ETV Bharat / bharat

'ಹಿಂದೂ ದೇವಾಲಯಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಿ': ಜ.5ರಿಂದ ವಿಎಚ್​ಪಿ ಅಭಿಯಾನ - VHP TEMPLE CAMPAIGN

ಹಿಂದೂ ದೇವಾಲಯಗಳನ್ನು ಸರ್ಕಾರದ ಹಿಡಿತದಿಂದ ಮುಕ್ತಗೊಳಿಸಬೇಕೆಂದು ಒತ್ತಾಯಿಸಿ ವಿಎಚ್​ಪಿ ಅಭಿಯಾನ ಆರಂಭಿಸಲಿದೆ.

ವಿಎಚ್​ಪಿ ಮಾಧ್ಯಮಗೋಷ್ಠಿ
ವಿಎಚ್​ಪಿ ಮಾಧ್ಯಮಗೋಷ್ಠಿ (IANS)
author img

By ETV Bharat Karnataka Team

Published : Dec 26, 2024, 7:24 PM IST

ನವದೆಹಲಿ: ಹಿಂದೂ ದೇವಾಲಯಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸುವಂತೆ ಒತ್ತಾಯಿಸಿ 2025 ರ ಜನವರಿ 5 ರಿಂದ ದೇಶಾದ್ಯಂತ ಸಾರ್ವಜನಿಕ ಜಾಗೃತಿ ಅಭಿಯಾನ ಆರಂಭಿಸುವುದಾಗಿ ವಿಶ್ವ ಹಿಂದೂ ಪರಿಷತ್ ಗುರುವಾರ ಘೋಷಿಸಿದೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಿಎಚ್​ಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂಡೆ, ರಾಜ್ಯ ಸರ್ಕಾರಗಳು ದೇವಾಲಯಗಳ ನಿಯಂತ್ರಣ, ನಿರ್ವಹಣೆ ಮತ್ತು ದೈನಂದಿನ ಕಾರ್ಯಗಳನ್ನು ನಿಯಂತ್ರಿಸುವುದು ಹಿಂದೂ ಸಮಾಜಕ್ಕೆ ಮಾಡುವ ತಾರತಮ್ಯವಾಗಿರುವುದರಿಂದ ಎಲ್ಲಾ ರಾಜ್ಯ ಸರ್ಕಾರಗಳು ಇಂಥ ಚಟುವಟಿಕೆಗಳಿಂದ ದೂರವಿರಬೇಕು ಎಂದು ಅವರು ಹೇಳಿದರು.

"ಯಾವುದೇ ಮಸೀದಿ ಅಥವಾ ಚರ್ಚ್ ಸರ್ಕಾರದ ಅಡಿಯಲ್ಲಿಲ್ಲದಿರುವಾಗ, ಹಿಂದೂಗಳ ವಿರುದ್ಧ ಈ ತಾರತಮ್ಯ ಏಕೆ?" ಎಂದು ಪರಾಂಡೆ ಪ್ರಶ್ನಿಸಿದರು.

"ಪೂಜ್ಯ ಸಂತ ಸಮಾಜ ಮತ್ತು ಹಿಂದೂ ಸಮಾಜದ ಪ್ರಮುಖ ವ್ಯಕ್ತಿಗಳ ನಾಯಕತ್ವದಲ್ಲಿ, ನಾವು ಜನವರಿ 5 ರಂದು ದೇಶಾದ್ಯಂತ ಸಾರ್ವಜನಿಕ ಜಾಗೃತಿ ಅಭಿಯಾನವನ್ನು ಪ್ರಾರಂಭಿಸಲಿದ್ದೇವೆ. ಆಂಧ್ರಪ್ರದೇಶದ ವಿಜಯವಾಡದಲ್ಲಿ ಆಯೋಜಿಸಲಾಗಿರುವ 'ಹೈಂದವ ಶಂಖಾರಾವಂ' ಎಂಬ ಲಕ್ಷಾಂತರ ಜನ ಭಾಗವಹಿಸಲಿರುವ ವಿಶೇಷ ಸಭೆಯಲ್ಲಿ ಈ ಅಖಿಲ ಭಾರತ ಅಭಿಯಾನಕ್ಕೆ ಚಾಲನೆ ನೀಡಲಾಗುವುದು" ಎಂದು ಅವರು ತಿಳಿಸಿದರು.

ಸ್ವಾತಂತ್ರ್ಯದ ನಂತರ ಹಿಂದೂ ಸಮಾಜಕ್ಕೆ ಹಸ್ತಾಂತರಿಸಬೇಕಾದ ದೇವಾಲಯಗಳನ್ನು ರಾಜ್ಯ ಸರ್ಕಾರಗಳ ಅಡಿಯಲ್ಲಿ ಇರಿಸಿರುವುದು ದುರದೃಷ್ಟಕರ ಎಂದು ವಿಎಚ್​ಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಹೇಳಿದರು.

