ETV Bharat / technology

ಅನ್​ಲಿಮಿಟೆಡ್​ ಫನ್​, ಎಫೆಕ್ಟ್ಸ್​, ಅನಿಮೆಷನ್ಸ್​: ಹೊಚ್ಚಹೊಸ ವಾಟ್ಸ್​ಆ್ಯಪ್​ ​ ನ್ಯೂ ಇಯರ್​ ಫೀಚರ್ಸ್​ ಹೇಗಿದೆ ಗೊತ್ತಾ? - WHATSAPP NEW YEAR EFFECTS

WhatsApp New Year Effects: ವಾಟ್ಸ್​ಆ್ಯಪ್​ ಹೊಚ್ಚಹೊಸ ಫೀಚರ್ಸ್​ ಪರಿಚಯಿಸುತ್ತಿದೆ. ನ್ಯೂ ಇಯರ್​ ಫೀಚರ್ಸ್​ನಲ್ಲಿ ಹತ್ತು ಹಲವು ಹೊಸ ವೈಶಿಷ್ಟ್ಯಗಳು ಒಳಗೊಂಡಿವೆ. ಇದರ ಬಗೆಗಿನ ಮಾಹಿತಿ ಇಲ್ಲಿದೆ.

WHATSAPP NEW ANIMATION FEATURE  WHATSAPP NEW YEAR EFFECTS  WHATSAPP NEW CALLING EFFECTS  WHATSAPP NEW YEAR THEME EFFECTS
ಹೊಚ್ಚಹೊಸ ವಾಟ್ಸಾಪ್​ ನ್ಯೂ ಇಯರ್​ ಫೀಚರ್ಸ್​ ಹೇಗಿದೆ ಗೊತ್ತಾ? (Photo Credit- WhatsApp)
author img

By ETV Bharat Tech Team

Published : Dec 21, 2024, 11:09 AM IST

WhatsApp New Year Effects: ಇನ್ನು ಕೆಲವೇ ದಿನಗಳಲ್ಲಿ ಈ ವರ್ಷ ಮುಗಿಯಲಿದೆ. ನಾವೆಲ್ಲರೂ ಹೊಸ ವರ್ಷಕ್ಕೆ ಕಾಲಿಡಲಿದ್ದೇವೆ. ಇನ್ನು ಕ್ರಿಸ್‌ಮಸ್‌ಗೂ ಹೆಚ್ಚು ದಿನಗಳು ಬಾಕಿಯಿಲ್ಲ. ಸದ್ಯ ಎಲ್ಲರೂ ಕ್ರಿಸ್​ಮಸ್ ಮತ್ತು ಹೊಸ ವರ್ಷದ ಹಬ್ಬದ ರಜೆ ಸವಿಯುವ ಮೂಡ್​ನಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ವಿಡಿಯೋ ಕಾಲ್, ಚಾಟ್​ಗಳಲ್ಲಿ ಹಬ್ಬದ ವಾತಾವರಣ ತರಲು ವಾಟ್ಸ್​ಆ್ಯಪ್​ ​ ರೆಡಿಯಾಗಿದೆ.

ಇದಕ್ಕಾಗಿ ಹೊಸ ವರ್ಷದ ಮುನ್ನವೇ ಫೆಸ್ಟಿವಲ್ ಥೀಮ್‌ನಲ್ಲಿ ಕೆಲವು ಫನ್ನಿ ಫೀಚರ್‌ಗಳನ್ನು ವಾಟ್ಸ್​ಆ್ಯಪ್​ ತಂದಿದೆ. ಕೆಲ ದಿನಗಳ ಕಾಲ ಬಳಕೆದಾರರಿಗೆ ಕಾಲಿಂಗ್ ಎಫೆಕ್ಟ್, ಅನಿಮೇಷನ್ ಜೊತೆಗೆ ಸ್ಟಿಕ್ಕರ್​ಗಳನ್ನು ಪರಿಚಯಿಸಿತು. ಅಷ್ಟೇ ಅಲ್ಲ ವಾಟ್ಸ್​​​​ಆ್ಯಪ್​ ಕಂಪನಿ​ ವಿಡಿಯೋ ಕರೆಗಳನ್ನು ಮಾಡಲು ಮತ್ತು ಈ ಹಬ್ಬದ ಋತುವಿನಲ್ಲಿ ಹೆಚ್ಚು ಆನಂದದಾಯಕವಾಗಿ ಚಾಟ್ ಮಾಡಲು ಪ್ರಯತ್ನಿಸುತ್ತಿದೆ.

ವಾಟ್ಸಾಪ್​ನಲ್ಲಿ ಹೊಸ ವರ್ಷದ ವೈಶಿಷ್ಟ್ಯಗಳು: ಈ ಕ್ರಿಸ್​ಮಸ್ ಮತ್ತು ಹೊಸ ವರ್ಷದ ರಜಾದಿನಗಳಲ್ಲಿ ವಾಟ್ಸಾಪ್​ ಬಳಕೆದಾರರು ಹಬ್ಬದ ಬ್ಯಾಕ್​ಗ್ರೌಂಡ್​ ಮತ್ತು ಫಿಲ್ಟರ್‌ಗಳನ್ನು ಬಳಸಬಹುದು ಎಂದು ಕಂಪನಿ ಹೇಳಿದೆ. ಇವುಗಳೊಂದಿಗೆ ವಾಟ್ಸ್​ಆ್ಯಪ್​​ನಲ್ಲಿ ಚಾಟ್ ಮಾಡುವಾಗ ಬಳಸಬಹುದಾದ ಅನಿಮೇಷನ್​ಗಳನ್ನೂ ಹೊರ ತರಲಾಗಿದೆ.

