮಾಡುತ್ತಿದ್ದಾರೆ. ಟೊಮೆಟೋ, ಹೀರೇಕಾಯಿ, ಸೌತೆ ಕಾಯಿ, ಹಾಗಲಕಾಯಿ, ಮೆಣಸಿನಕಾಯಿ, ಕೋಸು, ಮುಳುಗಾಯಿ, ಹೂಕೋಸು, ಜವಳಿಕಾಯಿ, ಸೋರೆಕಾಯಿ.. ಹೀಗೆ ನಾನಾ ರೀತಿಯ ತರಕಾರಿ ಬೆಳೆದು ಮಾರುಕಟ್ಟೆಗೆ ಕಳುಹಿಸುತ್ತಾರೆ.

Mayakonda  DAVANAGERE  vegetable prices  APMC in Mayakonda
ಮಾಯಕೊಂಡದಲ್ಲಿ ಎಪಿಎಂಸಿ ತೆರೆಯಲು ರೈತರ ಮನವಿ (ETV Bharat)

ಆದರೆ, ಕಷ್ಟಪಟ್ಟು ಬೆಳೆಯುತ್ತಿರುವ ಬೆಳೆಗಳಿಗೆ ಕೆಲ ರೋಗಗಳು ಅಂಟಿಕೊಂಡರೆ, ಇನ್ನೊಂದೆಡೆ ಬೆಲೆ ಏರಿಳಿತ, ದಲ್ಲಾಳಿಗಳ ಕಮಿಷನ್ ಹಾವಳಿಯಿಂದ ರೈತ ಕಂಗಾಲಾಗಿದ್ದಾನೆ. ಆದ್ದರಿಂದ ಮಾಯಕೊಂಡ ಹೋಬಳಿಯಲ್ಲೇ ಎಪಿಎಂಸಿ ತೆರೆಯಬೇಕು, ಬೆಂಬಲ ಬೆಲೆ ನಿಗದಿ ಮಾಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಒಂದೂವರೆ ಎಕರೆಯಲ್ಲಿ ತರಕಾರಿ ಬೆಳೆದ ರೈತ ಮಂಜಣ್ಣ ಹೇಳಿದ್ದೇನು?: ಮಾಯಕೊಂಡ ಹೋಬಳಿಯ ರೈತ ಮಂಜಣ್ಣ ಒಂದೂವರೆ ಎಕರೆಯಲ್ಲಿ ವಿವಿಧ ತರಕಾರಿ ಬೆಳೆದಿದ್ದಾರೆ. ಇಷ್ಟೆಲ್ಲ ಬೆಳೆದು ಎಪಿಎಂಸಿಗೆ ಹಾಕಿದಾಗ ಅವರು ಬೆರಳೆಣಿಕೆಯಷ್ಟೇ ಕಾಸು ನೋಡಿದ್ದಾರೆ.‌

ವಿಪರೀತ ಮಳೆಯಿಂದ ತರಕಾರಿಗಳಿಗೆ ರೋಗ ಕಾಟ! (ETV Bharat)

