ETV Bharat / technology

ತನ್ನ ಎಲ್ಲ ಬಳಕೆದಾರರಿಗೆ ಚಾಟ್​ಜಿಪಿಟಿ ಸರ್ಚ್​ ವೈಶಿಷ್ಟ್ಯ ಉಚಿತವಾಗಿ ನೀಡುತ್ತಿದೆ OpenAI - SEARCHGPT OF OPENAI

SearchGPT Of OpenAI: ಸಾಫ್ಟ್‌ವೇರ್ ಕಂಪನಿ ಓಪನ್​ಎಐ ಇತ್ತೀಚೆಗೆ ತನ್ನ ಚಾಟ್‌ಜಿಪಿಟಿ ಸರ್ಚ್​ ಸೇವೆಯನ್ನು ಪ್ರಾರಂಭಿಸಿದೆ. ಈ ಮೊದಲು ಪಾವತಿಸಿದ ಬಳಕೆದಾರರಿಗೆ ಮಾತ್ರ ಲಭ್ಯವಿದ್ದ ಈ ಸರ್ಚ್​ ಸೇವೆಯನ್ನು ಈಗ ಉಚಿತವಾಗಿ ಬಳಸಬಹುದಾಗಿದೆ.

SEARCHGPT FEATURE INTRODUCED  SEARCHGPT SEARCH ENGINE  SEARCHGPT OF OPENAI  SEARCHGPT
ತನ್ನ ಎಲ್ಲ ಬಳಕೆದಾರರಿಗೆ ಚಾಟ್​ಜಿಪಿಟಿ ಸರ್ಚ್​ ವೈಶಿಷ್ಟ್ಯವನ್ನು ಉಚಿತವಾಗಿ ನೀಡುತ್ತಿದೆ ಓಪನ್​ಎಐ (Photo Credit: OpenAI)
author img

By ETV Bharat Tech Team

Published : 7 hours ago

SearchGPT Of OpenAI: ವಿಶ್ವದ ಅತ್ಯಂತ ಜನಪ್ರಿಯ ಎಐ ಕಂಪನಿಗಳಲ್ಲಿ ಒಂದಾದ ಓಪನ್​ಎಐ ಈ ವರ್ಷ ಚಾಟ್​ಜಿಪಿಟಿ ಸರ್ಚ್​ ಸಾಧನವನ್ನು ಹೊರ ತಂದಿದೆ. ಇದು ಗೂಗಲ್​ ಸರ್ಚ್​ ಎಂಜಿನ್‌ನೊಂದಿಗೆ ಸ್ಪರ್ಧಿಸಬಹುದು. ಇಲ್ಲಿಯವರೆಗೆ ಅದರ ಪ್ರವೇಶವನ್ನು ಚಾಟ್‌ಜಿಪಿಟಿ ಪ್ಲಸ್ ಚಂದಾದಾರಿಕೆಗೆ ಪಾವತಿಸುವ ಬಳಕೆದಾರರಿಗೆ ಮಾತ್ರ ನೀಡಲಾಗುತ್ತಿತ್ತು. ಆದರೆ, ಈಗ ಅದರ ಜಾಗತಿಕ ರೋಲ್‌ಔಟ್ ಅನ್ನು ಪ್ರಾರಂಭಿಸಲಾಗಿದೆ. ನವೆಂಬರ್‌ನಲ್ಲಿ ಪ್ರಾರಂಭವಾದ ಚಾಟ್‌ಜಿಪಿಟಿ ಸರ್ಚ್​ ಸೇವೆಯನ್ನು ಈಗ ಉಚಿತವಾಗಿ ಲಭ್ಯವಾಗುವಂತೆ ಮಾಡಲಾಗುತ್ತಿದೆ.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಆಧಾರಿತ ಸರ್ಚ್ ಇಂಜಿನ್ ಅನ್ನು ಬಳಸಲು ಯಾವುದೇ ಪಾವತಿ ಮಾಡುವ ಅಗತ್ಯವಿಲ್ಲ ಎಂಬುದು ದೊಡ್ಡ ವಿಷಯ. ಬಳಕೆದಾರರು ChatGPT ಸರ್ಚ್ ಇಂಜಿನ್ ಅನ್ನು ಸಂಪೂರ್ಣವಾಗಿ ಉಚಿತವಾಗಿ ಪ್ರವೇಶಿಸಬಹುದು ಮತ್ತು ಇದರಿಂದಾಗಿ ಗೂಗಲ್​ಗೆ ಸಮಸ್ಯೆ ಹೆಚ್ಚಾಗಬಹುದು. ಗೂಗಲ್ ಪ್ರಸ್ತುತ ವಿಶ್ವದ ಅತ್ಯಂತ ಜನಪ್ರಿಯ ಸರ್ಚ್ ಎಂಜಿನ್ ಆಗಿದ್ದು, ಜೆಮಿನಿ ಎಐ ಆಧಾರಿತ ಹಲವು ವೈಶಿಷ್ಟ್ಯಗಳನ್ನು ಇದರಲ್ಲಿ ಸೇರಿಸಲಾಗಿದೆ. ಈಗ ಬಳಕೆದಾರರು ಅದರ ಹುಡುಕಾಟ ಎಂಜಿನ್ ಅನ್ನು ChatGPT ಇಂಟರ್ಫೇಸ್‌ನಲ್ಲಿಯೇ ಪ್ರವೇಶಿಸಲು ಸಾಧ್ಯವಾಗುತ್ತದೆ.