ದೇವಾಲಯಗಳ ನಿರ್ವಹಣೆ ಮತ್ತು ನಿಯಂತ್ರಣದ ಕೆಲಸವನ್ನು ಈಗ ಹಿಂದೂ ಸಮಾಜದ ನಿಷ್ಠಾವಂತ ಮತ್ತು ಸಮರ್ಥ ಜನರಿಗೆ ಹಸ್ತಾಂತರಿಸಬೇಕಿದೆ ಎಂದು ಪರಾಂಡೆ ಹೇಳಿದರು.

"ದೇವಾಲಯಗಳ ನಿರ್ವಹಣೆಯನ್ನು ಹೇಗೆ ಮಾಡಬೇಕು ಎಂಬುದನ್ನು ನಿರ್ಧರಿಸಲು ನಾವು ಸುಪ್ರೀಂ ಕೋರ್ಟ್​ನ ಪ್ರಸಿದ್ಧ ವಕೀಲರು, ಹೈಕೋರ್ಟ್​ಗಳ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳು, ಸಂತ ಸಮಾಜದ ಪ್ರಮುಖ ವ್ಯಕ್ತಿಗಳು ಮತ್ತು ವಿಶ್ವ ಹಿಂದೂ ಪರಿಷತ್​ನ ಕಾರ್ಯಕರ್ತರನ್ನು ಒಳಗೊಂಡ ಥಿಂಕ್ ಟ್ಯಾಂಕ್ ಅನ್ನು ರಚಿಸಿದ್ದೇವೆ. ಇದು ದೇವಾಲಯಗಳ ನಿರ್ವಹಣೆಯ ಪ್ರೋಟೋಕಾಲ್​​ಗಳನ್ನು ಅಧ್ಯಯನ ಮಾಡಿದ ನಂತರ ಮತ್ತು ಅದಕ್ಕೆ ಸಂಬಂಧಿಸಿದ ಯಾವುದೇ ರೀತಿಯ ವಿವಾದವನ್ನು ಪರಿಹರಿಸಲು ಕರಡನ್ನು ಸಿದ್ಧಪಡಿಸಿದೆ." ಎಂದು ಅವರು ನುಡಿದರು.

ಸರ್ಕಾರಗಳು ದೇವಾಲಯಗಳನ್ನು ಸಮಾಜಕ್ಕೆ ಹಿಂದಿರುಗಿಸಿದಾಗ ಅವನ್ನು ಯಾವ ಪ್ರೋಟೋಕಾಲ್ ಮತ್ತು ಯಾವ ನಿಬಂಧನೆಗಳ ಅಡಿಯಲ್ಲಿ ಮರಳಿ ಪಡೆಯಬೇಕೆಂಬ ವಿಷಯಗಳ ಬಗ್ಗೆ ಪರಿಶೀಲಿಸಲಾಗಿದೆ ಎಂದು ಅವರು ಹೇಳಿದರು.

"ಇದಕ್ಕಾಗಿ ಸಾಂವಿಧಾನಿಕ ಹುದ್ದೆಗಳನ್ನು ಹೊಂದಿರುವ ಕೆಲ ವ್ಯಕ್ತಿಗಳು ರಾಜ್ಯ ಮಟ್ಟದಲ್ಲಿ ಗೌರವಾನ್ವಿತ ಧರ್ಮಾಚಾರ್ಯರು, ನಿವೃತ್ತ ನ್ಯಾಯಾಧೀಶರು ಮತ್ತು ನಿವೃತ್ತ ಸರ್ಕಾರಿ ಅಧಿಕಾರಿಗಳು ಮತ್ತು ಹಿಂದೂ ಧರ್ಮಗ್ರಂಥಗಳು ಮತ್ತು ಆಗಮ ಶಾಸ್ತ್ರಗಳು ಮತ್ತು ಆಚರಣೆಗಳಲ್ಲಿ ಪರಿಣಿತರಾದ ಸಮಾಜದ ಇತರ ಗಣ್ಯ ವ್ಯಕ್ತಿಗಳನ್ನು ಒಳಗೊಂಡ ಧರ್ಮ ಮಂಡಳಿಯನ್ನು ರಚಿಸಲಿದ್ದಾರೆ" ಎಂದು ಅವರು ತಿಳಿಸಿದರು.

ಇದನ್ನೂ ಓದಿ : ಬಿಜೆಪಿ ಜೊತೆ ಕಾಂಗ್ರೆಸ್​ ಒಳಒಪ್ಪಂದ, I.N.D.I.A ಕೂಟದ ಅಸ್ತಿತ್ವಕ್ಕೆ ಧಕ್ಕೆ: ಆಪ್​ ಆರೋಪ - CONGRESS COLLUDING WITH BJP

ETV Bharat Logo

Copyright © 2025 Ushodaya Enterprises Pvt. Ltd., All Rights Reserved.