ಮಳೆಯ ಅವಾಂತರದ ಮಧ್ಯೆ ಕಣ್ಮನ ಸೆಳೆಯುತ್ತಿದೆ ಚಾರ್ಮಾಡಿ ಘಾಟ್ ಸೌಂದರ್ಯ
🎬 Watch Now: Feature Video
ಚಿಕ್ಕಮಗಳೂರು: ಭಾರೀ ಮಳೆಯಿಂದ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ನಲ್ಲಿ ಸಣ್ಣ ಪ್ರಮಾಣದಲ್ಲಿ ಗುಡ್ಡ ಕುಸಿತ ಉಂಟಾಗಿದೆ. ಗುಡ್ಡದ ಮಣ್ಣು ಹಾಗೂ ಸಣ್ಣ ಸಣ್ಣ ಕಲ್ಲುಗಳು ರಸ್ತೆಗೆ ಬಂದು ಬಿದ್ದಿದ್ದು, ಸ್ಥಳೀಯರು ತೆರವು ಮಾಡುತ್ತಿದ್ದಾರೆ. ಇನ್ನೊಂದೆಡೆ, ಘಾಟ್ ರಸ್ತೆಯುದ್ದಕೂ ನೂರಾರು ಜಲಪಾತಗಳು ಸೃಷ್ಟಿಯಾಗಿದ್ದು, ಈ ರಮಣೀಯ ದೃಶ್ಯ ನೋಡುಗರ ಕಣ್ಮನ ಸೆಳೆಯುತ್ತಿದೆ. ಘಾಟ್ ರಸ್ತೆಯ ಮುಖಾಂತರ ಸಂಚರಿಸುವ ಜನರು ತಮ್ಮ ವಾಹನಗಳನ್ನು ನಿಲ್ಲಿಸಿ, ಪ್ರಕೃತಿಯ ಅದ್ಭುತ ಸೌಂದರ್ಯವನ್ನು ಸವಿಯುತ್ತಿದ್ದಾರೆ.