ಈ ರೀತಿ ನೀವು ChatGPT ಸರ್ಚ್​ಗೆ ಎಂಟ್ರಿ ಕೊಡಬಹುದು:

  • ಮೊದಲನೆಯದಾಗಿ ನೀವು ನಿಮ್ಮ ಸ್ಮಾರ್ಟ್‌ಫೋನ್ ಅಥವಾ ಕಂಪ್ಯೂಟರ್‌ನಲ್ಲಿ ChatGPT ಅನ್ನು ತೆರೆಯಬೇಕು ಮತ್ತು ಲಾಗಿನ್ ಆಗಬೇಕು.
  • ಇದರ ನಂತರ ಇತ್ತೀಚಿನ ಅಪ್‌ಡೇಟ್ ಮಾಡಿದಾಗ ಹೊಸ ಗ್ಲೋಬ್ ಐಕಾನ್ ಅನ್ನು ತೋರಿಸಲಾಗುತ್ತದೆ.
  • ಹೊಸ ಐಕಾನ್ ಮೇಲೆ ಕ್ಲಿಕ್ ಮಾಡುವ ಮೂಲಕ ನೀವು ವೆಬ್ ಸರ್ಚ್​ ಸಕ್ರಿಯಗೊಳಿಸಬಹುದು.
  • ಈಗ ನೀವು ನಿಮಗೆ ಬೇಕಾದುದನ್ನು ಸರ್ಚ್​ ಮಾಡಬಹುದು ಮತ್ತು ಉತ್ತರಗಳನ್ನು ವೆಬ್ ಹುಡುಕಾಟದ ಮೂಲಕ ನೀವು ಪಡೆಯಬಹುದು.

ಕಂಪನಿಯು ಚಾಟ್‌ಜಿಪಿಟಿಯಲ್ಲಿ ಸುಧಾರಿತ ಮೋಡ್ ಸೇರಿಸಿದೆ. ಈ ವೈಶಿಷ್ಟ್ಯವು ಮೊದಲಿಗಿಂತ ಹೆಚ್ಚು ಸುಧಾರಿತವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಚಾಟ್​ಜಿಪಿಟಿ ಮೊಬೈಲ್ ಅಪ್ಲಿಕೇಶನ್‌ನಲ್ಲಿ ನೀವು ಹೊಸ ಮ್ಯಾಪ್ಸ್​ ವೈಶಿಷ್ಟ್ಯಕ್ಕೆ ಪ್ರವೇಶವನ್ನು ಸಹ ಪಡೆಯುತ್ತೀರಿ. ಈ ವೈಶಿಷ್ಟ್ಯದೊಂದಿಗೆ ನೀವು ರೆಸ್ಟೋರೆಂಟ್‌ಗಳು ಮತ್ತು ಇತರ ಸ್ಥಳಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ಸಾಧ್ಯವಾಗುತ್ತದೆ. ಮುಂದಿನ ಕೆಲವು ವಾರಗಳಲ್ಲಿ ಹೊಸ ವೈಶಿಷ್ಟ್ಯವನ್ನು ಎಲ್ಲರಿಗೂ ಹೊರತರಲಾಗುವುದು.

