ಮಹಾಗಣಪತಿ ಪ್ರತಿಸ್ಠಾಪನೆ.. ಅದ್ಧೂರಿ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಕೋಟೆನಾಡು.. - Organization of Vishwa Hindu Parishad
🎬 Watch Now: Feature Video
ಕೋಟೆನಾಡಿನ ಮಹಾಗಣಪತಿಯನ್ನು ಪ್ರತಿ ವರ್ಷದಂತೆ ಈ ಬಾರಿಯೂ ಪ್ರತಿಷ್ಠಾಪಿಸಲಾಯಿತು. ಭಜರಂಗದಳ ಹಾಗೂ ವಿಶ್ವಹಿಂದು ಪರಿಷತ್ ಸಂಘಟನೆಗಳ ನೇತೃತ್ವದಲ್ಲಿ ಏಕದಂತನ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಅದ್ಧೂರಿ ಕಾರ್ಯಕ್ರಮಕ್ಕೆ ಚಿತ್ರದುರ್ಗ ಸಾಕ್ಷಿಯಾಗಿದೆ. ಬಿಜೆಪಿ ಶಾಸಕ ತಿಪ್ಪಾರೆಡ್ಡಿ ಭಾಗಿಯಾಗಿ ಲಂಬೋಧರನಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಆಶೀರ್ವಾದ ಪಡೆದರು. ಇದೇ ತಿಂಗಳು 21 ಕ್ಕೆ ನಗರದ ಚಂದ್ರವಳ್ಳಿ ಕೆರೆಯಲ್ಲಿ ವಿಸರ್ಜನೆ ಮಾಡಲಾಗುವುದು ಎಂದು ಕಮೀಟಿಯವರು ಮಾಹಿತಿ ನೀಡಿದರು.