RTPS ಬಳಿ ಬಸ್ ಗಾಲಿಗೆ ಸಿಲುಕಿದ ಬೈಕ್: ಸಿಸಿಟಿವಿಯಲ್ಲಿ ದೃಶ್ಯ ಸೆರೆ - ರಿಮ್ಸ್ ಆಸ್ಪತ್ರೆ
🎬 Watch Now: Feature Video
ರಾಯಚೂರು: ನಗರದ ಆರ್ಟಿಪಿಎಸ್ನ ಮುಂದೆ ರಸ್ತೆ ಅಪಘಾತ ಸಂಭವಿಸಿ, ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ. ಶಕ್ತಿನಗರದ 1ನೇ ಕ್ರಾಸ್ ನಿವಾಸಿ ಅಂಬರೀಶ್ ಗಾಯಗೊಂಡ ಬೈಕ್ ಸವಾರ. ಬಸ್ ಆರ್ಟಿಪಿಎಸ್ ಒಳಗಡೆ ಹೋಗಲು ಟರ್ನ್ ಮಾಡುವಾಗ ಹಿಂದೆ ಬಂದ ಬೈಕ್ ಸವಾರ, ಬಸ್ನ ಮುಂದಿನ ಚಕ್ರಕ್ಕೆ ಸಿಲುಕಿದ್ದಾನೆ. ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ. ಗಾಯಾಳುವನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಳಕ್ಕೆ ಶಕ್ತಿನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.