ಸ್ಕ್ರೀನ್ ಶೇರಿಂಗ್ ಸೌಲಭ್ಯವೂ ಉಂಟು: ರಿಯಲ್-ಟೈಮ್ ವಿಡಿಯೋ ಮತ್ತು ಸ್ಕ್ರೀನ್ ಶೇರಿಂಗ್ ಸೌಲಭ್ಯವನ್ನು ಓಪನ್​ಎಐ ಒದಗಿಸಿದೆ. ಸುಧಾರಿತ ವಾಯ್ಸ್​ ಮೋಡ್‌ನೊಂದಿಗೆ ChatGPT AI ಚಾಟ್‌ಬಾಟ್ ಅನ್ನು ಇದರಲ್ಲಿ ಪರಿಚಯಿಸಲಾಗಿದೆ. ಸ್ಕ್ರೀನ್​ ಶೇರಿಂಗ್​ ಮೂಲಕ ಬಳಕೆದಾರರು ಗಣಿತದ ಪ್ರಶ್ನೆಗಳಿಗೆ ಉತ್ತರಗಳನ್ನು ಸುಲಭವಾಗಿ ಹುಡುಕಬಹುದು. ಚಾಟ್​ಜಿಪಿಟಿಯ ಚಾಟ್ ವಿಂಡೋದ ಕೆಳಭಾಗದಲ್ಲಿ ವಿಡಿಯೋ ಐಕಾನ್ ಕಾಣಿಸಿಕೊಳ್ಳುತ್ತದೆ. ಇದರ ಮೇಲೆ ಕ್ಲಿಕ್ ಮಾಡುವ ಮೂಲಕ ವಿಡಿಯೋ ಹುಡುಕಬಹುದು. ಸ್ಕ್ರೀನ್​ ಶೇರಿಂಗ್​ಗಾಗಿ ನೀವು ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಬೇಕು. ಇದಾದ ನಂತರ ಶೇರ್ ಸ್ಕ್ರೀನ್ ಆಯ್ಕೆ ಕಾಣಿಸುತ್ತದೆ. ಅದರ ಮೂಲಕ ನೀವು ಶೇರ್​ ಮಾಡಿಕೊಳ್ಳಬಹುದು.

ಈ ಹೊಸ ಸರ್ಚ್​ ಸಾಧನವು iOS ಜೊತೆಗೆ Android ಮೊಬೈಲ್ ಅಪ್ಲಿಕೇಶನ್ ಬಳಕೆದಾರರಿಗೆ ಲಭ್ಯವಿರುತ್ತದೆ. ಈ ಚಾಟ್​ಜಿಪಿಟಿ ತಂಡಗಳು, ಪ್ಲಸ್ ಮತ್ತು ಪ್ರೊ ಬಳಕೆದಾರರಿಗೆ ಲಭ್ಯವಿರುತ್ತದೆ. ಇದನ್ನು ChatGPIT ಎಂಟರ್‌ಪ್ರೈಸಸ್ ಮತ್ತು ಶಿಕ್ಷಣ ಚಂದಾದಾರರಿಗೆ ಹೊರತರಲಾಗುವುದು. ಅನೇಕ ಯೂರೊಪಿಯನ್​ ಒಕ್ಕೂಟ ದೇಶಗಳಲ್ಲಿ ಸುಧಾರಿತ ವಾಯ್ಸ್​ ಮೋಡ್ ಲಭ್ಯವಿರುವುದಿಲ್ಲ ಎಂದು ಕಂಪನಿ ತಿಳಿಸಿದೆ.

ಓದಿ: ವಾಟ್ಸ್​ಆ್ಯಪ್​ ​, ಲ್ಯಾಂಡ್​ಲೈನ್​ನಲ್ಲಿ ಬಳಸಬಹುದು ಚಾಟ್​ಜಿಪಿಟಿ!: ಅದು ಯಾವ ರೀತಿ ಅಂತೀರಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.