ಪುಣೆ (ಮಹಾರಾಷ್ಟ್ರ): ರಾಜ್ಯದಲ್ಲಿ ನಿಧಾನವಾಗಿ ಜಿಬಿಎಸ್ ಸದ್ದು ಮಾಡುತ್ತಿದೆ. ಸೋಲಾಪುರ ಜಿಲ್ಲೆಯಲ್ಲಿ ಇದೇ ಮಾರಣಾಂತಿಕ ರೋಗ ಗುಯಿಲಿನ್-ಬಾರ್ರೆ ಸಿಂಡ್ರೋಮ್ (ಜಿಬಿಎಸ್)ಗೆ ತುತ್ತಾದ ಶಂಕಿತ ವ್ಯಕ್ತಿ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದಲ್ಲಿ ಜಿಬಿಎಸ್‌ನಿಂದ ಸಂಭವಿಸಿದ ಮೊದಲ ಸಾವು ಇದಾಗಿದೆ.
ಪುಣೆಯಲ್ಲಿ ರೋಗನಿರೋಧಕ ನರ ಅಸ್ವಸ್ಥತೆ (immunological nerve disorder)ಯ ಪ್ರಕರಣಗಳ ಸಂಖ್ಯೆ 100 ದಾಟಿದೆ ಎಂದು ಆರೋಗ್ಯ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಸೋಲಾಪುರ ಮೂಲದ ವ್ಯಕ್ತಿ ಪುಣೆಗೆ ಬಂದಿದ್ದು, ಅಲ್ಲಿ ಆತನಿಗೆ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಸೊಲ್ಲಾಪುರದಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೆಚ್ಚಿನ ವಿವರಗಳನ್ನು ನೀಡದೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಒಟ್ಟು ಭಾನುವಾರ ಪುಣೆಯಲ್ಲಿ ಒಟ್ಟು ಜಿಬಿಎಸ್ ಪ್ರಕರಣಗಳ ಸಂಖ್ಯೆ 101ಕ್ಕೆ ಏರಿದೆ, ಇದರಲ್ಲಿ 68 ಪುರುಷರು ಮತ್ತು 33 ಮಹಿಳೆಯರು ಸೇರಿದ್ದಾರೆ. ಇವರಲ್ಲಿ 16 ರೋಗಿಗಳು ವೆಂಟಿಲೇಟರ್ ಸಹಾಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಲಾಪುರದಲ್ಲಿ ಓರ್ವ ಶಂಕಿತ ರೋಗಿಯ ಸಾವಿನ ವರದಿಯಾಗಿದೆ" ಎಂದು ರಾಜ್ಯ ಆರೋಗ್ಯ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.
ಇದರ ಮಧ್ಯೆ ರಾಪಿಡ್ ರೆಸ್ಪಾನ್ಸ್ ಟೀಮ್ (ಆರ್‌ಆರ್‌ಟಿ) ಮತ್ತು ಪುಣೆ ಮುನ್ಸಿಪಲ್ ಕಾರ್ಪೊರೇಷನ್ನ ಆರೋಗ್ಯ ವಿಭಾಗವು ಇಲ್ಲಿನ ಪೀಡಿತ ರಸ್ತೆ ಪ್ರದೇಶಗಳಲ್ಲಿ ಕಣ್ಗಾವಲಿಟ್ಟಿದ್ದಾರೆ.
ಕಾಯಿಲೆಯ ಲಕ್ಷಣಗಳೇನು? ಗುಯಿಲಿನ್-ಬಾರ್ರೆ ಸಿಂಡ್ರೋಮ್ ಒಂದು ಅಪರೂಪದ ರೋಗವಾಗಿದೆ. ಇದರ ಲಕ್ಷಣ ಹಠಾತ್ ಕೈ ಕಾಲು ಮರಗಟ್ಟುವಿಕೆ ಮತ್ತು ಸ್ನಾಯು ದೌರ್ಬಲ್ಯ, ಕೈಕಾಲುಗಳಲ್ಲಿ ತೀವ್ರ ದೌರ್ಬಲ್ಯ, ಸಡಿಲ ಚಲನೆಗಳು.
ವೈದ್ಯರ ಪ್ರಕಾರ, ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕುಗಳು ಸಾಮಾನ್ಯವಾಗಿ ಜಿಬಿಎಸ್ಗೆ ಕಾರಣವಾಗುತ್ತವೆ. ಅವುಗಳು ರೋಗಿಗಳ ಇಮ್ಯೂನಿಟಿ ಪವರ್ನ್ನು ದುರ್ಬಲಗೊಳಿಸುತ್ತವೆ.
ಇದನ್ನೂ ಓದಿ: ಇಂಡೋ - ಬಾಂಗ್ಲಾ ಗಡಿಯಲ್ಲಿ ಕೋಟಿ ಮೌಲ್ಯದ ನಿಷೇಧಿತ ಕೆಮ್ಮಿನ ಸಿರಪ್ ಪತ್ತೆ ಮಾಡಿದ ಬಿಎಸ್ಎಫ್