ವಾಟ್ಸ್​ಆ್ಯಪ್​ನಲ್ಲಿ ವಿಡಿಯೋ ಕರೆಗಳನ್ನು ಮಾಡುವಾಗ ನೀವು ಹೊಸ ವರ್ಷದ ಥೀಮ್‌ನೊಂದಿಗೆ ಹೊಸ ಕಾಲಿಂಗ್​ ಎಫೆಕ್ಟ್​ಗಳನ್ನು ಬಳಸಬಹುದು. ಹೊಸ ವರ್ಷದ ಶುಭಾಶಯಗಳನ್ನು ವ್ಯಕ್ತಪಡಿಸಲು ಸ್ಟಿಕ್ಕರ್‌ಗಳನ್ನು ಒದಗಿಸಲಾಗಿದೆ ಎಂದು ವಾಟ್ಸ್​ಆ್ಯಪ್​ ಹೇಳಿದೆ.

ಅಷ್ಟೇ ಅಲ್ಲ ವಾಟ್ಸ್​​ಆ್ಯಪ್​​ ಕೆಲವು ಹೊಸ ಸ್ಟಿಕ್ಕರ್‌ಗಳನ್ನು ಸಹ ಪರಿಚಯಿಸಿದೆ. ಹೊಸ ವರ್ಷದ ಥೀಮ್‌ಗೆ ಹೊಂದಿಕೆಯಾಗುವ ಅವತಾರ್ ಸ್ಟಿಕ್ಕರ್‌ಗಳೊಂದಿಗೆ ಕ್ಯುರೇಟೆಡ್ ನ್ಯೂ ಇಯರ್ಸ್ ಈವ್ (NYE) ಸ್ಟಿಕ್ಕರ್ ಪ್ಯಾಕ್ ಅನ್ನು ಪ್ಲಾಟ್‌ಫಾರ್ಮ್ ತಂದಿದೆ. ರಜಾದಿನದ ಶುಭಾಶಯಗಳನ್ನು ಮೋಜು ಮತ್ತು ಇಂಟರಾಕ್ಟಿವ್​ ರೀತಿಯಲ್ಲಿ ಕಳುಹಿಸಲು ಈ ವೈಶಿಷ್ಟ್ಯಗಳು ಉತ್ತಮ ಮಾರ್ಗವಾಗಿದೆ ಎಂದು ವಾಟ್ಸ್​ಆ್ಯಪ್​ ​ ಹೇಳಿದೆ.

ವಾಟ್ಸ್​ಆ್ಯಪ್​ ಇತ್ತೀಚೆಗೆ ನಾಲ್ಕು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಿತು. ರಜಾ ಕಾಲವಾಗಿರುವುದರಿಂದ ಬಳಕೆದಾರರ ಸಂವಹನವನ್ನು ಇನ್ನಷ್ಟು ಸುಧಾರಿಸಲು ಇವುಗಳನ್ನು ತರಲಾಗಿದೆ. ಇವುಗಳೊಂದಿಗೆ ನೀವು ಆಡಿಯೋ ಮತ್ತು ವಿಡಿಯೋ ಕಾಲಿಂಗ್ ಸಮಯದಲ್ಲಿ ಉತ್ತಮ ಅನುಭವ ಪಡೆಯಬಹುದು. ವಾಟ್ಸ್​ಆ್ಯಪ್​ನಲ್ಲಿ ಹೊಸ ವೈಶಿಷ್ಟ್ಯಗಳನ್ನು ಸೇರಿಸುವುದರೊಂದಿಗೆ, ಗ್ರೂಪ್​ ಕಾಲಿಂಗ್​ಗೆ ಆಯ್ದ ಜನರು ಮಾತ್ರ ಅಧಿಸೂಚನೆಯನ್ನು ಸ್ವೀಕರಿಸುತ್ತಾರೆ. ಇದರೊಂದಿಗೆ ಇದು ವಿಡಿಯೋ ಕರೆಗಳಲ್ಲಿ ಹೊಸ ಎಫೆಕ್ಟ್‌ಗಳು, ಉತ್ತಮ ಡೆಸ್ಕ್‌ಟಾಪ್ ಕರೆ, ಉತ್ತಮ ವಿಡಿಯೋ ಗುಣಮಟ್ಟದ ಸೌಲಭ್ಯವನ್ನು ಸಹ ಒದಗಿಸುತ್ತದೆ.

ಓದಿ: ವಾಟ್ಸಾಪ್​ನಲ್ಲಿ ಮತ್ತೊಂದು ಇನ್ಟ್ರೆಸ್ಟಿಂಗ್​ ಫೀಚರ್- ಇನ್ಮುಂದೆ ಗ್ರೂಪ್​ ಚಾಟ್​ನಲ್ಲಿ ನೋ ಕನ್ಫೂಷನ್​!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.