ಕೊರೊನಾ ವೈರಸ್ ಎಫೆಕ್ಟ್: ಚಿಕನ್ ಬೆಲೆ ಇಳಿಕೆ, ಮಟನ್ ಬೆಲೆ ಏರಿಕೆ - ಚಿಕನ್ ಬೆಲೆ ಇಳಿಕೆ, ಮಟನ್ ಬೆಲೆ ಏರಿಕೆ
🎬 Watch Now: Feature Video
ಕೊರೊನಾ ವೈರಸ್ ಎಫೆಕ್ಟ್ ಗದಗ ಜಿಲ್ಲೆಯ ನಾನ್ ವೆಜ್ ಮಾರ್ಕೆಟ್‌ಗೂ ತಟ್ಟಿದೆ. ಚಿಕನ್ ಮಾರಾಟ ಹಾಗೂ ಬೆಲೆಯಲ್ಲಿ ಗಣನೀಯವಾಗಿ ಇಳಿಮುಖವಾಗಿದ್ದರೆ, ಮಟನ್ ಮಾರಾಟ ಹಾಗೂ ಮೀನನ ಬೆಲೆ ಏರಿಕೆಯಾಗಿದೆ. ನಾನ್ವೆಜ್ ಪ್ರಿಯರು ಚಿಕನ್ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಮಟನ್ ಹಾಗೂ ಫೀಶ್ ಮಾರ್ಕೆಟ್ಗೆ ಮಾರು ಹೋಗಿದ್ದಾರೆ. ಕೊರೊನಾ ವೈರಸ್ ಕಾಣಿಸಿಕೊಳ್ಳುವ ಮೊದಲು ಕೆ.ಜಿ ಚಿಕನ್ಗೆ 170 ರಿಂದ 200 ರೂಪಾಯಿ ದರ ಇತ್ತು. ಇದೀಗ 60 ರಿಂದ 80 ರೂಪಾಯಿಗೆ ಕುಸಿದಿದೆ. ಇನ್ನು ಮಟನ್ ಕೆ.ಜಿ ಗೆ 380 ರೂಪಾಯಿ ಇದಿದ್ದು ಸದ್ಯ 600 ರೂಪಾಯಿ ಗಡಿ ದಾಟಿದೆ. ಮೀನಿನ ದರ ಕೂಡ 80 ರೂಪಾಯಿ ಇತ್ತು. ಈಗ 150 ರಿಂದ 200 ರೂಪಾಯಿವರೆಗೆ ಏರಿಕೆಯಾಗಿದೆ.