ETV Bharat / state

ಬಿಜೆಪಿಯಿಂದ ₹50 ಕೋಟಿ ಅಲ್ಲ, ₹100 ಕೋಟಿ ಆಫರ್: ಮತ್ತೆ ಆರೋಪ ಮಾಡಿದ ಶಾಸಕ ರವಿಕುಮಾರ್​ ಗಣಿಗ - MLA RAVIKUMAR GANIGA

ಶಾಸಕರ ಖರೀದಿಗೆ ಬಿಜೆಪಿಯವರು 50 ಕೋಟಿ ರೂ ಅಲ್ಲ, 100 ಕೋಟಿ ರೂ ಆಮಿಷ ಒಡ್ಡಿದ್ದಾರೆ. ಇದರ ಆಡಿಯೋ, ವಿಡಿಯೋ ರೆಕಾರ್ಡ್‌ ಇದೆ. ಸಮಯ ನೋಡಿ ಬಿಡುಗಡೆ ಮಾಡುವುದಾಗಿ ಶಾಸಕ ರವಿಕುಮಾರ್​ ಗಣಿಗ ಹೇಳಿದ್ದಾರೆ.

ಶಾಸಕ ರವಿಕುಮಾರ್​ ಗಣಿಗ
ಶಾಸಕ ರವಿಕುಮಾರ್​ ಗಣಿಗ (ETV Bharat)
author img

By ETV Bharat Karnataka Team

Published : Nov 18, 2024, 7:23 PM IST

ಮಂಡ್ಯ: "ಕಾಂಗ್ರೆಸ್ ಶಾಸಕರಿಗೆ ಬಿಜೆಪಿಯಿಂದ 50 ಕೋಟಿ ಅಲ್ಲ, 100 ಕೋಟಿ ರೂಪಾಯಿ ಆಫರ್ ಬಂದಿತ್ತು" ಎಂದು ಶಾಸಕ ರವಿಕುಮಾರ್ ಗೌಡ ಗಣಿಗ ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಶಾಸಕರ ಭೇಟಿಯ ಆಡಿಯೋ, ವಿಡಿಯೋ ರೆಕಾರ್ಡ್‌ ಇದೆ. ಸಮಯ ನೋಡಿ ಬಿಡುಗಡೆ ಮಾಡುತ್ತೇವೆ. ಪ್ರತಿಪಕ್ಷ ಬಿಜೆಪಿ ನಾಯಕರು ಕಾಂಗ್ರೆಸ್ ಶಾಸಕರಿಗೆ ತಲಾ 50 ಕೋಟಿ ರೂಪಾಯಿ ಆಫರ್‌ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿರುವ ಮಾತು ಸತ್ಯ" ಎಂದರು

ಶಾಸಕ ರವಿಕುಮಾರ್​ ಗಣಿಗ (ETV Bharat)

"ನಮ್ಮ ಶಾಸಕರನ್ನು ವಿಪಕ್ಷದವರು ಎಲ್ಲಿ ಭೇಟಿ ಮಾಡಿದ್ದರು, ಯಾವ ಗೆಸ್ಟ್‌ಹೌಸ್‌ಗೆ ಬಂದಿದ್ದರು, ಯಾವ ವಿಮಾನ ನಿಲ್ದಾಣದಲ್ಲಿ ಸಿಕ್ಕಿದ್ದರು, ಯಾವ ಹೋಟೆಲ್​ನಲ್ಲಿ ಭೇಟಿ ಮಾಡಿದ್ದರು ಎಂಬುದರ ವಿಡಿಯೋ, ಆಡಿಯೋ ರೆಕಾರ್ಡ್‌ ಇದೆ. ಅದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದೇವೆ" ಎಂದು ಹೇಳಿದರು.

ಇದನ್ನೂ ಓದಿ: ನನಗೆ ಯಾವುದೇ ದುಡ್ಡಿನ ಆಮಿಷ ಬಂದಿಲ್ಲ : ಶಾಸಕ ಬಾಬಾಸಾಹೇಬ ಪಾಟೀಲ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.