ಬೆಂಗಳೂರು: ವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಲಾಯಿಸಿ ಅಪಘಾತವೆಸಗಿ ಬೈಕ್ ಸವಾರನ ಸಾವಿಗೆ ಕಾರಣರಾಗಿದ್ದ ಮಿನಿ ಬಸ್ ಚಾಲಕನಿಗೆ ಎಸಿಜೆಎಂ ನ್ಯಾಯಾಲಯವು 15 ತಿಂಗಳು ಶಿಕ್ಷೆ ಪ್ರಕಟಿಸಿದೆ.
ರಾಮನಗರ ಮೂಲದ ಸುನೀಲ್ ಕುಮಾರ್ (37) ಶಿಕ್ಷೆಗೊಳಗಾದ ಅಪರಾಧಿ. 2021ರಲ್ಲಿ ವೈಟ್ ಫೀಲ್ಡ್ ಸಂಚಾರ ಠಾಣಾ ವ್ಯಾಪ್ತಿಯ ವರ್ತೂರು ಕಡೆಯಿಂದ ಗುಂಜೂರು ಮಾರ್ಗವಾಗಿ ತನ್ನ ಮಿನಿ ಬಸ್ ಅನ್ನು ವೇಗವಾಗಿ ವಾಹನ ಚಲಾಯಿಸುತ್ತಿದ್ದ. ನಿಯಂತ್ರಣ ಕಳೆದುಕೊಂಡ ಸುನೀಲ್ ಮುಂದೆ ಬರುತ್ತಿದ್ದ ಹೊಸಕೋಟೆ ನಿವಾಸಿ ಕಲ್ಯಾಣ್ ಕುಮಾರ್ (25) ಬೈಕಿಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದಿಂದಾಗಿ ಕೋಮಾ ತಲುಪಿ ಮೂರು ತಿಂಗಳು ನಿರಂತರ ಚಿಕಿತ್ಸೆ ಪಡೆದರೂ ಫಲಕಾರಿಯಾಗದೇ ಮೃತಪಟ್ಟಿರುವ ಸಂಬಂಧ ವೈಟ್ ಫೀಲ್ಡ್ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಇದನ್ನೂ ಓದಿ: ಮುಸ್ಲಿಂ ದಂಪತಿಗೆ ವಕ್ಫ್ ಬೋರ್ಡ್ನಿಂದ ವಿವಾಹ ನೋಂದಣಿ ಪತ್ರ: ಉತ್ತರಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ
ಮೂರು ವರ್ಷಗಳ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ ಬಸ್ ಚಾಲಕನ ಅಜಾಗರೂಕತೆಯಿಂದ ವಾಹನ ಚಲಾಯಿಸಿರುವುದು ವಿಚಾರಣೆಯಲ್ಲಿ ಸಾಬೀತಾಗಿದ್ದರಿಂದ, ಅಪರಾಧಿಗೆ ಒಂದು ವರ್ಷ ಮೂರು ತಿಂಗಳು ಸಾದಾ ಜೈಲು ಶಿಕ್ಷೆ ಪ್ರಕಟಿಸಿ, 9 ಸಾವಿರ ರೂ. ದಂಡ ವಿಧಿಸಿದೆ. ದಂಡ ಕಟ್ಟದಿದ್ದರೆ ಹೆಚ್ಚುವರಿಯಾಗಿ 2 ತಿಂಗಳು 10 ದಿನ ಜೈಲು ಶಿಕ್ಷೆ ಅನುಭವಿಸಬೇಕು ಎಂದು ತೀರ್ಪಿನಲ್ಲಿ ನ್ಯಾಯಾಲಯ ತಿಳಿಸಿದೆ.
ಇದನ್ನೂ ಓದಿ: 22 ವರ್ಷ ಸಹಜೀವನ ನಡೆಸಿ ಅತ್ಯಾಚಾರ ಆರೋಪ: ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್