ಈ ಕುರಿತು ಮಂಜಣ್ಣ ಈಟಿವಿ ಭಾರತ್​ಗೆ ಪ್ರತಿಕ್ರಿಯಿಸಿ, "ಒಂದೂವರೆ ಎಕರೆಯಲ್ಲಿ ಹೀರೇಕಾಯಿ, ಸೌತೆ ಕಾಯಿ, ಹಾಗಲಕಾಯಿ ಹಾಕಿದ್ದೇವೆ. ಮಳೆ ಹೆಚ್ಚಾದ್ದರಿಂದ ಬೆಳೆಗಳಿಗೆ ರೋಗ ತಪ್ಪಿಲ್ಲ. ಟೊಮೆಟೋ ದರ ಪಾತಾಳಕ್ಕೆ ಇಳಿದಿದೆ. ಹೀರೇಕಾಯಿ ಇಳುವರಿ ಚೆನ್ನಾಗಿದೆ, ಆದರೆ ಬೆಲೆ ಇಲ್ಲ. ಇತ್ತ ಎಪಿಎಂಸಿಯಲ್ಲಿ ದಲ್ಲಾಳಿಗಳ ಕಮಿಷನ್​ ಹಾವಳಿ ಬೇರೆ. ಇದೆಲ್ಲವನ್ನೂ ನೋಡಿದರೆ ಬೇಸರವಾಗುತ್ತದೆ. ಎಲ್ಲಾ ರೈತರು ಬೆಲೆ ಏರಿದೆ ಎಂಬ ಕಾರಣಕ್ಕೆ ಒಂದೇ ರೀತಿಯ ತರಕಾರಿ ಬೆಳೆದಿದ್ದರು. ನಮಗೆ ಬೆಂಬಲ ಬೆಲ ಕೊಟ್ಟರೆ ಗ್ರಾಹಕರಿಗೆ ತೊಂದರೆ ಆಗಲ್ಲ, ರೈತರಿಗೂ ಸಮಸ್ಯೆ ಆಗಲ್ಲ. ಬೆಲೆ ಏರುಪೇರಾಗಿ ರೈತರು ಹಾಳಾಗುತ್ತಿದ್ದಾರೆ. ಗೊಬ್ಬರ, ಔಷಧಿ, ಸಹಾಯಧನವನ್ನು ನೀಡಬೇಕು. ಮಾಯಕೊಂಡದಲ್ಲಿ ಎಪಿಎಂಸಿ ಆಗಬೇಕು. ದಾವಣಗೆರೆ ಎಪಿಎಂಸಿಗೆ ತರಕಾರಿ ತಡವಾಗಿ ತಂದರೆ ದರ ಕಡಿಮೆ ಆಗುತ್ತದೆ" ಎಂದರು.

ದಲ್ಲಾಳಿಗಳ ಕಮಿಷನ್, ತರಕಾರಿಗಳಿಗೆ ರೋಗ: ಬೇಸತ್ತ ರೈತನಿಂದ ಎಪಿಎಂಸಿ ತೆರೆಯಲು ಮನವಿ (ETV Bharat)

ಮಾಯಕೊಂಡ ತರಕಾರಿಯ ಕಣಜ: ಮತ್ತೋರ್ವ ರೈತ ಜೈರಾಜ್ ಮಾತನಾಡಿ, "ಸರ್ಕಾರ ರೈತರಿಗೆ ಆಸರೆ ಆಗಬೇಕಾಗಿದೆ. ಟೊಮೆಟೋ, ಮೆಣಸಿನಕಾಯಿ, ಕೋಸು, ಮುಳುಗಾಯಿ, ಹೂಕೋಸು, ಹೀರೇಕಾಯಿ, ಹಾಗಲಕಾಯಿ, ಜವಳಿಕಾಯಿ ಹೀಗೆ ಶೇ.75ರಷ್ಟು ಕೃಷಿ ಭೂಮಿಯಲ್ಲಿ ‌ತರಕಾರಿ ಬೆಳೆಯುತ್ತಾರೆ. ರೈತರ ಬವಣೆ ಹೇಳತೀರದಾಗಿದೆ. ಒಳ್ಳೆಯ ಬೆಲೆ ಸಿಗುತ್ತಿಲ್ಲ. ಸರ್ಕಾರದ ಸಹಕಾರವಿಲ್ಲ. ಬೆಲೆ ಏರಿಕೆ-ಇಳಿಕೆಯಿಂದ ಬೇಸತ್ತಿದ್ದೇವೆ. 40 ವರ್ಷದಿಂದ ಕೃಷಿಯಲ್ಲಿ ಅನುಭವವಿದೆ.‌ ಈ ಭಾಗದಲ್ಲಿ ಶೇ.40-75 ರಷ್ಟು ತರಕಾರಿ ಬೆಳೆಯಲಾಗುತ್ತದೆ. ಸಾಕಷ್ಟು ರೈತರು ಪೆಟ್ಟು ತಿಂದಿದ್ದಾರೆ. ಇದರಿಂದ ನಾವು ತರಕಾರಿ ಬೆಳೆಯುವುದನ್ನು ನಿಲ್ಲಿಸಿ ಮೆಕ್ಕೆಜೋಳ ಹಾಕಿದ್ದೇವೆ" ಎಂದರು.

ಇದನ್ನೂ ಓದಿ: ಕುಸಿದ 'ಕೆಂಪು ಸುಂದರಿ'ಯ ಬೆಲೆ: ನೂರಾರು ಎಕರೆಯಲ್ಲಿ ಟೊಮೆಟೊ ಬೆಳೆದ ರೈತರು ಕಂಗಾಲು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.